ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಹೊಸಬರಿಗೆ ಭರ್ಜರಿ ಖಾತೆ; ಹಳಬರಿಗೂ ಸೂಕ್ತ ಮನ್ನಣೆ; ವಿವರ ಇಲ್ಲಿದೆ

ಹಾಗೆಯೇ ಬಿ.ಸಿ.ಪಾಟೀಲ್-ಕೃಷಿ, ಎಸ್.ಟಿ.ಸೋಮಶೇಖರ್-ಸಹಕಾರ, ಡಾ.ಕೆ.ಸುಧಾಕರ್-ಆರೋಗ್ಯ, ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ-ಅಬಕಾರಿ, ಎಂಟಿಬಿ ನಾಗರಾಜ್-ಪೌರಾಡಳಿತ, ಸಣ್ಣ ಕೈಗಾರಿಕೆ ಖಾತೆಗಳಲ್ಲಿ ಮುಂದುವರಿಸಲಾಗಿದೆ.

ಮುಖ್ಯಮಂತ್ರಿ  ಬೊಮ್ಮಾಯಿ ಸಂಪುಟದಲ್ಲಿ ಹೊಸಬರಿಗೆ ಭರ್ಜರಿ ಖಾತೆ; ಹಳಬರಿಗೂ ಸೂಕ್ತ ಮನ್ನಣೆ; ವಿವರ ಇಲ್ಲಿದೆ
ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 07, 2021 | 12:49 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ ಅವರು ಬೆಂಗಳೂರು ನಗರ ಅಭಿವೃದ್ಧಿ ಖಾತೆ, ಆರ್ಥಿಕ, ಸಂಸದೀಯ ವ್ಯವಹಾರ ಹಾಗೂ ಡಿಪಿಎಆರ್ ಹಾಗೂ ಹಂಚಿಕೆ ಆಗದ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಆರ್.ಅಶೋಕ್ ಅವರನ್ನು ಕಂದಾಯ ಖಾತೆಯಲ್ಲಿ, ವಿ.ಸೋಮಣ್ಣ ಅವರನ್ನು ವಸತಿ ಹಾಗೂ ಮೂಲಸೌಕರ್ಯ ಖಾತೆಯಲ್ಲಿಯೇ ಮುಂದುವರಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಯಲ್ಲಿ ಮುಂದುವರಿಸಲಾಗಿದೆ. ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಈ ಹಿಂದೆ ತಾವು ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿದೆ.

ಹಾಗೆಯೇ ಬಿ.ಸಿ.ಪಾಟೀಲ್-ಕೃಷಿ, ಎಸ್.ಟಿ.ಸೋಮಶೇಖರ್-ಸಹಕಾರ, ಡಾ.ಕೆ.ಸುಧಾಕರ್-ಆರೋಗ್ಯ, ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ-ಅಬಕಾರಿ, ಎಂಟಿಬಿ ನಾಗರಾಜ್- ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಖಾತೆಗಳಲ್ಲಿ ಮುಂದುವರಿಸಲಾಗಿದೆ.

