ಪುನೀತ್​ ಒಂದು ಹೃದಯ, ಆತ ಎಲ್ಲರ ಹೃದಯದಲ್ಲೂ ಬೆರೆತು ಹೋಗಿದ್ದಾನೆ; ತಮ್ಮನನ್ನು ನೆನೆದು ಭಾವುಕರಾದ ನಟ ಶಿವರಾಜ್​ಕುಮಾರ್

Navanakshatra Sanman 2021: ಅಪ್ಪು ಒಂದು ಹೃದಯ. ಆ ಹೃದಯ ಎಲ್ಲ ಹೃದಯಗಳಲ್ಲೂ ಹೋಗಿ ಸೇರಿಕೊಂಡಿದೆ. ಅವನ ದೇಹ ಈ ಜಗತ್ತಿನಲ್ಲಿ ಇಲ್ಲದಿರಬಹುದು. ಆದರೆ, ಆತನ ಹೃದಯ ಎಲ್ಲರ ಹೃದಯದಲ್ಲೂ ಇದ್ದೇ ಇರುತ್ತದೆ ಎಂದು ಟಿವಿ9 ಕನ್ನಡದ ನವನಕ್ಷತ್ರ ಕಾರ್ಯಕ್ರಮದಲ್ಲಿ ನಟ ಶಿವರಾಜ್​ಕುಮಾರ್​ ಪುನೀತ್​ ರಾಜ್​ಕುಮಾರ್​​ನನ್ನು ನೆನೆದಿದ್ದಾರೆ.

ಪುನೀತ್​ ಒಂದು ಹೃದಯ, ಆತ ಎಲ್ಲರ ಹೃದಯದಲ್ಲೂ ಬೆರೆತು ಹೋಗಿದ್ದಾನೆ; ತಮ್ಮನನ್ನು ನೆನೆದು ಭಾವುಕರಾದ ನಟ ಶಿವರಾಜ್​ಕುಮಾರ್
ನವನಕ್ಷತ್ರ ಕಾರ್ಯಕ್ರಮದಲ್ಲಿ ನಟ ಶಿವ ರಾಜ್​ಕುಮಾರ್​ಗೆ ಸನ್ಮಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 04, 2022 | 6:41 PM

ಚಿತ್ರರಂಗದಲ್ಲಿ ಮಾಡಿದ ಸಾಧನೆಗೆ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರಿಗೆ ಟಿವಿ-9ನಿಂದ ಆಯೋಜಿಸಲಾಗಿದ್ದ ನವ ನಕ್ಷತ್ರ-2021 (Navanakshatra Sanman 2021) ಕಾರ್ಯಕ್ರಮದಲ್ಲಿ  ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಪುನೀತ್​ ರಾಜ್​ಕುಮಾರ್​ ನಮ್ಮನ್ನು ಅಗಲಿರುವುದರಿಂದ ಅವರ ಪರವಾಗಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್ (Dr. Shiva Rajkumar) ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಟಿವಿ9 ಕರ್ನಾಟಕ ವ್ಯವಸ್ಥಾಪಕ ಸಂಪಾದಕ ಆರ್.​ ಶ್ರೀಧರನ್, ಸಿದ್ದಗಂಗಾ ಮಠದ ಶ್ರೀಗಳು ನಟ ಶಿವರಾಜ್​ ಕುಮಾರ್ ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕಾರದ ಬಳಿಕ ತಮ್ಮನನ್ನು ನೆನೆದು ಭಾವುಕರಾದ ಶಿವರಾಜ್​ಕುಮಾರ್, ಈ ಸಂದರ್ಭದಲ್ಲಿ ಮಾತನಾಡೋಕೆ ಬಹಳ ಕಷ್ಟವಾಗುತ್ತದೆ. ಏನು ಮಾತನಾಡಬೇಕೆಂದೇ ತೋಚದ ಸ್ಥಿತಿಯಲ್ಲಿ ನಾನಿದ್ದೇನೆ. ಪುನೀತ್ ನಿಧನದಿಂದ ನಮಗೆ ಎಷ್ಟು ನಷ್ಟವಾಗಿದೆಯೋ ಅಷ್ಟೇ ನಷ್ಟ, ನೋವು ಅವರ ಅಭಿಮಾನಿಗಳಿಗೂ ಆಗಿದೆ. ಅಪ್ಪು ಬಗ್ಗೆ ಎರಡು ಮಾತು ಹೇಳೋದಾದರೆ ಏನು ಹೇಳುತ್ತೀರ? ಎಂದು ಸಾಕಷ್ಟು ಜನರು ನನ್ನನ್ನು ಕೇಳುತ್ತಾರೆ. ಅಪ್ಪು ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವನೊಂದು ಹೃದಯ. ಆ ಹೃದಯ ಎಲ್ಲ ಹೃದಯಗಳಲ್ಲೂ ಹೋಗಿ ಸೇರಿಕೊಂಡಿದೆ. ಅವನ ದೇಹ ಈ ಜಗತ್ತಿನಲ್ಲಿ ಇಲ್ಲದಿರಬಹುದು. ಆದರೆ, ಆತನ ಹೃದಯ ಎಲ್ಲರ ಹೃದಯದಲ್ಲೂ ಇದ್ದೇ ಇರುತ್ತದೆ. ಆ ಹೃದಯದೊಳಗೆ ಆತ ಜೀವಂತವಾಗಿರುತ್ತಾನೆ. ಅವನು ಮಾಡಿದ ಪ್ರತಿಯೊಂದು ಕಾರ್ಯದ ಮೂಲಕ ಆತ ಜೀವಂತವಾಗಿರುತ್ತಾನೆ ಎಂದಿದ್ದಾರೆ.

