AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರ ವಿರುದ್ಧ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್

ಚಂದ್ರಶೇಖರನಾಥ ಸ್ವಾಮೀಜಿಯವರ ಮತದಾನ ಹಕ್ಕು ಕುರಿತ ವಿವಾದಾತ್ಮಕ ಹೇಳಿಕೆಗೆ ಎಫ್ಐಆರ್ ದಾಖಲಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಸ್ವಾಮೀಜಿಯವರು ವಿಚಾರಣೆಗೆ ಹಾಜರಾಗಬೇಕಿದೆ. ಈ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಬಹುತೇಕರು ಸ್ವಾಮೀಜಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಮುಸ್ಲಿಮರ ವಿರುದ್ಧ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್
ಮುಸ್ಲಿಮರ ವಿರುದ್ಧ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್
ಕಿರಣ್​ ಹನಿಯಡ್ಕ
| Edited By: |

Updated on: Nov 29, 2024 | 6:17 PM

Share

ಬೆಂಗಳೂರು, ನವೆಂಬರ್​ 29: ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಒಕ್ಕಲಿಗ ಮಠದ ಚಂದ್ರಶೇಖರನಾಥ ಶ್ರೀಗಳ ಹೇಳಿಕೆ ಸದ್ಯ ವಿವಾದ ಸೃಷ್ಟಿಸಿದೆ. ಅವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಇದೀಗ ಡಿ.2ರಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ.

ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಬಿಎನ್​​ಎಸ್ ಸೆಕ್ಷನ್ 299 ರ ಅಡಿಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚಂದ್ರಶೇಖರನಾಥ ಸ್ವಾಮೀಜಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ವಕ್ಫ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, ಮತದಾನದ ಹಕ್ಕಿಗೆ ಕೈ ಹಾಕಿದ್ದಾರೆ. ಮುಸ್ಲಿಮರಿಗೆ ಮತದಾನದ ಪವರ್ ಇಲ್ಲದಂತೆ ಮಾಡಿಬಿಡಬೇಕು ಅಂತಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದಿದ್ದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್​ಐಆರ್

ವಿವಾದ ದೊಡ್ಡದಾಗುತ್ತಿದ್ದಂತೆ ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು. ಅದು ಬಾಯಿ ತಪ್ಪಿ ಆಡಿದ ಮಾತು. ಹಾಗೆ ಹೇಳಬಾರದಾಗಿತ್ತು. ಮುಸ್ಲಿಮರು ಭಾರತೀಯರೇ ಹೊರತು ಬೇರೆ ಯಾರೂ ಅಲ್ಲ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಸ್ವಾಮೀಜಿ ಮನವಿ ಮಾಡಿದ್ದರು.

ಸ್ವಾಮೀಜಿಗೆ ಧೈರ್ಯ ಹೇಳಿದ ಬಿಜೆಪಿ ನಾಯಕರು

ಇನ್ನು ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ FIR ಹಿನ್ನೆಲೆ ಆರ್​.ಅಶೋಕ್ ಮತ್ತು ಡಾ.ಅಶ್ವತ್ಥ್ ನಾರಾಯಣ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಕೆಲಹೊತ್ತು ಮಾತುಕತೆ ನಡೆಸಿ ಸ್ವಾಮೀಜಿಗೆ ಧೈರ್ಯ ಹೇಳಿದ್ದಾರೆ.

