ಪಾಸ್ ಇದ್ದವ್ರಿಗೆ ಮಾತ್ರ ಬಿಎಂಟಿಸಿ ಬಸ್ನಲ್ಲಿ ಅವಕಾಶ!
ಬೆಂಗಳೂರು: ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದಿನಿಂದ ಆರಂಭವಾಗಲಿದೆ. ಆದೆರ ಬಸ್ನಲ್ಲಿ ಓಡಾಡಬೇಕಾದ್ರೆ ಹತ್ತಾರು ನಿಯಮಗಳನ್ನ ಸಾರಿಗೆ ನಿಗಮ ಜಾರಿಗೊಳಿಸಿದೆ. ಪ್ರಯಾಣಿಕರ ವಿಷ್ಯದಲ್ಲಿ ಇಲಾಖೆ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಅದು ಚರ್ಚೆ ಹುಟ್ಟುಹಾಕಿದೆ. ಪಾಸ್ ಇದ್ದವರಿಗೆ ಮಾತ್ರ ಬಸ್! ಬಿಎಂಟಿಸಿ ಬಸ್ನಲ್ಲಿ, ದುಡ್ಡು ಕೊಟ್ಟು ಟಿಕೆಟ್ ಪಡೆಯುವುದಕ್ಕೆ ಅವಕಾಶ ಇರಲ್ಲ. ದಿನದ ಪಾಸ್, ಮಾಸಿಕ ಪಾಸ್ ಅಥವಾ ತಿಂಗಳ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡ್ಬಹುದು. ತಿಂಗಳ ಪಾಸ್‌ಗಳನ್ನು ಕೌಂಟರ್‌ನಲ್ಲಿ ಖರೀದಿ ಮಾಡಬೇಕು. ದಿನದ ಪಾಸ್‌ಗೆ ₹70, […]
ಬೆಂಗಳೂರು: ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದಿನಿಂದ ಆರಂಭವಾಗಲಿದೆ. ಆದೆರ ಬಸ್ನಲ್ಲಿ ಓಡಾಡಬೇಕಾದ್ರೆ ಹತ್ತಾರು ನಿಯಮಗಳನ್ನ ಸಾರಿಗೆ ನಿಗಮ ಜಾರಿಗೊಳಿಸಿದೆ. ಪ್ರಯಾಣಿಕರ ವಿಷ್ಯದಲ್ಲಿ ಇಲಾಖೆ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಅದು ಚರ್ಚೆ ಹುಟ್ಟುಹಾಕಿದೆ.
ಪಾಸ್ ಇದ್ದವರಿಗೆ ಮಾತ್ರ ಬಸ್! ಬಿಎಂಟಿಸಿ ಬಸ್ನಲ್ಲಿ, ದುಡ್ಡು ಕೊಟ್ಟು ಟಿಕೆಟ್ ಪಡೆಯುವುದಕ್ಕೆ ಅವಕಾಶ ಇರಲ್ಲ. ದಿನದ ಪಾಸ್, ಮಾಸಿಕ ಪಾಸ್ ಅಥವಾ ತಿಂಗಳ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡ್ಬಹುದು. ತಿಂಗಳ ಪಾಸ್‌ಗಳನ್ನು ಕೌಂಟರ್‌ನಲ್ಲಿ ಖರೀದಿ ಮಾಡಬೇಕು.
ದಿನದ ಪಾಸ್‌ಗೆ ₹70, ವಾರದ ಪಾಸ್‌ಗೆ 300 ರೂಪಾಯಿ. ಹೀಗಾಗಿ, ಬಸ್ನಲ್ಲಿ ಹೋಗ್ಬೇಕು ಅಂದ್ರೆ ಮಿನಿಮಮ್ 70 ರೂಪಾಯಿ ಕೊಟ್ಟು ದಿನದ ಪಾಸ್ ಖರೀದಿಸಬೇಕು. ಇದಲ್ಲದೆ, ಹಿರಿಯ ನಾಗರೀಕರು, ಗರ್ಭಿಣಿಯರು, 10 ವರ್ಷದ ಮಕ್ಕಳಿಗೂ ಬಸ್ನಲ್ಲಿ ಪ್ರವೇಶವಿಲ್ಲ ಅಂತ ನಿಗಮ ತಿಳಿಸಿದೆ. ಅಲ್ಲಿಗೆ, ಒಂದು ಸಲ, ಒಂದು ಸ್ಥಳಕ್ಕೆ ಬಸ್ನಲ್ಲಿ ಹೋಗ್ಬೇಕು ಅಂದ್ರೆ, 70 ರೂಪಾಯಿ ಕೊಟ್ಟು ಪಾಸ್ ಖರೀದಿ ಮಾಡ್ಲೇಬೇಕು.
Published On - 7:20 am, Tue, 19 May 20