ಡ್ರಾಪ್ ಕೊಡುವ ನೆಪದಲ್ಲಿ ಹಿಂಗಾ ಮಾಡೋದು! ಮಹಿಳೆ, ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ
ಕೋಲಾರ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡದ ವ್ಯಕ್ತಿಯನ್ನ ಮಹಿಳೆ ಹಾಗೂ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ರೋಣೂರು ಬಳಿ ನಡೆದಿದೆ. ಬಸ್ ವ್ಯವಸ್ಥೆ ಇಲ್ಲದಿದ್ದಕ್ಕೆ ಆಂಧ್ರ ಮೂಲದ ಕೂಲಿ ಕಾರ್ಮಿಕರ ಕುಟುಂಬ ಬೆಂಗಳೂರಿನಿಂದ ತನ್ನ ಊರಿಗೆ ನಡೆದುಕೊಂಡೆ ಹೊರಟಿತ್ತು. ಈ ವೇಳೆ ರಸ್ತೆ ಮಧ್ಯೆ ಟಾಟಾ ಏಸ್ ಗಾಡಿ ಬಂದಿದೆ. ಚಾಲಕ ಗೌಸ್ ಆ ಕುಟುಂಬಕ್ಕೆ ಆಂಧ್ರದ ಬಾರ್ಡರ್ವರೆಗೂ ಡ್ರಾಪ್ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ಗಂಡನನ್ನು ಹಿಂದೆ ಕೂರಿಸಿ, ಮಹಿಳೆ […]
ಕೋಲಾರ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡದ ವ್ಯಕ್ತಿಯನ್ನ ಮಹಿಳೆ ಹಾಗೂ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ರೋಣೂರು ಬಳಿ ನಡೆದಿದೆ.
ಬಸ್ ವ್ಯವಸ್ಥೆ ಇಲ್ಲದಿದ್ದಕ್ಕೆ ಆಂಧ್ರ ಮೂಲದ ಕೂಲಿ ಕಾರ್ಮಿಕರ ಕುಟುಂಬ ಬೆಂಗಳೂರಿನಿಂದ ತನ್ನ ಊರಿಗೆ ನಡೆದುಕೊಂಡೆ ಹೊರಟಿತ್ತು. ಈ ವೇಳೆ ರಸ್ತೆ ಮಧ್ಯೆ ಟಾಟಾ ಏಸ್ ಗಾಡಿ ಬಂದಿದೆ. ಚಾಲಕ ಗೌಸ್ ಆ ಕುಟುಂಬಕ್ಕೆ ಆಂಧ್ರದ ಬಾರ್ಡರ್ವರೆಗೂ ಡ್ರಾಪ್ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ.
ಗಂಡನನ್ನು ಹಿಂದೆ ಕೂರಿಸಿ, ಮಹಿಳೆ ಮತ್ತು ಮಕ್ಕಳನ್ನು ಮುಂದೆ ಕೂರಿಸಿಕೊಂಡಿದ್ದಾನೆ. ನಂತರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರೊಚ್ಚಿಗೆದ್ದ ಮಹಿಳೆ ಜನರನ್ನು ಸೇರಿಸಿ ಟಾಟಾ ಏಸ್ ಚಾಲಕ ಗೌಸ್ನನ್ನ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 10:34 am, Thu, 4 June 20