ವ್ಯಕ್ತಿಯೊರ್ವನಿಗೆ ಪಿಎಸ್​​ಐ ನಿಂದ ಕಿರುಕುಳ ಆರೋಪ; ಮನನೊಂದು ಠಾಣೆ ಮುಂದೆಯೇ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಆತ ತನ್ನ ಮಾವನ ಸಮಸ್ಯೆ ಪರಿಹಾರ ಮಾಡಿಸಲೆಂದು ಪೊಲೀಸ್ ಠಾಣೆಗೆ ಹೋಗಿದ್ದ, ಸಮಸ್ಯೆಗೆ ಪರಿಹಾರ ಕೊಡಬೇಕಿದ್ದ ಪೊಲೀಸರು, ಸಮಸ್ಯೆ ಹೇಳಲು ಬಂದವನ ಮೇಲೆಯೇ ದೌರ್ಜನ್ಯ ಮಾಡಿದ್ದಾರೆ. ನೊಂದ ವ್ಯಕ್ತಿ ಠಾಣೆ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ವ್ಯಕ್ತಿಯೊರ್ವನಿಗೆ ಪಿಎಸ್​​ಐ ನಿಂದ ಕಿರುಕುಳ ಆರೋಪ; ಮನನೊಂದು ಠಾಣೆ ಮುಂದೆಯೇ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಪಿಎಸ್​ಐ ಬಸವರಾಜ್​​
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 9:54 PM

ಉತ್ತರ ಕನ್ನಡ, ಜೂ.14: ಜಿಲ್ಲೆಯ ಜೋಯಿಡಾ(Joida) ತಾಲೂಕಿನ ರಾಮನಗರದ ಹನುಮಾನ ಗಲ್ಲಿಯ ನಿವಾಸಿ ಆಗಿರುವ ಭಾಸ್ಕರ್​ ಬೋಂಡೆಲ್ಕರ್ ಮತ್ತು ರಾಮನಗರ ಪಿಎಸ್​ಐ ಬಸವರಾಜ್ ನಡುವೆ ಕಳೆದ ಐದಾರು ತಿಂಗಳಿನಿಂದ ವೈಮನಸ್ಸಿತ್ತು. ಆದ್ರೆ, ಕೆಲ ದಿನಗಳಿಂದ ಪಿಎಸ್​ಐನಿಂದ ದೂರ ಇದ್ದ ಭಾಸ್ಕರ್​. ತನ್ನ ಮಾವ ಗಣಪತಿ ಎಂಬುವವರು ಪ್ಲಾಟ ವಿಚಾರದಲ್ಲಿ ನೋಟಿಸ್ ಕೊಟ್ಟಿದಕ್ಕೆ, ನಿನ್ನೆ(ಜೂ.13) ರಾತ್ರಿ ರಾಮನಗರ ಪೊಲೀಸ್ ಠಾಣೆಗೆ ಬಂದಿದ್ದ. ಈ ಸಂದರ್ಭದಲ್ಲಿ ಪಿಎಸ್​ಐ ಬಸವರಾಜ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪಿಎಸ್ಐ ಮತ್ತು ಠಾಣೆಯ ಇನ್ನಿತರ ಸಿಬ್ಬಂಧಿಗಳು ಸೇರಿ ಈತನ ಬಳಿಯ ಮೊಬೈಲ್ ಕಸಿದುಕೊಂಡು ದೌರ್ಜನ್ಯ ಮಾಡಿದ್ದಾರೆಂದು ಭಾಸ್ಕರ್​ ಆರೋಪಿಸಿದ್ದಾರೆ.

ಮೈ ಮೆಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡ ಸ್ಪಂದಿಸಿಲ್ಲ. ಇನ್ನು ತನ್ನ ಸಮಸ್ಯೆಗೆ ನ್ಯಾಯ ಕೊಡಬೇಕಿದ್ದ ಪೊಲೀಸರೆ ತನ್ನ ಮೇಲೆ ದೌರ್ಜನ್ಯ ಮಾಡುತ್ತಿರುವುದಕ್ಕೆ ನೊಂದ ಭಾಸ್ಕರ್, ಮೈ ಮೆಲೆ ಪೆಟ್ರೊಲ್ ಸುರಿದುಕೊಂಡು ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆಗೆ ಯತ್ನಸಿದ್ದ. ಈ ಸಂದರ್ಭದಲ್ಲಿ ಕೂಡಲೆ ಎಚ್ಚೆತ್ತ ಪೊಲೀಸ್ರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣು

ಇನ್ನು ಭಾಸ್ಕರ್​ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಎಎಸ್​ಪಿ ಜಯಕುಮಾರ್​, ‘ಭಾಸ್ಕರ್ ನಿನ್ನೆ ರಾತ್ರಿ ಮಧ್ಯಪಾನ ಮಾಡಿ ಠಾಣೆಗೆ ಬಂದು ತನ್ನ ಮಾವನಿಗೆ ಯಾಕೆ ನೋಟಿಸ್ ಕೊಟ್ಟಿದ್ದಿರಾ ಎಂದು ಜೋರಾಗಿ ಪ್ರಶ್ನಿಸುತ್ತಾನೆ. ನೋಟಿಸ್ ಬಗ್ಗೆ ಸರಿಯಾದ ಮಾಹಿತಿ ಕೊಟ್ರು ಸಹಿತ, ಪೊಲೀಸ್ ಠಾಣೆಯಲ್ಲಿ ದುರ್ವತನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತ ಅತಿಯಾಗಿ ಮಧ್ಯಪಾನ ಮಾಡಿರುವುದು ಗೊತ್ತಾಗಿ ಆತನ ಬೈಕ್ ಕೀಯನ್ನು ವಶಕ್ಕೆ ಪಡಿದಿದ್ದಾರೆ. ನೀನು ಮಧ್ಯಪಾನ ಮಾಡಿದಿಯಾ ಬೇರೆ ಯಾರಿಗಾದರೂ ಕರೆಸಿ ಗಾಡಿ ತೊಗೊಂಡ ಹೋಗು ಎಂದು ಹೇಳಿದಕ್ಕೆ ಕೋಪಗೊಂಡ ಭಾಸ್ಕರ್​ ಮೈ ಮೇಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ಸಿಬ್ಬಂಧಿಗಳು ಆತನನ್ನು ರಕ್ಷಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಯಕುಮಾರ ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಪದ ಕೈಯಲ್ಲಿ ಬುದ್ದಿ ಕೊಟ್ಟ ಭಾಸ್ಕರ್​ ತನ್ನ ಜೀವ ಕಳೆದುಕೊಳ್ಳಲು ಮುಂದಾಗಿದ್ದ. ಸದ್ಯ ಪೊಲೀಸ್ರ ಮುಂಜಾಗೃತೆಯಿಂದ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ದೇಹ ಸುಟ್ಟ ಹಿನ್ನೆಲೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us