ಹಾಸನದಲ್ಲಿ ಸಮವಸ್ತ್ರ ಗೊಂದಲ್ಲಕ್ಕೆ ತೆರೆ; ಎಸ್.ಡಿ.ಎಂಸಿ ಅಧ್ಯಕ್ಷೆ ಸವಿತಾ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 19, 2022 | 8:16 PM

ಹಿಜಾಬ್ ಬದಲು ಶಾಲೆ ನಿರ್ಧಾರ ಮಾಡೋ ಬಣ್ಣದ ವೇಲ್ ಧರಿಸಲು ಅವಕಾಶ ನೀಡುವುದಾಗಿ ತೀರ್ಮಾನಿಸಲಾಗಿದೆ. ಈ ಕುರಿತು ಬೇಲೂರಿನಲ್ಲಿ ಎಸ್.ಡಿ.ಎಂಸಿ ಅದ್ಯಕ್ಷೆ ಸವಿತಾ ಹೇಳಿಕೆ ನೀಡಿದ್ದಾರೆ.

ಹಾಸನದಲ್ಲಿ ಸಮವಸ್ತ್ರ ಗೊಂದಲ್ಲಕ್ಕೆ ತೆರೆ; ಎಸ್.ಡಿ.ಎಂಸಿ ಅಧ್ಯಕ್ಷೆ ಸವಿತಾ ಹೇಳಿಕೆ
ಎಸ್.ಡಿ.ಎಂಸಿ ಅಧ್ಯಕ್ಷೆ ಸವಿತಾ
Follow us on

ಹಾಸನ: ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ (hijab) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಪೋಷಕರ ಸಭೆಯಲ್ಲಿ ಎಲ್ಲರ ಮನವೊಲಿಸಿ ಹಿಜಾಬ್ ತೆಗೆಯಲು ಎಸ್.ಡಿ.ಎಂ.ಸಿ ಸದಸ್ಯರು ಒಪ್ಪಿಸಿದ್ದಾರೆ. ಹಿಜಾಬ್ ಬದಲು ಶಾಲೆ ನಿರ್ಧಾರ ಮಾಡೋ ಬಣ್ಣದ ವೇಲ್ ಧರಿಸಲು ಅವಕಾಶ ನೀಡುವುದಾಗಿ ತೀರ್ಮಾನಿಸಲಾಗಿದೆ. ಈ ಕುರಿತು ಬೇಲೂರಿನಲ್ಲಿ ಎಸ್.ಡಿ.ಎಂಸಿ ಅದ್ಯಕ್ಷೆ ಸವಿತಾ ಹೇಳಿಕೆ ನೀಡಿದ್ದಾರೆ. ಸಮವಸ್ತ್ರ ವಿಚಾರವಾಗಿ ಶಾಲೆಯಲ್ಲಿ ಗಲಾಟೆಯಾಗಿತ್ತು. ಹಾಗಾಗಿ ಇಂದು ಎಸ್.ಡಿ‌.ಎಂ ಸಿ ಸದಸ್ಯರು ಪೋಷಕರ ಸಭೆ ಕರೆಯಲಾಗಿದ್ದು, ಸರ್ಕಾರ ಮಕ್ಕಳಿಗೆ ನೀಡಿರೋ ಟಾಪ್ ,ಪ್ಯಾಂಟ್ ವೇಲ್ ಒಳಗೊಂಡ ಸಮವಸ್ತ್ರ ನೀಡಿದೆ ಅದನ್ನ ಬಳಸಲು ತೀರ್ಮಾನಿಸಲಾಗಿದೆ. ಕಡ್ಡಾಯವಾಗಿ ಸರ್ಕಾರದಿಂದ‌ ಕೊಡಲಾಗಿರೋ ಯುನಿಫಾರ್ಮ್ ಹಾಕಿ ಬರಬೇಕೆಂದು ತೀರ್ಮಾನ ಮಾಡಲಾಗಿದೆ. ವೇಲನ್ನು ತಲೆಗೆ ಸುತ್ತಿಕೊಂಡು ಬರುವ ಹಾಗಿಲ್ಲ. ಸಭೆಯಲ್ಲಿ ತಿರ್ಮಾನಿಸಿದ ವೇಲ್​ನ್ನು ತಲೆ ಮೇಲೆ ಹಾಕಿಕೊಂಡು ಬರಲು ತಿರ್ಮಾನ ಕೈಗೊಳ್ಳಲಾಗಿದೆ.

