Navanakshatra Sanman 2021: ಪ್ರಶಸ್ತಿ ನೀಡುವುದರಿಂದ ಸಾಧಕರಿಗೂ, ಸಾಧಿಸುವವರಿಗೂ ಪ್ರೋತ್ಸಾಹ ಸಿಗುತ್ತದೆ; ರಘು ದೀಕ್ಷಿತ್

Navanakshatra Sanman 2021: ಕಷ್ಟ, ಸವಾಲುಗಳನ್ನೆಲ್ಲ ದಾಟಿ ಸಾಧನೆ ಮಾಡಿದವರನ್ನು ನೋಡಿದ ಬೇರೆಯವರಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಹೆಚ್ಚು ಪ್ರಚಾರಕ್ಕೆ ಬಾರದ ಸಾಧಕರನ್ನು ಗುರುತಿಸುವುದರಿಂದ ಪ್ರಶಸ್ತಿ ಸಿಕ್ಕಿದವರಿಗೂ ಇನ್ನಷ್ಟು ಸ್ಫೂರ್ತಿ ಸಿಕ್ಕಿದಂತಾಗುತ್ತದೆ. ಇನ್ನಷ್ಟು ಸಾಧನೆ ಮಾಡಬೇಕೆಂಬ ಉತ್ಸಾಹ ಬರುತ್ತದೆ ಎಂದು ಗಾಯಕ ರಘು ದೀಕ್ಷಿತ್ ಹೇಳಿದ್ದಾರೆ.

Navanakshatra Sanman 2021: ಪ್ರಶಸ್ತಿ ನೀಡುವುದರಿಂದ ಸಾಧಕರಿಗೂ, ಸಾಧಿಸುವವರಿಗೂ ಪ್ರೋತ್ಸಾಹ ಸಿಗುತ್ತದೆ; ರಘು ದೀಕ್ಷಿತ್
ರಘು ದೀಕ್ಷಿತ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 04, 2022 | 7:25 PM

ಬೆಂಗಳೂರು: ಟಿವಿ-9 ಕನ್ನಡ ಸಂಸ್ಥೆ ಆರಂಭವಾಗಿ 15 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕ ಸಂಜಿತ್ ಹೆಗ್ಡೆ ಅವರಿಗೆ ಪ್ರಶಸ್ತಿ ನೀಡಿದ ಗಾಯಕ ರಘು ದೀಕ್ಷಿತ್ ಟಿವಿ-9 ಕನ್ನಡದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿ ಹೆಚ್ಚು ಪ್ರಚಾರಕ್ಕೆ ಬಾರದ ಸಾಧಕರನ್ನು ಗುರುತಿಸುವುದರಿಂದ ಪ್ರಶಸ್ತಿ ಸಿಕ್ಕಿದವರಿಗೂ ಇನ್ನಷ್ಟು ಸ್ಫೂರ್ತಿ ಸಿಕ್ಕಿದಂತಾಗುತ್ತದೆ. ಇನ್ನಷ್ಟು ಸಾಧನೆ ಮಾಡಬೇಕೆಂಬ ಉತ್ಸಾಹ ಬರುತ್ತದೆ. ಅವರು ತಮ್ಮ ಸಾಧನೆಯ ಹಿಂದೆ ಸಾಕಷ್ಟು ಅಡೆತಡೆಗಳನ್ನು ನೋಡಿರುತ್ತಾರೆ. ಅದರ ಮಧ್ಯೆ ಯಾರಾದರೂ ಬಂದು ನೀವು ಮಾಡುತ್ತಿರುವ ಕೆಲಸ ಚೆನ್ನಾಗಿದೆ ಎಂದು ಹೇಳಿದರೆ ಅದು ಅವರಿಗೆ ಇನ್ನಷ್ಟು ಉತ್ತೇಜನ ಕೊಡುತ್ತದೆ ಎಂದಿದ್ದಾರೆ.

