ಬೀದಿಗಿಳಿದು ಹೋರಾಟ ಮಾಡದೇ, ಬುದ್ಧಿವಂತಿಕೆಯಿಂದ ಎಸ್​ಟಿ ಮೀಸಲಾತಿ ಪಡೆಯಬೇಕು: ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯ

ಪಾದಯಾತ್ರೆ ವೇಳೆ ಮಾಡಿದ ಖರ್ಚು ವೆಚ್ಚದ ಪಟ್ಟಿ ಸಿದ್ದವಾಗಿದೆ. ಕಾಗಿನೆಲೆ, ಬೆಳ್ಳೂಡಿ ಪೀಠದಲ್ಲಿ ಖರ್ಚು ವೆಚ್ಚದ ಪಟ್ಟಿ ಇಡಲಾಗಿದೆ. ಆಸಕ್ತರು ಗಮನಿಸಬಹುದು ಎಂದೂ ಸ್ವಾಮೀಜಿ ತಿಳಿಸಿದ್ದಾರೆ.

ಬೀದಿಗಿಳಿದು ಹೋರಾಟ ಮಾಡದೇ, ಬುದ್ಧಿವಂತಿಕೆಯಿಂದ ಎಸ್​ಟಿ ಮೀಸಲಾತಿ ಪಡೆಯಬೇಕು: ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯ
ನಿರಂಜನಾನಂದ ಪುರಿ ಸ್ವಾಮೀಜಿ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 05, 2022 | 12:55 PM

ದಾವಣಗೆರೆ: ನೂರಕ್ಕೆ ನೂರೈವತ್ತರಷ್ಟು ಶೇಕಡಾ ಕುರುಬ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಬೆಳ್ಳೂಡಿಯಲ್ಲಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಭರವಸೆ ವ್ಯಕ್ತಪಡಿಸಿದ್ದಾರೆ. ಕುರುಬ ಸಮುದಾಯ ಎಸ್.ಟಿ. ಮೀಸಲಾತಿ ಹೋರಾಟ ವಿಚಾರದಲ್ಲಿ ಯಶಸ್ವಿಯಾಗುತ್ತದೆ ಎಂದು ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.

ಇನ್ಮೇಲೆ ಮೀಸಲಾತಿಗೆ ಬೀದಿಗಿಳಿದು ಹೋರಾಟ ಮಾಡದೇ, ಬುದ್ಧಿವಂತಿಕೆಯಿಂದ ಎಸ್​ಟಿ ಮೀಸಲಾತಿ ಪಡೆಯಬೇಕು ಎಂದು ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ನಾನು ಸಮಾಜಕ್ಕೆ ಎಸ್​ಟಿ ಮೀಸಲಾತಿ ಸಿಗಬೇಕು ಎಂದು 340 ಕಿಲೋಮೀಟರ್ ದೂರ, ಸತತ 21 ದಿನ ಪಾದಯಾತ್ರೆ ಮಾಡಿರುವೆ. ನಮಗೆ ಮೀಸಲಾತಿ ಸಿಕ್ಕೇ ಸಿಕ್ಕುತ್ತದೆ. ಇನ್ನು ಮೇಲೆ ಈ ರೀತಿ ಬೀದಿಗಿಳಿದು ಹೋರಾಟ ಮಾಡದೇ ಬುದ್ಧಿವಂತಿಕೆಯಿಂದ ಮೀಸಲಾತಿ ಪಡೆಯಬೇಕು. ಹೋರಾಟ, ಪರಸ್ಪರ ಹೇಳಿಕೆ ನೀಡಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಪಾದಯಾತ್ರೆ ವೇಳೆ ಮಾಡಿದ ಖರ್ಚು ವೆಚ್ಚದ ಪಟ್ಟಿ ಸಿದ್ದವಾಗಿದೆ. ಕಾಗಿನೆಲೆ, ಬೆಳ್ಳೂಡಿ ಪೀಠದಲ್ಲಿ ಖರ್ಚು ವೆಚ್ಚದ ಪಟ್ಟಿ ಇಡಲಾಗಿದೆ. ಆಸಕ್ತರು ಗಮನಿಸಬಹುದು ಎಂದೂ ಅವರು ತಿಳಿಸಿದ್ದಾರೆ.

ದುನಿಯಾ ವಿಜಯ್ ಸ್ವಾಗತಿಸಿದ ಸ್ವಾಮೀಜಿ ಎಷ್ಟೋ ಜನರು ಆಮಂತ್ರಣಯಲ್ಲಿ ಹೆಸರು ಹಾಕಿಸಿ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದರೂ ಬರಲ್ಲ. ಆದ್ರೆ ದುನಿಯಾ ವಿಜಯ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರು ನಮ್ಮ ಕುರುಬ ಸಮಾಜದವರು. ನಮ್ಮವರು. ಆದ್ರೆ ಕಲಾವಿದರನ್ನು ಒಂದು ಜಾತಿಗೆ ಸಿಮಿತ ಮಾಡುವಂತಿಲ್ಲ. ಕಲಾವಿದರು ಎಲ್ಲ ಜಾತಿಯ ಸ್ವತ್ತು ಎಂದು ಸ್ವಾಮೀಜಿ ಮಾತನಾಡಿದ್ದಾರೆ.

6 ತಿಂಗಳೊಳಗೆ ಮೀಸಲಾತಿ ನೀಡದಿದ್ರೆ ಮತ್ತೆ ಹೋರಾಟ: ವಿಜಯಾನಂದ್ ಕಾಶಪ್ಪನವರ್ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ ವಿಚಾರವಾಗಿ ಯಾದಗಿರಿ ಜಿಲ್ಲೆ ಶಹಾಪುರ ನಗರದಲ್ಲಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ್ ಕಾಶಪ್ಪನವರ್ ಮಾತನಾಡಿದ್ದಾರೆ. ಸಪ್ಟೆಂಬರ್ 15ರೊಳಗೆ ಮೀಸಲಾತಿ ನೀಡದಿದ್ರೆ ಮತ್ತೆ ಹೋರಾಟ ಮಾಡ್ತೇವೆ. ಸರ್ಕಾರ 6 ತಿಂಗಳೊಳಗೆ ಮೀಸಲಾತಿ ಕೊಡುವುದಾಗಿ ಹೇಳಿದೆ. ಮೀಸಲಾತಿ ಕೊಡದಿದ್ರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುತ್ತೇವೆ. 20 ಲಕ್ಷ ಜನರನ್ನ ಸೇರಿಸಿ ಬೃಹತ್​​ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಅವಕಾಶ ಕೊಡಿ.. ಯಡಿಯೂರಪ್ಪ ಸರ್ಕಾರ ಸಲ್ಲಿಸಿತು ಸುಪ್ರೀಂಗೆ ಮನವಿ

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ; ಸಮುದಾಯದ ಅಧ್ಯಯನಕ್ಕೆ ಮುಂದಾದ ಹಿಂದುಳಿದ ವರ್ಗಗಳ ಆಯೋಗ?

Published On - 8:07 pm, Sat, 3 April 21