AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ದಯಾಮರಣ ಪತ್ರ ಬರೆದು ಸಹಿ ಹಾಕಿದ ಒಂದೇ ಕುಟುಂಬದ 26 ಸದಸ್ಯರು

ನ್ಯಾಯ ಕೊಡಿ, ಇಲ್ಲವೇ ದಯಾಮರಣ ನೀಡಿ ಎಂದು ಒಂದೇ ಕುಟುಂಬದ 26 ಸದಸ್ಯರು ದಯಾಮರಣ ಪತ್ರಕ್ಕೆ ಸಹಿ ಹಾಕಿದ ಘಟನೆ ನೆಲಮಂಗಲ ತಹಸಿಲ್ದಾರ್ ಕಚೇರಿಯಲ್ಲಿ ನಡೆದಿದೆ.

ನೆಲಮಂಗಲ: ದಯಾಮರಣ ಪತ್ರ ಬರೆದು ಸಹಿ ಹಾಕಿದ ಒಂದೇ ಕುಟುಂಬದ 26 ಸದಸ್ಯರು
ದಯಾಮರಣದ ಪತ್ರಬರೆದು ಸಹಿ ಹಾಕಿದ ಒಂದೇ ಕುಟುಂಬದ 26 ಸದಸ್ಯರು
TV9 Web
| Edited By: |

Updated on:Nov 15, 2022 | 2:41 PM

Share

ನೆಲಮಂಗಲ: ಜಮೀನು ವಿಚಾರದಲ್ಲಿ ನಮಗೆ ವಂಚನೆ ಮಾಡಲಾಗಿದ್ದು, ದಯವಿಟ್ಟು ನ್ಯಾಯ ಕೊಡಿ, ಇಲ್ಲವೇ ದಯಾಮರಣ ನೀಡಿ ಎಂದು ಒಂದೇ ಕುಟುಂಬದ ಇಪ್ಪತ್ತಕ್ಕೂ ಹೆಚ್ಚು ಸದಸ್ಯರು ದಯಾಮರಣ ಪತ್ರಕ್ಕೆ ಸಹಿ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ತಾಲೂಕು ಕಚೇರಿ ಬಳಿ ನಡೆದಿದೆ. ದಾಖಲಾತಿಗಳನ್ನ ಹಿಡಿದು ತಹಶೀಲ್ದಾರ್ ಕಚೇರಿಗೆ ಬಂದ ಕುಟುಂಬದ 26 ಸದಸ್ಯರಿಂದ ತಹಶೀಲ್ದಾರ್ ಅವರು ಆಹವಾಲನ್ನು ಸ್ವೀಕರಿಸಿದರು. ಈ ವೇಳೆ ನೊಂದ ಕುಟುಂಬ, ನಮಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟಿದ್ದಾರೆ. ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟ ಗ್ರಾಮದ ನಿವಾಸಿ ಗಂಗಹನುಮಕ್ಕ ಎಂಬುವವರ ಕುಟುಂಬದ 26 ಸದಸ್ಯರು ನೆಲಮಂಗಲ ತಹಶೀಲ್ದಾರ್ ಕಚೇರಿಯ ಮುಂದೆ ನಿಂತು ದಿಕ್ಕೆ ತೋಚದೆ ದಯಾಮರಣದ ಪತ್ರಬರೆದು ಎಲ್ಲರು ಸಹಿಹಾಕಿ ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

