7 ಜನರ ಭೀಕರ ಹತ್ಯೆ ಬಳಿಕವೂ ತೀರದ ಆರೋಪಿಯ ಕೋಪ: ಪಶ್ಚಾತ್ತಾಪವಿಲ್ಲ ಎಂದ ಇಂದುಶೇಖರ್​​!

ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದ ಆರೋಪಿ ಇಂದುಶೇಖರ್ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಮತ್ತೊಂದೆಡೆ ತನಿಖೆ ವೇಳೆ ಆರೋಪಿ ತನ್ನ ಅಪ್ರಾಪ್ತ ಮಗಳಿಗೆ ಯಾವ ರೀತಿ ಬ್ರೈನ್‌ವಾಶ್ ಮಾಡಿದ್ದ? ಶವಗಳನ್ನು ಸಾಗಿಸಲು ಯಾವ ರೀತಿ ನೆರವು ಪಡೆದಿದ್ದ? ಎಂಬಿತ್ಯಾದಿ ವಿಚಾರಗಳು ಬಯಲಾಗಿವೆ. ಪ್ರಕರಣ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

7 ಜನರ ಭೀಕರ ಹತ್ಯೆ ಬಳಿಕವೂ ತೀರದ ಆರೋಪಿಯ ಕೋಪ: ಪಶ್ಚಾತ್ತಾಪವಿಲ್ಲ ಎಂದ ಇಂದುಶೇಖರ್​​!
ಆರೋಪಿ ಮತ್ತು ಮೃತರು
Edited By:

Updated on: Nov 06, 2026 | 3:00 PM

ಬೆಂಗಳೂರು, ನವೆಂಬರ್​​ 06: ರಾಜಧಾನಿ ಬೆಂಗಳೂರಲ್ಲಿ ನಡೆದ ಒಂದೇ ಕುಟುಂಬದ 7 ಜನರ ಭೀಕರ ಹತ್ಯೆ ಪ್ರಕರಣಕ್ಕೆ ರಾಜ್ಯವೇ ಬೆಚ್ಚಿದೆ. ಕೊಲೆಗಾರ ಅದೆಂಥಹ ಸೈಕೋ ಆಗಿರಬಹುದೆಂದು ಮಾತುಗಳು ಕೇಳಿಬಂದಿವೆ. ಹೀಗಿದ್ದರೂ ಆರೋಪಿ ಇಂದುಶೇಖರ್​ ಕೋಪ ಮಾತ್ರ ಇನ್ನೂ ತಣ್ಣಗಾಗಿಲ್ಲ. ಸರಣಿ ಹತ್ಯೆಯ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಆತ ಹೇಳಿಕೊಂಡಿದ್ದು, ನನಗೆ ಇವರಿಂದ ಮುಕ್ತಿ ಬೇಕಿತ್ತು ಎಂದಿದ್ದಾನಂತೆ. ಪ್ರಕರಣ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಅಪ್ರಾಪ್ತ ಮಗಳಿಗೆ ಬ್ರೈನ್​ವಾಶ್​​ ಮಾಡಿದ್ದ ಆರೋಪಿ

ಇನ್ನು ಸರಣಿ ಕೊಲೆ ನಡೆಸಿರುವ ಆರೋಪಿ ಇಂದುಶೇಖರ್​​ಗೆ ಆತನ ಅಪ್ರಾಪ್ತ ಮಗಳು ಕೂಡ ಸಾಥ್​​ ನೀಡಿದ್ದಾಳೆ ಎನ್ನಲಾಗಿದೆ. ಹೀಗಾಗಿ ಆಕೆಯನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ವತಃ ಬೆಂಗಳೂರು ನಗರ ಪೊಲೀಸ್​​ ಆಯುಕ್ತರೇ ಮಾಹಿತಿ ನೀಡಿದ್ದಾರೆ. ಮಗಳಿಗೆ ಬ್ರೈನ್​ವಾಶ್​​​​ ಮಾಡಿದ್ದ ಆರೋಪಿ, ಇವರೆಲ್ಲ ನಮ್ಮ ಜೀವನದ ವಿರೋಧಿಗಳು. ಇವರು ಇರುವ ತನಕ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಇವರನ್ನು ಮುಗಿಸಿಬಿಡೋಣ ಎಂದು ಮಗಳಿಗೆ ಹೇಳಿದ್ದ. ಹೀಗಾಗಿ ಆಕೆಯೂ ಒಪ್ಪಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

Loading...

ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಜನರ ಹತ್ಯೆ ಕೇಸ್​: ಆರೋಪಿ ಕುರಿತು ಶಾಕಿಂಗ್​​ ಹೇಳಿಕೆ ಕೊಟ್ಟ ಪೊಲೀಸ್​​ ಕಮಿಷನರ್​

ಕೊಲೆ ಬಳಿಕ ಮೃತದೇಹ ಸಾಗಿಸಲು ಪ್ಲ್ಯಾಸ್ಟಿಕ್​​ ಮತ್ತು ಗೋಣಿ ಚೀಲಗಳನ್ನು ತಂದು ಆರೋಪಿ ಇಂದುಶೇಖರ್​​ ಮನೆಯಲ್ಲಿ ಇಟ್ಟುಕೊಂಡಿದ್ದ. ಒಂದೊಂದು ಕೊಲೆಗೂ 3-4 ದಿನಗಳ ಸಮಯ ತೆಗೆದುಕೊಂಡಿದ್ದ ಆರೋಪಿ, ಪ್ರತಿಯೊಬ್ಬರನ್ನು ಸಮಯ ನೋಡಿಕೊಂಡು ಹಿಂಬದಿಯಿಂದ ತೆರಳಿ ರುಬ್ಬುವ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಮೃತ ದೇಹಗಳನ್ನು ಮಗಳ ಜೊತೆ ಸೇರಿ ಚೀಲದಲ್ಲಿ ಪ್ಯಾಕ್ ಮಾಡಿದ್ದು, ಬಳಿಕ ಮೃತದೇಹಗಳನ್ನು ಸಾಗಿಸಲಾಗಿದೆ. ಕೊಲೆ ಬಳಿಕ ಕೆಮಿಕಲ್ ಹಾಕಿ ರಕ್ತದ ಕಲೆ ಕಾಣದಂತೆ ಮನೆಯನ್ನೂ ಕ್ಲೀನ್​​ ಮಾಡಲಾಗುತ್ತಿತ್ತು ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:59 pm, Fri, 6 November 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us