ನಟ ಶಿವರಾಜ್​ಕುಮಾರ್

ನೀವು ಡಾ. ರಾಜ್​ಕುಮಾರ್​ ಅವರಂತಹ ತಂದೆಯನ್ನು ಪಡೆಯೋಕೆ ಪುಣ್ಯ ಮಾಡಿದ್ರಿ ಅಂತ ಎಲ್ಲರೂ ಹೇಳುತ್ತಾರೆ. ಆದರೆ, ಕೇವಲ ತಂದೆಯಷ್ಟೇ ಅಲ್ಲ ಪುನೀತ್​ನಂತಹ ತಮ್ಮನನ್ನು ಪಡೆಯೋಕೂ ನಾನು ಬಹಳ ಪುಣ್ಯ ಮಾಡಿದ್ದೆ. ಪುನೀತ್​ ನಮನ ಕಾರ್ಯಕ್ರಮಕ್ಕೆ ಬಂದರೆ ನನಗೆ ನೋವಾಗುತ್ತೆ, ಅಪ್ಪುವನ್ನು ಹೀಗೆ ಫೋಟೋದಲ್ಲಿ ನೋಡೋಕಾಗಲ್ಲ ಅಂತ ಇಂತಹ ಕಾರ್ಯಕ್ರಮಗಳಿಗೆ ಹೋಗೋಕೆ ಈಗೀಗ ಹಿಂದೇಟು ಹಾಕುತ್ತೇನೆ. ಆದರೆ, ನಿಮ್ಮೆಲ್ಲರ ಪ್ರೀತಿಯ ಕರೆಗೆ ಓಗೊಟ್ಟು ಇಲ್ಲಿಗೆ ಬಂದೆ ಎಂದಿದ್ದಾರೆ.

ನಟ ಶಿವರಾಜ್​ಕುಮಾರ್

ಅಪ್ಪುವನ್ನು ದಯವಿಟ್ಟು ಯಾರೂ ದೂರ ಕಳುಹಿಸಬೇಡಿ. ಅವನನ್ನು ನಿಮ್ಮ ಹೃದಯದಲ್ಲಿ ಭದ್ರವಾಗಿಟ್ಟುಕೊಳ್ಳಿ. ಅವನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಿಕೊಂಡು ಹೋದರೆ ಅವನನ್ನು ಜೀವಂತವಾಗಿರಿಸಿಕೊಂಡಂತೆ ಎಂದು ನಟ ಶಿವರಾಜ್​ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಭಾಜನರಾದ ಶಿವರಾಜ್​ಕುಮಾರ್

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