ಇ-ಖಾತೆ ಪಡೆಯಲು ಯಾವುದೇ ಡೆಡ್​ಲೈನ್ ಇಲ್ಲ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಮಾಲೀಕರು ಇ-ಖಾತಾ ಪಡೆಯುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮನೆಯಿಂದಲೇ ಜನರು ಇ-ಖಾತೆ ಪಡೆಯಬಹುದು. ಇದಕ್ಕೆ ಯಾವುದೇ ಡೆಡ್​ಲೈನ್ ಇಲ್ಲ ಎಂದಿದ್ದಾರೆ.

ಇ-ಖಾತೆ ಪಡೆಯಲು ಯಾವುದೇ ಡೆಡ್​ಲೈನ್ ಇಲ್ಲ: ಸಚಿವ ಕೃಷ್ಣಭೈರೇಗೌಡ
ಇ-ಖಾತೆ ಪಡೆಯಲು ಯಾವುದೇ ಡೆಡ್​ಲೈನ್ ಇಲ್ಲ: ಸಚಿವ ಕೃಷ್ಣಭೈರೇಗೌಡ
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2024 | 9:55 PM

ಬೆಂಗಳೂರು, ಅಕ್ಟೋಬರ್​ 07: ಖಾತೆ ಇಲ್ಲದೆಯೇ ನಿವೇಶನಗಳು ಮಾರಾಟ ಆಗುತ್ತಿವೆ. ಇದು ಮಧ್ಯವರ್ತಿಗಳಿಗೆ ಹೇಳಿ ಮಾಡಿಕೊಟ್ಟ ಬೆಳವಣಿಗೆ. ಖಾತೆ ಇಲ್ಲದ ಸೈಟ್​ಗಳಿಗೆ ಶಾಶ್ವತ ಪರಿಹಾರ ಕೊಡುತ್ತೇವೆ. ಇದಕ್ಕೆ ಯಾವುದೇ ಡೆಡ್​ಲೈನ್ ಇಲ್ಲ. ಯಾರು ಸಹ ಆತುರ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಸ್ಪಷ್ಟನೆ ನೀಡಿದ್ದಾರೆ. ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಮಾಲೀಕರು ಇ-ಖಾತಾ ಪಡೆಯುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಜನರ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಅನುಕೂಲತೆಗಳನ್ನ ನಮ್ಮ ಗಮನಕ್ಕೆ ತಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್​​ ಸೂಚನೆಯಂತೆ ಕೆಲ ಸರಳೀಕರಣ ಮಾಡಿದ್ದೇವೆ. ಎಆರ್​ಒ ಕಚೇರಿಯಲ್ಲಿ ಹೆಲ್ಪ್​ ಡೆಸ್ಕ್ ಮಾಡುತ್ತಿದ್ದೇವೆ. ಇ-ಖಾತೆಗೆ ಸಹಾಯ ಮಾಡುವುದು ಇವರ ಜವಾಬ್ದಾರಿ. ಇದು ಬಿಬಿಎಂಪಿ ವ್ಯಾಪ್ತಿಯವರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

ಕೃಷ್ಣಭೈರೇಗೌಡ ಟ್ವೀಟ್ 

2-3 ದಿನಗಳೊಳಗೆ ಬೆಂಗಳೂರು ಒನ್​ಗೆ ಅಪ್ಲೋಡ್ ಮಾಡಲಿದ್ದೇವೆ. ಖಾತಾ ನಿರ್ವಹಣೆ ಬಹಳ ತೊಂದರೆ ಆಗಿದೆ. ಇದಕ್ಕೆ ಇ-ಖಾತೆ ಒಂದೇ ಶಾಶ್ವತ ಪರಿಹಾರ. ಮನೆಯಿಂದಲೇ ಜನರು ಇ-ಖಾತೆ ಪಡೆಯಬಹುದು. ಇದು ಪ್ರಾರಂಭಿಕವಾಗಿ ಸಮಸ್ಯೆ ಆಗಬಹುದು. ಬಳಿಕ‌ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ

ಹಿಂದುಳಿದ ವರ್ಗಗಳ ಆಯೋಗ ವರದಿ ಅಂಗೀಕಾರದ ಬಗ್ಗೆ ಚರ್ಚೆ ಆಗಿದೆ. ಸಮುದಾಯದ ಸ್ವಾಮೀಜಿಗಳು ಇದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮನ್ನ ಕರೆದು ಈ ಬಗ್ಗೆ ಚರ್ಚೆ ಮಾಡಿ ಎಂದಿದ್ದಾರೆ. ಈ ನಡುವೆ ಅಂಕಿ-ಅಂಶಗಳು ಸಹ ಸೋರಿಕೆ ಆಗಿವೆ ಅಂದಿದ್ದಾರೆ. ಕ್ಯಾಬಿನೆಟ್​ನಲ್ಲಿ ಮಂಡನೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.

ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇವೆ. ವೈಜ್ಞಾನಿಕವಾಗಿ ಹೋಗೋಣ ಎಂದು ಸಿಎಂಗೆ ಹೇಳಿದ್ದೇನೆ. ಕೆಲ ಹಳ್ಳಿಗಳಲ್ಲಿ ಸರ್ವೇ ಸಮಸ್ಯೆ ಮಾಡಿದ್ದಾರೆ ಅಂತಿದ್ದಾರೆ. ರ್ಯಾಡಮ್ ಆಗಿ ತಗೊಂಡು ನೋಡಿದರೆ ಗೊತ್ತಾಗುತ್ತೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆ ಆಗಲಿ. ಒಂದೇ ಬಾರಿ ವರದಿ ಜಾರಿ ಮಾಡಲ್ಲ. ಚರ್ಚೆಗೆ ಅವಕಾಶ ಇದ್ದೇ ಇದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.