ರಾಜ್ಯದಲ್ಲಿ 4,000 ಎಲ್ಲೆ ಮೀರಿದ ಕೊರೊನಾ ಸೋಂಕಿತರ ಸಂಖ್ಯೆ!
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರು 4,000 ಸಂಖ್ಯೆಯ ಎಲ್ಲೆ ಮೀರಿದ್ದು, 4063 ಕ್ಕೆ ತಲುಪಿದ್ದಾರೆ. ರಾಜ್ಯದಲ್ಲಿ ಇಂದು ಹೊಸದಾಗಿ 267 ಜನರಿಗೆ ಕೊರೊನಾ ದೃಢಪಟ್ಟಿದೆ. ದಾವರಣಗೆರೆಯಲ್ಲಿಂದು ಒಬ್ಬ ಕೊರೊನಾ ಪೇಷೆಂಟ್ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ. 4063 ಕೊರೊನಾ ಸೋಂಕಿತರ ಪೈಕಿ 53 ಜನರ ಸಾವು ಸಂಭವಿಸಿದೆ. 4063 ಕೊರೊನಾ ಸೋಂಕಿತರಲ್ಲಿ 1514 ಜನ ಗುಣಮುಖರಾಗಿದ್ದಾರೆ. 2494 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ […]
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರು 4,000 ಸಂಖ್ಯೆಯ ಎಲ್ಲೆ ಮೀರಿದ್ದು, 4063 ಕ್ಕೆ ತಲುಪಿದ್ದಾರೆ. ರಾಜ್ಯದಲ್ಲಿ ಇಂದು ಹೊಸದಾಗಿ 267 ಜನರಿಗೆ ಕೊರೊನಾ ದೃಢಪಟ್ಟಿದೆ. ದಾವರಣಗೆರೆಯಲ್ಲಿಂದು ಒಬ್ಬ ಕೊರೊನಾ ಪೇಷೆಂಟ್ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ.
4063 ಕೊರೊನಾ ಸೋಂಕಿತರ ಪೈಕಿ 53 ಜನರ ಸಾವು ಸಂಭವಿಸಿದೆ. 4063 ಕೊರೊನಾ ಸೋಂಕಿತರಲ್ಲಿ 1514 ಜನ ಗುಣಮುಖರಾಗಿದ್ದಾರೆ. 2494 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕಲಬುರಗಿ 105, ಉಡುಪಿ 62, ರಾಯಚೂರು 35 ಪ್ರಕರಣ, ಬೆಂಗಳೂರು ನಗರ 20, ಮಂಡ್ಯ 13, ಯಾದಗಿರಿ 9 ಪ್ರಕರಣ, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ 2 ಪ್ರಕರಣ, ಮೈಸೂರು 2, ಬಾಗಲಕೋಟೆ 2, ಶಿವಮೊಗ್ಗ 2 ಪ್ರಕರಣ, ಕೋಲಾರ 2, ಬಳ್ಳಾರಿ, ಧಾರವಾಡ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.
ಉಡುಪಿಯಲ್ಲಿ ಇಂದು 62 ಕೊರೋನಾ ಪಾಸಿಟಿವ್ ಬಂದಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 472ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 63 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 408 ಕ್ಕೆ ತಲುಪಿದೆ.
Published On - 7:08 pm, Wed, 3 June 20