ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದು ಕರ್ನಾಟಕದ ಜನರೇ ಹೊರತು ಕೆಸಿ ವೇಣುಗೋಪಾಲ್ ಅಲ್ಲ: ಲೆಹರ್‌ ಸಿಂಗ್ ಕಿಡಿ

|

Updated on: Sep 26, 2024 | 3:15 PM

ತಮ್ಮ ಕುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆ.ಸಿ.ವೇಣುಗೋಪಾಲ್​ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವುದು ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್​ ಕಿಡಿಕಾರಿದ್ದಾರೆ. ಸಿದ್ದರಾಮಯ್ಯರನ್ನು ರಾಜಕೀಯ ವೃತ್ತಿಜೀವನದಲ್ಲಿ ಉಳಿಸಿಕೊಂಡಿದ್ದು, ಕರ್ನಾಟಕದ ಜನರೇ ಹೊರತು ಕೆಸಿ ವೇಣುಗೋಪಾಲ್ ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದು ಕರ್ನಾಟಕದ ಜನರೇ ಹೊರತು ಕೆಸಿ ವೇಣುಗೋಪಾಲ್ ಅಲ್ಲ: ಲೆಹರ್‌ ಸಿಂಗ್ ಕಿಡಿ
ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದು ಕರ್ನಾಟಕದ ಜನರೇ ಹೊರತು ಕೆಸಿ ವೇಣುಗೋಪಾಲ್ ಅಲ್ಲ: ಲೆಹರ್‌ ಸಿಂಗ್ ಕಿಡಿ
Follow us on

ಬೆಂಗಳೂರು, ಸೆಪ್ಟೆಂಬರ್​ 26: 2018ರ ವಿಧಾನಸಭೆ ಚುನಾವಣೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸಲಹೆಯಂತೆ ಚಾಮುಂಡೇಶ್ವರಿ ಮತ್ತು ಬಾದಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ರಾಜಕೀಯವಾಗಿ ನಾನು ಗೆದ್ದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್​ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯರನ್ನು ರಾಜಕೀಯವಾಗಿ ಗೆಲ್ಲಿಸಿದ್ದು ಕರ್ನಾಟಕದ ಜನರು ಹೊರತು ಕೆಸಿ ವೇಣುಗೋಪಾಲ್ ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಲೆಹರ್‌ ಸಿಂಗ್, ರೊಟ್ಟಿಯ ಯಾವ ಭಾಗಕ್ಕೆ ಬೆಣ್ಣೆ ಹಚ್ಚಲಾಗಿದೆ ಎಂಬುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ರಾಜಕೀಯ ವೃತ್ತಿಯಿಂದ ತಮ್ಮನ್ನು ಬಚಾವ್​ ಮಾಡಿದ್ದಕ್ಕೆ  ಕೆ.ಸಿ.ವೇಣುಗೋಪಾಲ್ ಅವರನ್ನು ಸಿದ್ದರಾಮಯ್ಯ ಅವರು ಹಾಡಿಹೊಗಳಿದ್ದಲ್ಲದೇ ಧನ್ಯವಾದ ಕೂಡ ತಿಳಿಸಿರುವುದು ಸದ್ಯ ವರದಿಯಾಗಿದೆ.

ಲೆಹರ್‌ ಸಿಂಗ್ ಟ್ವೀಟ್​ 


ರಾಜಕೀಯವಾಗಿ ಯಾರಾದರೂ ತಮ್ಮ ವೃತ್ತಿಜೀವನದಲ್ಲಿ ಉಳಿದುಕೊಂಡಿದ್ದಾರೆ ಎಂದರೆ ಅದಕ್ಕೆ ಕರ್ನಾಟಕದ ಜನರು ಮಾತ್ರ ಕಾರಣ. ಸದ್ಯ ಸಿಎಂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಕುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆ.ಸಿ.ವೇಣುಗೋಪಾಲ್​ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವುದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪ್ರಾಸಿಕ್ಯೂಷನ್​ ವಿಚಾರ: ಸಿದ್ದರಾಮಯ್ಯ ವೈಯಕ್ತಿಕವಾಗಿ ಹೋರಾಡಬೇಕೇ ಹೊರತು ಸಿಎಂ ಆಗಲ್ಲ, ಲೆಹರ್‌ ಸಿಂಗ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಕೆ.ಸಿ.ವೇಣುಗೋಪಾಲ್​ ಅವರು ರಾಹುಲ್ ಗಾಂಧಿ ಮೇಲೆ ಹೆಚ್ಚಿನ ಪ್ರಭಾವ ಬೀರಿರುವುದಾಗಿ ಸ್ವತಃ ಕಾಂಗ್ರೆಸ್ಸಿಗರೇ ಹೇಳುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಅಂತವರಿಗೆ ತಮ್ಮ ರಾಜಕೀಯ ಜೀವನ ವಿಚಾರವಾಗಿ ಯಾವತ್ತೂ ಮನ್ನಣೆ ನೀಡದ ಸಿಎಂ ಸಿದ್ದರಾಮಯ್ಯ ಇಂದು ಕೆ.ಸಿ.ವೇಣುಗೋಪಾಲ್​ರಿಗೆ ಧನ್ಯವಾದ ಹೇಳುತ್ತಿರುವುದು ಬೇಸರದ ಸಂಗತಿ. ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲದೇ ಬೇರೇನೂ ಅಲ್ಲ. 2018ರಲ್ಲಿ ಮೈಸೂರಿನ ಜನರಿಂದ ತಿರಸ್ಕೃತವಾಗುತ್ತಿರುವುದು ಕೆ.ಸಿ.ವೇಣುಗೋಪಾಲ್​ ಅವರಿಗೆ ಗೊತ್ತಿತ್ತು ಎಂಬುವುದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಸೈಟ್ ಬದಲಿಗೆ 62 ಕೋಟಿ ರೂ. ಪರಿಹಾರ ಕೇಳಿದ ಸಿಎಂಗೆ ತಿವಿದ ಲೇಹರ್ ಸಿಂಗ್

ಇದೀಗ ಮುಡಾ ಪ್ರಕರಣದಲ್ಲೂ ಮೈಸೂರಿನ ಜನತೆ ಸಿದ್ದರಾಮಯ್ಯ ಅವರನ್ನು ಮತ್ತೆ ತಿರಸ್ಕರಿಸಲಿದ್ದಾರೆ. ಅವರು ಎಷ್ಟು ಒತ್ತಡಕ್ಕೆ ಒಳಗಾಗಿದ್ದಾರೆಂದು ಅದು ನಮಗೆ ಗೊತ್ತಿದೆ. ಈಗಲೂ ತಡವಾಗಿಲ್ಲ, ಮುಡಾ ಪ್ರಕರಣದಲ್ಲಿ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಹೈಕೋರ್ಟಿನ ತೀರ್ಪನ್ನು ಯಾರಾದರೂ ಓದಿದರೆ, ಅದು ಎಷ್ಟು ದೊಡ್ಡ ಹಗರಣ ಎಂಬ ಅನುಮಾನ ನೋಡುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.