‘ದಸರಾಗೆ ಹೊಸ ಸಿಎಂ..’ ಹೈಕೋರ್ಟ್ ಆದೇಶ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್
ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದರಿಂದ ಈಗಾಗಲೇ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಜೋರಾಗಿಯೇ ಇದೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಇದರ ಮಧ್ಯ ಸಾಮಾಜಿಕ ಜಾಲತಾಣಗಳಲ್ಲಿ 'ದಸರಾಗೆ ಹೊಸ ಸಿಎಂ..' ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಬೆಂಗಳೂರು (ಸೆಪ್ಟೆಂಬರ್ 24): ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲಿಯೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಆರಂಭವಾಗಿದೆ. ಒಂದೆಡೆ ಬಿಜೆಪಿ ಇದು ತಮ್ಮ ದೊಡ್ಡ ಗೆಲುವು ಎಂದು ಹೇಳಿದ್ದಲ್ಲದೆ, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಇನ್ನು ಕಾಂಗ್ರೆಸ್‌ನಲ್ಲಿಯೂ ಸಹ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲು ಈಗಾಗಲೇ ಸದ್ದಿಲ್ಲದೇ ಪ್ರಯತ್ನಗಳು ನಡೆದಿದ್ದು, ಒಂದು ವೇಳೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ತಮ್ಮನ್ನು ಸಿಎಂ ಮಾಡಬೇಕೆಂದು ಈಗಾಗಲೇ ಹಿರಿಯ ನಾಯಕರು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ‘ದಸರಾಗೆ ಹೊಸ ಸಿಎಂ..’ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಮ್ಸ್ಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರು ಕಾನೂನಿನ ಬಗ್ಗೆ ಗೌರವ ಹೊಂದಿದ್ದರೆ, ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಕೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ತಮ್ಮ ವಿರುದ್ಧ ಬಂದಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡುವ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರಿಸೈನ್ ಸಿದ್ದರಾಮಯ್ಯ ಎನ್ನುವ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯನವರ ರಾಜೀನಾಮಗೆ ನಾನಾ ರೀತಿಯ ವ್ಯಂಗ್ಯಭರಿತ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಲವರು ದಸರಾಗೆ ಹೊಸ ಸಿಎಂ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್ ತೀರ್ಪು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಮುಂದಿನ ಪ್ರಕ್ರಿಯೆ ಏನು?
‘ದಸರಾಗೆ ಹೊಸ ಸಿಎಂ. ಟಾಟಾ ಬೈ ಬೈ. ಎಲ್ಲಾ ಸೀಟ್ ಬೆಲ್ಟ್ ಹಾಕೊಳಿ. bigboss 11 ಕ್ಕಿಂತ ಒಳ್ಳೆ ಸೀಸನ್ ಕರ್ನಾಟಕದ ರಾಜಕೀಯದಲ್ಲಿ ಶುರು ಆಗುತ್ತೆ. ಹೌದು ಸ್ವಾಮಿ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ‘ಗುಲಾಮರಿಗೆ ಹಾಗೂ ಒಳಟಗಾರರಿಗೆ, ಉರಿ ಶುರುವಾಯಿತು. ಬರ್ನಾಲ್ ಸ್ಟಾಕ್ ಮುಗಿಯುವ ಲಕ್ಷಣ ಕಾಣುತ್ತಿದೆ. ಒಳಟಗಾರರು ಒಂದು ಹೆಜ್ಜೆ ಮುಂದೆ ಹೋಗಿ ಉಚ್ಚ ನ್ಯಾಯಾಲಯದ ಮುಂದೆ ಹೋರಾಟ ಮಾಡಬಹುದು’ ಎಂದು ಮತ್ತೊಬ್ಬರು ಬರೆದಿದ್ದಾರೆ. ‘ಈಗಲೂ ಕಾಂಗ್ರೆಸ್ ಹೈಕೋರ್ಟ್ ಮುಂದೆ ಪ್ರತಿಭಟನೆ ಮಾಡುತ್ತದೆಯೇನು?’ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
‘ಚಿಕ್ಕ ಮಕ್ಕಳು ಮುಂಬೈನಲ್ಲಿ ಕೋಲ್ಡ್ ಪ್ಲೇ ಕಾನ್ಸರ್ಟ್ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಪುರುಷರು ಇಂಡಿಯಾ-ಆಸ್ಟ್ರೇಲಿಯಾ ಬಾರ್ಡರ್ ಗಾವಸ್ಕರ್ ಟ್ರೋಫಿ ಯಾವಾಗ ಆರಂಭ ಆಗುತ್ತದೆ ಅನ್ನೋದರ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಲಜೆಂಡ್ಸ್ ಮಾತ್ರ ಸಿದ್ದರಾಮಯ್ಯ ಹಾಗೂ ಡಿಬಾಸ್ ಪರಪ್ಪನ ಅಗ್ರಹಾರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತಿದ್ದಾರೆ’ ಎಂದು ಗಣೇಶ್ (@me_ganesh14) ಎನ್ನುವವರು ಬರೆದುಕೊಂಡಿದ್ದಾರೆ.
Kids :- Waiting for the #Coldplayindia concert
Mens :- Waiting for the Indo-Australia BGT series
Legends :- Waiting for the #Siddaramaiah – D Boss reunion in Parappana Agrahara Jail, Bangalore #MUDA #MUDAScam #ResignSiddaramaiah pic.twitter.com/6MRJDfUs0L
— Ganesh (@me_ganesh14) September 24, 2024
Rapid judgment from Ganapati #Muda #ResignSiddaramaiah pic.twitter.com/Ktdjf1JuXN
— ಸನಾತನ (@sanatan_kannada) September 24, 2024
ಸಿದ್ದರಾಮಯ್ಯನವರೇ ನಿಮ್ಮದೇ ಮಾತುಗಳನ್ನು ಅನ್ವಯಿಸಿಕೊಳ್ಳಿ. ನೀವು ಜೈಲಿಗೆ ಹೋಗುವುದು ನಿಶ್ಚಿತವಾಗಿದೆ, ಅದರ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.’ ಎಂದು ಸತೀಶ್ ಕುಂಪಲ ಟ್ವೀಟ್ ಮಾಡಿದ್ದಾರೆ. ‘ಸಂವಿಧಾನಕ್ಕೆ ಇಂದು ಜಯ ಸಿಕ್ಕಿದೆ, ಸಂವಿಧಾನ ಹಿಡಿದು ಸುಳ್ಳು ಹೇಳುವ, ಹಿಂದೂಗಳ ಪಾಲಿನ ತಾಲಿಬಾನ್ ಸರ್ಕಾರಕ್ಕೆ ನ್ಯಾಯಾಲಯ ಪಾಠ ಕಲಿಸಿದೆ. ರಾಜೀನಾಮೆ ಕೊಡುವುದು ಒಳ್ಳೆಯದು ಭಂಡತನ ಶ್ರೇಯಸ್ಸಲ್ಲ ಸಿದ್ದರಾಮಯ್ಯ ಅವರೇ’ ಎಂದು ಸನಾತನ (@sanatan_kannada) ಟ್ವೀಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