ಬೆಂಗಳೂರು: ಲಾಕ್ಡೌನ್ ಸಡಲಿಕೆಯಾಗಿ ಬೇರೆ ಬೇರೆ ರಾಜ್ಯಗಳಿಗೆ ಸುತ್ತಾಡಲು ಅನುಮತಿ ಸಿಕ್ಕಿದೆ. ಆದರೆ ಬೇರೆ ರಾಜ್ಯಗಳಿಗೆ ಹೋದ್ರೆ ಕ್ವಾರಂಟೇನ್ ಆಗಬೇಕಾಗುತ್ತೆ. ಕ್ವಾರಂಟೇನ್ ಭಯದಿಂದಲೇ ಕೆಲ ವ್ಯಾಪಾರಿಗಳು ಹೊರ ರಾಜ್ಯಗಳಿಗೆ ಹೋಗಿ ವ್ಯಾಪಾರ ಮಾಡಲಾಗದ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಅಂತಹ ವ್ಯಾಪಾರಸ್ಥರಿಗೆ ಕ್ವಾರಂಟೈನ್ ಇಲ್ಲ ಎಂದು ಆದೇಶಿಸಿದೆ.
ಹೊರ ರಾಜ್ಯದಿಂದ ಬರುವ ವ್ಯಾಪಾರಸ್ಥರಿಗೆ ಕ್ವಾರಂಟೈನ್ ಇಲ್ಲ:
ಹೊರ ರಾಜ್ಯಗಳಿಂದ ಬಂದು ತಮ್ಮ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಕ್ವಾರಂಟೈನ್ ಮಾಡುವುದಿಲ್ಲ. 7 ದಿನದೊಳಗೆ ವ್ಯವಹಾರ ಮುಗಿಸಿ ವಾಪಸ್ ಹೋಗುವುದಾದ್ರೆ ಮಾತ್ರ ಅಂಥವರಿಗೆ ರಾಜ್ಯದಲ್ಲಿ 7 ದಿನ ಕ್ವಾರಂಟೈನ್ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಅವರು ಹಿಂತಿರುಗುವ ಬಗ್ಗೆ ಮಾಹಿತಿ ತೋರಿಸಬೇಕು. ರೈಲು, ವಿಮಾನ ಟಿಕೆಟ್ ಕಡ್ಡಾಯವಾಗಿ ತೋರಿಸಬೇಕಾಗುತ್ತದೆ. ಜತೆಗೆ ರಾಜ್ಯ ಸರ್ಕಾರದ ನಿಯಮಗಳನ್ನು ಸಹ ಪಾಲಿಸಬೇಕು.
Published On - 8:49 am, Thu, 4 June 20