ಕಾನೂನಾತ್ಮಕವಾಗಿ ಜೊತೆಗಿರುತ್ತೇವೆ: ಸ್ವಾಮೀಜಿಗೆ ಅಶ್ವತ್ಥ್​​ ನಾರಾಯಣ ಭರವಸೆ 

ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಶಾಸಕ ಡಾ.ಅಶ್ವತ್ಥ್​​ ನಾರಾಯಣ, ಗುರುಗಳನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಜೊತೆಗೆ ಇರುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ. ಹೋರಾಟ ಮಾಡುವ ಪರಿಸ್ಥಿತಿ ಇನ್ನೂ ಉದ್ಭವ ಆಗಿಲ್ಲ. ಅಧಿವೇಶನದಲ್ಲಿ ವಕ್ಫ್​ ವಿಚಾರವಾಗಿ ಹೋರಾಟ ಮಾಡ್ತೇವೆ. ಚಂದ್ರಶೇಖರನಾಥ ಸ್ವಾಮೀಜಿ ಕೂಡಾ ಬಹಳ ನೊಂದಿದ್ದಾರೆ. ಹೇಳಿಕೆ ಹಿಂಪಡೆದ ಬಳಿಕ ಕೇಸ್ ಹಾಕುವುದು ನೋಡಿದರೆ, ಸರ್ಕಾರ ತನ್ನ ಬೇರೆ ಬೇರೆ ಕೋಪ ಈ ರೀತಿ ತೀರಿಸಿಕೊಳ್ಳುತ್ತಿದೆ ಎಂದಿದ್ದಾರೆ.

ನಿಮ್ಮ ನೋಟಿಸ್, ಗೊಡ್ಡು ಬೆದರಿಕೆಗೆ ಸ್ವಾಮೀಜಿಗಳು ಹೆದರಲ್ಲ: ಆರ್​.ಅಶೋಕ್

ಸ್ವಾಮೀಜಿ ಭೇಟಿ ಬಳಿಕ ವಿಪಕ್ಷ ನಾಯಕ ಆರ್​.ಅಶೋಕ್ ಪ್ರತಿಕ್ರಿಯಿಸಿದ್ದು, ನಿಮ್ಮ ನೋಟಿಸ್, ಗೊಡ್ಡು ಬೆದರಿಕೆಗೆ ಸ್ವಾಮೀಜಿಗಳು ಹೆದರಲ್ಲ. ಇಡೀ ಸಮಾಜ ಸ್ವಾಮೀಜಿಯವರ ಜೊತೆಗೆ ಇದೆ. ಕಾಂಗ್ರೆಸ್​ ಸರ್ಕಾರ ಒಕ್ಕಲಿಗರ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ದುರುಳ ಸರ್ಕಾರ ಸ್ವಾಮೀಜಿಯನ್ನು ಮುಟ್ಟಿದ್ರೆ ಸಮಾಜ ತಿರುಗಿ ಬೀಳುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಒಕ್ಕಲಿಗರ ಮಠದ ಸ್ವಾಮೀಜಿಗೆ ಧೈರ್ಯ ಹೇಳಲು ಬಂದಿದ್ದೇವೆ. ಸಮಾಜದ ಗುರುಗಳಿಗೆ ಜೊತೆಯಲ್ಲಿ ಇದ್ದೇವೆ ಎಂದು ಹೇಳಿದ್ದೇವೆ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಶ್ರೀಗಳು ಹೇಳಿದ್ದಾರೆ. ಯಾವನೋ ಒಬ್ಬ ಮುಸಲ್ಮಾನ ಮತಾಂಧ ದೂರು ಕೊಟ್ಟ ಅಂತ FIR ಮಾಡುತ್ತಾರೆ ಅಂದರೆ ಸರ್ಕಾರಕ್ಕೆ ಎಷ್ಟು ಧೈರ್ಯ ಇರಬೇಕು ಎಂದಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು: ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಮಹದೇವಪ್ಪ ಗರಂ

ಇನ್ನು ಸ್ವಾಮೀಜಿಯ ಹೇಳಿಕೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಖಂಡಿಸಿದ್ದು, ದೇಶದಲ್ಲಿ ಅಶಾಂತಿ ಸ್ಪಷ್ಟಿಸದಂತೆ ಮನವಿ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಕೂಡ ಖಂಡಿಸಿದ್ದಾರೆ. ಸಂವಿಧಾನದ ಆಶಯಗಳ ವಿರುದ್ಧ ಯಾರು ಮಾತನಾಡಬಾರದು ಎಂದಿದ್ದಾರೆ. ಇನ್ನು ಸಚಿವ H.C.ಮಹದೇವಪ್ಪ ಬಾಬಾ ಸಹ ಬಾಬಾ ಸಾಹೇಬರ ಆಶಯವನ್ನ ಮೆಲುಕು ಹಾಕಿ, ಮನುವಾದದ ಮನಸ್ಥಿತಿಗಳು ಈ ರೀತಿ ಮಾತನಾಡ್ತಿವೆ ಅಂತಾ ಗುಡುಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.