ಪ್ರಾಸಿಕ್ಯೂಷನ್ ವಿಚಾರ: ಸಿದ್ದರಾಮಯ್ಯ ವೈಯಕ್ತಿಕವಾಗಿ ಹೋರಾಡಬೇಕೇ ಹೊರತು ಸಿಎಂ ಆಗಲ್ಲ, ಲೆಹರ್ ಸಿಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ವಿಚಾರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಪ್ರಕರಣದ ವಿಚಾರವಾಗಿ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಹೋರಾಟ ಮಾಡಬೇಕೇ ಹೊರತು, ಸಿಎಂ ಆಗಿಯಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (muda) ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಈ ವಿಚಾರವಾಗಿ ಸದ್ಯ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ. ಮುಡಾ ಹಗರಣ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಆರೋಪವಾಗಿದ್ದು ಅವರು ಒಬ್ಬ ವ್ಯಕ್ತಿಯಾಗಿ ಹೋರಾಡಬೇಕೇ ಹೊರತು ಸಿಎಂ ಆಗಿ ಅಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕಿಡಿಕಾರಿದ್ದಾರೆ.
ಸದ್ಯ ಈ ವಿಚಾರವಾಗಿ ಟ್ವೀಟ್ ಮಾಡಿರುವ ಲೆಹರ್ ಸಿಂಗ್, ಮುಡಾ ಹಗರಣ ಸಿದ್ದರಾಮಯ್ಯ ಸೇರಿದಂತೆ ಅವರ ಪತ್ನಿ ಮತ್ತು ಕುಟುಂಬದ ವಿರುದ್ಧದ ಸಂಪೂರ್ಣವಾಗಿ ವೈಯಕ್ತಿಕ ಆರೋಪವಾಗಿದೆ. ಇದು ಅವರ ಒಡೆತನದ ಖಾಸಗಿ ಭೂಮಿಗೆ ಸಂಬಂಧಿಸಿರುವುದು. ಹಾಗಾಗಿ ಅವರು ವೈಯಕ್ತಿಕವಾಗಿ ಹೋರಾಟ ಮಾಡಬೇಕೇ ಹೊರತು, ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆಗಿ ಅಲ್ಲ. ಇದರ ವ್ಯತ್ಯಾಸ ಸಿಎಂ ಅವರಿಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
The #MUDAScam is a purely personal allegation against Shri @siddaramaiah, his wife and family. It is about private land they own. He should fight it as an individual, not as CM by involving the state government machinery. Am sure CM knows the difference. @INCIndia @BJP4India
— Lahar Singh Siroya (@LaharSingh_MP) August 17, 2024
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ತಮ್ಮ ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಅಂತಾ ಬಿಜೆಪಿ ಆರೋಪಿಸಿತ್ತು. ಅಷ್ಟೇ ಅಲ್ಲ ಬೆಂಗಳೂರಿನಿಂದ ಮೈಸೂರು ವರೆಗೂ ಪಾದಯಾತ್ರೆ ನಡೆಸಿತ್ತು. ಇದರ ನಡುವೆ ಟಿಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಖಾಸಗಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸಿದ್ದರಾಮಯ್ಯ ವಿರುದ್ಧ ಯಾವೆಲ್ಲಾ ಸೆಕ್ಷನ್? ಇಲ್ಲಿದೆ ವಿವರ
ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜಭವನದ ಕದ ತಟ್ಟಿದ್ದರು. ಇವರ ದೂರು ಪರಿಗಣಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅನುಮತಿ ಬೆನ್ನಲ್ಲೇ ದೂರುದಾರ ಅಬ್ರಾಹಿಂ ಇಂದು ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.