AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ರಾಯಚೂರಿನಲ್ಲಿ ಗಲಾಟೆಗೆ ಕಾರಣವಾದ 12 ಪರೀಕ್ಷಾರ್ಥಿಗಳ ವಿರುದ್ದ ಎಫ್‌ಐಆರ್

ಸಿಂಧನೂರಿನಲ್ಲಿ ನಡೆದ ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಕ್ಕೆ ಸಂಬಂಧಿಸಿದಂತೆ 12 ಜನ ಪರೀಕ್ಷಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರೀಕ್ಷಾ ಮೇಲ್ವಿಚಾರಕರ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ವೇಳೆ ಗಲಾಟೆಗೆ ಕಾರಣವಾದ ಅಭ್ಯರ್ಥಿಗಳು ಸುಳ್ಳು ಸುದ್ದಿ ಹಬ್ಬಿಸಿ, ಪ್ರಚೋದನೆ ನೀಡಿದ ಆರೋಪ ಮಾಡಲಾಗಿದೆ.

ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ರಾಯಚೂರಿನಲ್ಲಿ ಗಲಾಟೆಗೆ ಕಾರಣವಾದ 12 ಪರೀಕ್ಷಾರ್ಥಿಗಳ ವಿರುದ್ದ ಎಫ್‌ಐಆರ್
ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ರಾಯಚೂರಿನಲ್ಲಿ ಗಲಾಟೆಗೆ ಕಾರಣವಾದ 12 ಪರೀಕ್ಷಾರ್ಥಿಗಳ ವಿರುದ್ದ ಎಫ್‌ಐಆರ್
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 10:58 AM

Share

ರಾಯಚೂರು, ನವೆಂಬರ್​ 18: ನಿನ್ನೆ ನಡೆದಿದ್ದ ಪಿಡಿಒ (PDO) ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ವೇಳೆ ಗಲಾಟೆಗೆ ಕಾರಣವಾಗಿದ್ದ 12 ಜನ ಪರೀಕ್ಷಾರ್ಥಿಗಳ ವಿರುದ್ದ ಜಿಲ್ಲೆಯ ಸಿಂಧನೂರು ಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಿಂದ ವಿವಾದ ಶುರುವಾಗಿತ್ತು. ಪ್ರಶ್ನೆ ಪತ್ರಿಕೆ ಲೀಕ್​ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಅಭ್ಯರ್ಥಿಗಳು ಹೋರಾಟ ಮಾಡಿದ್ದರು.

12 ಜನರ ವಿರುದ್ದ ಎಫ್​ಐಆರ್​

ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್​ರಿಂದ ದೂರು ನೀಡಿದ್ದು, ಪಶುಪತಿ, ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ 12 ಜನರು ಯಾದಗಿರಿ ಮೂಲದರು ಎನ್ನಲಾಗಿದೆ. ಸುಳ್ಳು ಸುದ್ದಿ ಹಬ್ಬಿಸಿರುವುದು, ಪ್ರಚೋದನೆ, ರಸ್ತೆ ತಡೆದು ಪ್ರತಿಭಟನೆ ಆರೋಪದಡಿ ಎಫ್​ಐಆರ್​ ದಾಖಲಿಸಲಾಗಿದೆ. ಪಶುಪತಿ ಎಂಬ ಅಭ್ಯರ್ಥಿ ಘಟನೆಗೆ ಕಾರಣ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC

