ಪಾವಗಡದ ಸರ್ಕಾರಿ ಶಾಲೆಯಲ್ಲಿ ಕಡಲೆ ಚಿಕ್ಕಿ ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥ

ಪಾವಗಡ ತಾಲ್ಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಿದ ಕಡಲೆ ಚಿಕ್ಕಿಯನ್ನು ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತಹಶೀಲ್ದಾರ್ ಮತ್ತು ಬಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪಾವಗಡದ ಸರ್ಕಾರಿ ಶಾಲೆಯಲ್ಲಿ ಕಡಲೆ ಚಿಕ್ಕಿ ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥ
ಪಾವಗಡದ ಸರ್ಕಾರಿ ಶಾಲೆಯಲ್ಲಿ ಕಡಲೆ ಚಿಕ್ಕಿ ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2024 | 6:53 PM

ತುಮಕೂರು, ನವೆಂಬರ್​ 29: ಕಡಲೆ ಚಿಕ್ಕಿ ತಿಂದು 46 ವಿದ್ಯಾರ್ಥಿಗಳಿಗೆ (Students) ವಾಂತಿಯಾಗಿ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಧ್ಯಾಹ್ನ ಬಿಸಿಯೂಟ ವೇಳೆ ನೀಡಿದ್ದ ಚಿಕ್ಕಿ ತಿಂದು ಅಸ್ವಸ್ಥರಾಗಿದ್ದಾರೆ. ಕೊಡಲೇ ಅಸ್ವಸ್ಥ ಮಕ್ಕಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಬಿಇಒ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಫುಡ್ ಪಾಯಿಸನ್​ನಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ-ಭೇದಿ

ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಮೂರು ದಶಕದಷ್ಟು ಹಳೆದಾದ ಬಸವತೀರ್ಥ ಮಠವಿದೆ. ಈ ಮಠದ ಅಡಿಯಲ್ಲಿಯೇ ಬಸವತೀರ್ಥ ವಿದ್ಯಾಪೀಠ ಶಾಲೆ ನಡೆಯುತ್ತಿದೆ. 1 ರಿಂದ 10ನೇ ತರಗತಿಯ ವೆರೆಗೆ ಐನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಗ್ರಾಮೀಣ ಭಾಗದ‌ ಮಕ್ಕಳು ಈ ವಸತಿ ಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಗುರುಕುಲದ ವಸತಿ ಶಾಲೆಯಲ್ಲಿ ರಾತ್ರಿ ಉಳಿದಿದ್ದ ಅನ್ನವನ್ನ ಮುಂಜಾನೆ ಒಗ್ಗರಣೆ ಹಾಕಿ ಮಕ್ಕಳಿಗೆ ಬೆಳಗಿನ ತಿಂಡಿ ಕೊಟ್ಟಿದ್ದಾರೆ. ಹೀಗಾಗಿ ವಿಷಹಾರ ಸೇವಿದ ಮಕ್ಕಳು ಏಕಾಏಕಿ ವಾಂತಿ ಹಾಗೂ ಭೇದಿ ಮಾಡಕೊಳ್ಳಲು ಶುರುಮಾಡಿದ್ದರು.

ಇದನ್ನೂ ಓದಿ: ಗುಡ್​ನ್ಯೂಸ್: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ ಭಾಗ್ಯ.. !

ಆರಂಭದಲ್ಲಿ ಓರ್ವ ವಿದ್ಯಾರ್ಥಿಗೆ ವಾಂತಿ ಭೇದಿ ಶುರುವಾಗಿತ್ತು. ಕೆಲವೇ ಹೊತ್ತಿನಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿತ್ತು. ತಕ್ಷಣ ಎಚ್ಚತ್ತುಕೊಂಡು ಗುರುಕುಲದ ಶಿಕ್ಷಕರು ಮಕ್ಕಳನ್ನ ಹುಮ್ನಾಬಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಇದನ್ನೂ ಓದಿ: ಉತ್ತರ ಕನ್ನಡ: ಟಿವಿ9 ವರದಿ ಫಲಶ್ರುತಿ, ಜೋಯಿಡಾದ ಆ ಗ್ರಾಮಗಳಿಗೆ ಕೊನೆಗೂ ಬಂತು ಬಸ್

ಇನ್ನೂ ಸುದ್ದಿ ತಿಳಿಯುತ್ತಿದಂತೆ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಕರ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಮಕ್ಕಳು ತಿಂದ ಆಹಾರ ಪರಿಶೀಲನೆ ಕಳುಹಿಸಿ ಏನು ಸಮಸ್ಯೆ ಆಗಿದೆ ಅನ್ನೋದರ ಬಗ್ಗೆ ತಿಳಿಯಬೇಕಿದೆ ಎಂದು ಡಾ ಚಂದ್ರಶೇಖರ ಪಾಟೀಲ್ ತಿಳಿಸಿದ್ದರು. ಮಕ್ಕಳ ವಿಶೇಷ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?
ಒಂದೇ ಓವರ್​ನಲ್ಲಿ 28 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ; ವಿಡಿಯೋ ನೋಡಿ
ಒಂದೇ ಓವರ್​ನಲ್ಲಿ 28 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ; ವಿಡಿಯೋ ನೋಡಿ
ಎಲ್ಲ ಪಕ್ಷಗಳಂತೆ ಕಾಂಗ್ರೆಸ್​ನಲ್ಲೂ ಭಿನ್ನಮತವಿದೆ: ಸತೀಶ್ ಜಾರಕಿಹೊಳಿ
ಎಲ್ಲ ಪಕ್ಷಗಳಂತೆ ಕಾಂಗ್ರೆಸ್​ನಲ್ಲೂ ಭಿನ್ನಮತವಿದೆ: ಸತೀಶ್ ಜಾರಕಿಹೊಳಿ
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ, ಬಸ್ ಪಲ್ಟಿಯಾಗಿ 8 ಮಂದಿ ಸಾವು
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ, ಬಸ್ ಪಲ್ಟಿಯಾಗಿ 8 ಮಂದಿ ಸಾವು
ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ
ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