ಜಮೀನಿನಲ್ಲಿ ಬೆಳೆದಿದ್ದ 90 ಕೆಜಿ ಗಾಂಜಾ ಜಪ್ತಿ
ಯಾದಗಿರಿ: ಜಮೀನಿನಲ್ಲಿ ಬೆಳೆದಿದ್ದ 5 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುರಪುರ ತಾಲೂಕಿನ ಹದನೂರು ಗ್ರಾಮದ ನಿವಾಸಿಗಳಾದ ಜೆಟ್ಟೆಪ್ಪ, ನಾಗಪ್ಪ ಇಬ್ಬರು ತಮ್ಮ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಮಾಹಿತಿ ತಿಳಿದು ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಾದಗಿರಿ: ಜಮೀನಿನಲ್ಲಿ ಬೆಳೆದಿದ್ದ 5 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುರಪುರ ತಾಲೂಕಿನ ಹದನೂರು ಗ್ರಾಮದ ನಿವಾಸಿಗಳಾದ ಜೆಟ್ಟೆಪ್ಪ, ನಾಗಪ್ಪ ಇಬ್ಬರು ತಮ್ಮ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು.
ಮಾಹಿತಿ ತಿಳಿದು ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.