ಹಾಗೇ, ಕಷ್ಟ, ಸವಾಲುಗಳನ್ನೆಲ್ಲ ದಾಟಿ ಸಾಧನೆ ಮಾಡಿದವರನ್ನು ನೋಡಿದ ಬೇರೆಯವರಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಅವರನ್ನು ನೋಡಿ ಯುವಜನಾಂಗದವರು ಸ್ಫೂರ್ತಿಯಾಗಿ ತೆಗೆದುಕೊಳ್ಳಬಹುದು. ಹಾಗಾಗಿ, ಸಾಧನೆ ಮಾಡಿದವರಿಗೂ, ಸಾಧನೆ ಮಾಡುವವರಿಗೂ ಈ ರೀತಿಯ ಪ್ರಶಸ್ತಿಗಳಿಂದ ಉತ್ತೇಜನ ಸಿಕ್ಕಂತಾಗುತ್ತದೆ. ಅವರೇ ಸಾಧಿಸಿದ್ದಾರೆ, ನಾವು ಮಾಡಲು ಆಗುವುದಿಲ್ಲವೇ ಎಂದು ಯುವಪೀಳಿಗೆಯವರು ಸಾಧಕರನ್ನು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಟಿವಿ-9 ಮಾಡುತ್ತಿರುವ ನವನಕ್ಷತ್ರ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾದುದು. ಪ್ರತಿವರ್ಷವೂ ಈ ರೀತಿಯ ತೆರೆಮರೆಯ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವಂತಾಗಲಿ. ಇನ್ನಷ್ಟು ಹೊಸ ಸಾಧಕರಿಗೆ ಈ ಕಾರ್ಯಕ್ರಮ ವೇದಿಕೆಯಾಗಲಿ ಎಂದು ರಘು ದೀಕ್ಷಿತ್ ಹಾರೈಸಿದ್ದಾರೆ.

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ನವ ನಕ್ಷತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ತಮ್ಮದೇ ಆದ ಭತ್ತದ ತಳಿಯನ್ನು ಕಂಡುಹಿಡಿದವರು, ಪ್ಯಾರಾ ಒಲಂಪಿಕ್ಸ್​ನಲ್ಲಿ ಪದಕ ಗೆದ್ದವರು ಸೇರಿದಂತೆ 9 ಸಾಧಕರಿಗೆ ಟಿವಿ-9 ವಾಹಿನಿಯಿಂದ ಸನ್ಮಾನ ಮಾಡಿ, ಪ್ರಶಸ್ತಿ ನೀಡಲಾಗುತ್ತಿದೆ.

ಟಿವಿ-9 ಕನ್ನಡ ಸುದ್ದಿ ವಾಹಿನಿ ಪ್ರಾರಂಭವಾಗಿ 15 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ  ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ವಲಯದ 9 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರ ಸಾಧನೆಗೆ ಮನ್ನಣೆ ನೀಡುವ ಕಾರ್ಯಕ್ರಮ ಇದಾಗಿದ್ದು, ಎಲೆಮರೆಯ ಸಾಧಕರು, ಯುವಪೀಳಿಗೆಯ ಸಾಧಕರನ್ನು ಗೌರವಿಸಲಾಯಿತು.

ಇದನ್ನೂ ಓದಿ: ಪುನೀತ್​ ಒಂದು ಹೃದಯ, ಆತ ಎಲ್ಲರ ಹೃದಯದಲ್ಲೂ ಬೆರೆತು ಹೋಗಿದ್ದಾನೆ; ತಮ್ಮನನ್ನು ನೆನೆದು ಭಾವುಕರಾದ ನಟ ಶಿವರಾಜ್​ಕುಮಾರ್

ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಟಿವಿ 9 ಎಲ್ಲರಿಗೂ ಮಾದರಿ: ಸಂಗೀತ ನಿರ್ದೇಶಕ ಚರಣ್ ರಾಜ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