ಶಾಲೆ ಹಾಗು ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದ್ದು, ಯಾರೆ ಮಕ್ಕಳಿದ್ದರೂ ಶಾಲಾ ಆವರಣದವರೆಗೆ ಮಾತ್ರ ಬೇರೆ ವಸ್ತ್ರ ದರಿಸಬಹುದು.  ಆದರೆ ಶಾಲೆ ಒಳಗೆ ಬರಬೇಕಾದರೆ ಶಾಲೆಯ ಯೂನಿಫಾರ್ಮ್ ಮಾತ್ರ ಇರಬೇಕು. ಯಾರಾದ್ರು ಇದಕ್ಕೆ ವಿರುದ್ಧವಾಗಿ ನಡೆದು ಕೊಂಡರೆ ಆ ಮಕ್ಕಳನ್ನು ಶಾಲೆಗೆ ಸೇರಿಸದಿರೊ ಬಗ್ಗೆ ತೀರ್ಮಾನಿಸಲಾಗಿದೆ. ಸಮಿತಿ ತೀರ್ಮಾನಕ್ಕೆ ಎಲ್ಲಾ ಪೋಷಕರು ಒಪ್ಪಿದ್ದಾರೆ ಅದರಂತೆ ಎಲ್ಲರೂ ನಿಯಮ ಪಾಲನೆ ಮಾಡಲಿದ್ದಾರೆ ಎಂದು ಹೇಳಿದರು. ಶಾಲಾ ಕೊಠಡಿಯಲ್ಲಿ ವೇಲ್ ಹಾಕಿ‌ ಕೂರಲು ಅವಕಾಶ ನೀಡಿ ಎಂದು ಮುಸ್ಲಿಂ ಪೋಷಕರು ಒತ್ತಾಯಿಸಿದ್ದರು. ಪ್ರೌಡಶಾಲಾ ವಿಭಾಗದ ಮಕ್ಕಳು ಹಿಜಾಬ್ ತೆಗೆದು ಶಾಲ್ ಹಾಕಿ ಬರಲು ಪೋಷಕರ ಒಪ್ಪಿಕೊಂಡಿದ್ದು, ಈ ಬಗ್ಗೆ ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಪೋಷಕರು ಜಂಟಿ ಹೇಳಿಕೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಹಿಜಬ್ ಧರಿಸಿ ಬರಲು ಅವಕಾಶ ಕೋರಿ ಮಕ್ಕಳು ಪ್ರತಿಭಟನೆ ನಡೆಸಿದ್ದರು. ಪರೀಕ್ಷೆ ಹಾಗೂ ಶಿಕ್ಷಣದ ದೃಷ್ಟಿಯಿಂದ ಪೋಷಕರು ಹಾಗು ಎಸ್.ಡಿ.ಎಂ.ಸಿ ಮಕ್ಕಳ ಮನವೊಲಿಸಿದ್ದು, ಎಲ್ಲರ ಒಪ್ಪಿಗೆಯಂತೆ ವೇಲ್ ಧರಿಸಿ ನಮ್ಮ‌ ಮಕ್ಕಳು ಶಾಲೆ ಬರ್ತಾರೆ ಎಂದು ಪೋಷಕರು ಹೇಳಿದ್ದಾರೆ.

ಇದನ್ನೂ ಓದಿ:

Sri Ram Sene: ಕರ್ನಾಟಕದಲ್ಲಿ ರಾಕ್ಷಸರನ್ನು ಬೆಳೆಸುತ್ತಿದೆ ಬಿಜೆಪಿ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್