ಕೊಠಡಿ ಸಂಖ್ಯೆ 05 ರಲ್ಲಿದ್ದ ಅಭ್ಯರ್ಥಿ ಪಶುಪತಿ, ಪರೀಕ್ಷೆ ಬುಕ್ ಲೆಟ್ ನೀಡುವ ವೇಳೆ ನಮ್ಮ ಎದುರು ಸೀಲ್ ಓಪನ್ ಮಾಡಿಲ್ಲ. ಮೊದಲೇ ಓಪನ್ ಮಾಡಿದ್ದಿರಿ ಅಂತ ಪರೀಕ್ಷಾ ಸಂಯೋಜಕರೊಂದಿಗೆ ವಾಗ್ವಾದ ಮಾಡಿದ್ದಾರೆ. ಬಳಿಕ ಇತರೆ ರೂಂ ಗಳಿಗೆ ತೆರಳಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಅಂತ ಎಲ್ಲರನ್ನ ಸೇರಿಸಿ ಗಲಾಟೆಗೆ ಕಾರಣವಾದ ಆರೋಪ ಮಾಡಲಾಗಿದೆ. ಹೀಗಾಗಿ ಪಶುಪತಿಯನ್ನು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಪೊಲೀಸರು ಬಿಟ್ಟಿದ್ದಾರೆ.

ಇನ್ನು ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅಭ್ಯರ್ಥಿಗಳು ಕುಷ್ಟಗಿ- ಸಿಂಧನೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿದ್ದರು.

ಬೀದಿಗಿಳಿದು ನೂರಾರು ಅಭ್ಯರ್ಥಿಗಳ ಆಕ್ರೋಶ

ಕಲಬುರಗಿಯ ಗುಡ್ ಶೆಫರ್ಡ್​ ಎಕ್ಸಾಂ ಸೆಂಟರ್​ನಲ್ಲಿ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದ್ರಂತೆ. ಒಂದು ರೂಂನಲ್ಲಿ 24 ಅಭ್ಯರ್ಥಿಗಳಿದ್ರೂ, ಕೇವಲ 12 ಪ್ರಶ್ನೆಪತ್ರಿಕೆಗಳನ್ನ ನೀಡಿದ್ದಾರೆ. ಅಷ್ಟೇ ಅಲ್ಲ, ಅನ್ ಶೀಲ್ಡ್ ಬಂಡಲ್​ನಲ್ಲಿ ಪ್ರಶ್ನೆ ಪತ್ರಿಕೆ ತಂದಿದ್ದು ಅನುಮಾನಕ್ಕೂ ಕಾರಣವಾಗಿತ್ತು. ಸರ್ಕಾರ ತಕ್ಷಣ ಪಿಡಿಓ ಮರು ಪರೀಕ್ಷೆ ಮಾಡಬೇಕು ಅಂತಾ ಅಭ್ಯರ್ಥಿಗಳು ಕಣ್ಣೀರಿಟ್ಟು ಅಂಗಲಾಚಿದ್ದರು.

ಬೆಳಗ್ಗೆ ಏಕ್ಸಾಂ ಬಾಯ್ಕಾಟ್​ಗೆ ನಿರ್ಧರಿಸಿದ್ರಂತೆ. ಆದರೆ ಅಧಿಕಾರಿಗಳು ಯಾರ‌ನ್ನೂ ಹೊರಬಿಡದೆ ಕೂಡಿ ಹಾಕಿದ್ರಂತೆ. ಕೆಲ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಸರ್ಕಾರ ಮತ್ತು ಕೆಪಿಎಸ್​ಸಿ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಲಕ್ಷ ಲಕ್ಷ ಗೋಲ್ ಮಾಲ್; ಪಿಡಿಓ ವಿರುದ್ಧ ಪೊಲೀಸ್ ಠಾಣೆಗೆ ಮೇಲಾಧಿಕಾರಿಯಿಂದ ದೂರು

ಪ್ರತಿಬಾರಿಯೂ ಕೆಪಿಎಸ್​ಸಿ ಒಂದಲ್ಲಾ ಒಂದು ಎಡವಟ್ಟು ಮಾಡ್ತಾನೆ ಇರುತ್ತೆ. ಈ ಬಾರಿಯೂ ಮಾಡಿದ ಎಡವಟ್ಟಾಗಿದ್ದು, ಮರು ಪರೀಕ್ಷೆ ನಡೆಸುತ್ತಾ? ಅಥವಾ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಾ ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?