ಇನ್ನು ಹೊಸದಾಗಿ ತಮ್ಮ ಮಂತ್ರ ಮಂಡಲಕ್ಕೆ ಸೇರಿಸಿಕೊಡಿರುವ ಸಚಿವರಿಗೂ ಸಹ ಮಹತ್ವದ ಖಾತೆಗಳನ್ನು ನೀಡಿದ್ದಾರೆ. ಬಿ.ಸಿ.ನಾಗೇಶ್ ಅವರಿಗೆ ಸುರೇಶ್​ ಕುಮಾರ್​ ಅವರು ನಿರ್ವಹಿಸುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಇಲಾಖೆ ವಹಿಸಲಾಗಿದೆ. ವಿ. ಸುನಿಲ್ ​ಕುಮಾರ್ ಅವರಿಗೆ ಮಹತ್ವದ ಇಂಧನ ಖಾತೆ ನೀಡಲಾಗಿದೆ. ಆರಗ ಜ್ಞಾನೇಂದ್ರ ಅವರಿಗೆ ಪ್ರಮುಖ ಗೃಹ ಖಾತೆಯನ್ನು ನೀಡಲಾಗಿದೆ. ಮುನಿರತ್ನ ಅವರಿಗೆ ತೋಟಗಾರಿಕೆ ಹಾಗೂ ಸಂಖ್ಯಾಶಾಸ್ತ್ರ ಖಾತೆ, ಹಾಲಪ್ಪ ಆಚಾರ್ ಅವರಿಗೆ ಗಣಿ & ಭೂವಿಜ್ಞಾನ, ಮಹಿಳಾ & ಮಕ್ಕಳ ಕಲ್ಯಾಣ, ವಿಶೇಷ ಚೇತನ, ಹಿರಿಯ ನಾಗರಿಕರ ಕಲ್ಯಾಣ ಖಾತೆ ವಹಿಸಲಾಗಿದೆ.

ಬಿ.ಶ್ರೀರಾಮುಲುಗೆ ಸಾರಿಗೆ ಖಾತೆ: ಜೆ.ಸಿ.ಮಾಧುಸ್ವಾಮಿ -ಸಣ್ಣ ನೀರಾವರಿ, ಕಾನೂನು ಜತೆಗೆ ಸಂಸದೀಯ ವ್ಯವಹಾರ, ಶಾಸನ ಖಾತೆ, ಉಮೇಶ್ ಕತ್ತಿ ಅವರಿಗೆ ಅರಣ್ಯ ಹಾಗೂ ಆಹಾರ-ನಾಗರಿಕ ಪೂರೈಕೆ ಖಾತೆ, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಉನ್ನತ ಶಿಕ್ಷಣ ಖಾತೆ, IT ಅಂಡ್ BT, ವಿಜ್ಞಾನ & ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಖಾತೆ, ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಖಾತೆ , ಪ್ರಭು ಚೌಹಾಣ್ ಪಶುಸಂಗೋಪನೆ, ಮುರುಗೇಶ್ ನಿರಾಣಿ ಅವರಿಗೆ ಬೃಹತ್ -ಮಧ್ಯಮ ಕೈಗಾರಿಕೆ, ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ, ಎಸ್.ಅಂಗಾರ ಅವರಿಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಜವಾಬ್ದಾರಿ ವಹಿಸಲಾಗಿದೆ. ಬಿ.ಶ್ರೀರಾಮುಲುಗೆ ಸಾರಿಗೆ ಖಾತೆ ಜತೆಗೆ ಪರಿಶಿಷ್ಟ ಪಂಗಡದ ಅಭಿವೃದ್ಧಿ ಖಾತೆ ನೀಡಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೆ.ಸಿ.ನಾರಾಯಣಗೌಡ-ಕ್ರೀಡೆ, ಭೈರತಿ ಬಸವರಾಜ್-ನಗರಾಭಿವೃದ್ಧಿ, ಸಿ.ಸಿ.ಪಾಟೀಲ್-ಲೋಕೋಪಯೋಗಿ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ ಹಾಗೂ ಕೈಮಗ್ಗ ಹಾಗೂ ಸಕ್ಕರೆ ಖಾತೆ ನೀಡಲಾಗಿದೆ. ಶಶಿಕಲಾ ಜೊಲ್ಲೆಗೆ ಈ ಬಾರಿ ಮುಜರಾಯಿ ಮತ್ತು ಹಜ್‌ ಹಾಗೂ ವಕ್ಫ್ ಖಾತೆ ಹಂಚಿಕೆಯಾಗಿದೆ.

29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ

(new ministers like Araga Jnanendra, Sunil Kumar, halappa achar in cm basavaraj bommai cabinet get plum posts)

Published On - 12:07 pm, Sat, 7 August 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