ತಡಸಿಗಟ್ಟ ಗ್ರಾಮದಲ್ಲಿನ ಸರ್ವೆ ನಂಬರ್ 73ರಲ್ಲಿ ತಮ್ಮ 3 ಎಕರೆ 22 ಕುಂಟೆ ಜಮೀನನ್ನು ಇದೇ ಗ್ರಾಮದ ನಿವಾಸಿ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ ಗಂಗಹನುಮಕ್ಕನ ತಂದೆ ದಿ. ಭೈರಣ್ಣ 1981ರ ಜೂ10 ರಂದು 3,500 ರೂ.ಗಳಿಗೆ ವಾಯಿದೇ ಕ್ರಯಕ್ಕೆ ಕೊಟ್ಟಿದ್ದರು. ಆದರೆ ರಾಜಗೋಪಾಲಯ್ಯ ನಕಲಿ ದಾಖಲೆಗಳನ್ನ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು, ತನ್ನ ರಾಜಕೀಯ ಹಾಗೂ ಹಣದ ಬೇಂಬಲದಿಂದ ಶುದ್ದ ಕ್ರಯ ಮಾಡಿಕೊಂಡು ದೋಖಾ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇವರ ತಂದೆ ಕಾಲವಾದ ನಂತರ ಜಮೀನು ವಾಪಸ್ ಪಡೆಯಲು ತೆರಳಿದಾಗ ಇವತ್ತು ನಾಳೆ ಅಂತ ಕಾಲಹರಣ ಮಾಡಿಕೊಂಡು 2012ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿ ಈ ದಾವೆ ವಜಾಗೊಳಿಸಿ ಅವನ ಹೆಸರಿಗೆ ಮಾಡಿಕೊಂಡಿರುತ್ತಾನೆ. ಈ ವಿಚಾರ ಭೈರಣ್ಣನ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ನ್ಯಾಯ ಸಿಗುತ್ತದೆ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಅಲ್ಲೂ ಕೂಡ ರಾಜಗೋಪಾಲಯ್ಯನ ನಕಲಿ ದಾಖಲೆಗಳ ರಾಜ್ಯಭಾರ ನಡೆಯುತ್ತದೆ.

ಸ್ಥಳೀಯ ತ್ಯಾಮಗೊಂಡ್ಲು ಠಾಣೆಗೆ ರಾಜಗೋಪಾಲಯ್ಯನ ಬಳಿ ಇರುವ ಶುದ್ಧ ಕ್ರಯ ಪತ್ರದ ಮೇಲೆ ಇರುವ ಸಹಿ ಅಸಲಿ ಅಥವಾ ನಕಲಿ ಎಂದು ತಿಳಿಯಬೇಕಾದರೆ ಆ ಸಹಿಗಳ ಎಫ್​ಎಸ್​ಎಲ್ ಪರೀಕ್ಷೆಯಾಗುವಂತೆ ದೂರು ಸಲ್ಲಿಸುತ್ತಾರೆ. ಆದರೆ ಅಲ್ಲೂ ಕೂಡ ರಾಜಗೋಪಾಲಯ್ಯನ ಕಾಂಚಾಣ ಸದ್ದು ಮಾಡಿರುತ್ತದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜಗೋಪಾಲಯ್ಯನ ಬಳಿ ಶುದ್ದಕ್ರಯದ ಪತ್ರಗಳಲ್ಲಿ ಇರುವಂತಹ ಸಹಿ ಅಸಲಿಯೋ ನಕಲಿಯೋ ಎಂದು ತಿಳಿಯ ಬೇಕಾದರೆ ಎಫ್​​ಎಸ್​ಎಲ್ ಪರೀಕ್ಷೆಯಾಗಬೇಕು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕಡೆಯ ಬಾರಿ ಪ್ರಯತ್ನ ಅಂತ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ನೆಲಮಂಗಲ ತಹಶೀಲ್ದಾರ್ ಮುಖಾಂತರ ಅರ್ಜಿ ಸಲ್ಲಿಸಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸದ್ಯ ಅರ್ಜಿ ಸ್ವೀಕರಿಸಿರುವ ನೆಲಮಂಗಲ ತಹಶೀಲ್ದಾರ್ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು. ಅದೇನೆ ಆಗಲಿ ಒಂದು ಕುಟುಂಬ ದಯಾಮರಣಕ್ಕೆ ಅರ್ಜಿ ಸಲ್ಲಿಸುತ್ತದೆ ಎಂದರೆ ಅವರಿಗಾಗಿರುವ ನೋವನ್ನ ಸರ್ಕಾರ ಮನದಟ್ಟು ಮಾಡಿಕೊಂಡು ಕೂಡಲೆ ಸಮಸ್ಯೆ ಬಗೆಹರಿಸಬೇಕಿದೆ.

ವರದಿ: ವಿನಾಯಕ್ ಗುರವ್, ಟಿವಿ9 ನೆಲಮಂಗಲ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Tue, 15 November 22

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