ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದು ಬಾಯಿತಪ್ಪಿ ಹೇಳಿದ್ದಷ್ಟೇ: ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟನೆ

Chandrashekharanatha swamiji clarification: ಮುಸ್ಲಿಮರಿಗೆ ಮತದಾನ ಹಕ್ಕು ನಿರಾಕರಿಸಿದರೆ ಭಾರತೀಯರು ನೆಮ್ಮದಿಯಾಗಿರಬಹುದು ಎನ್ನುವ ತಮ್ಮ ಹೇಳಿಕೆಗೆ ಚಂದ್ರಶೇಖರನಾಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಅದು ವಕ್ಫ್​ನಿಂದ ರೈತರ ಭೂಮಿ ಕಸಿದುಕೊಳ್ಳಲಾಗುತ್ತಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇದಿಕೆ ಆಗಿತ್ತು. ಅಲ್ಲಿ ಬಾಯಿ ತಪ್ಪಿ ಆ ಹೇಳಿಕೆ ನೀಡಿದೆ. ಅದಕ್ಕೆ ವಿಷಾದಿಸುತ್ತೇನೆ. ಮುಸ್ಲಿಮರೂ ಭಾರತೀಯರೆ. ಆದರೆ, ರೈತರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಸ್ವಾಮೀಜಿಗಳು ಹೇಳಿದ್ದಾರೆ.

ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದು ಬಾಯಿತಪ್ಪಿ ಹೇಳಿದ್ದಷ್ಟೇ: ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟನೆ
ಚಂದ್ರಶೇಖರನಾಥ ಸ್ವಾಮೀಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 27, 2024 | 5:51 PM

ಬೆಂಗಳೂರು, ನವೆಂಬರ್ 27: ಮುಸ್ಲಿಮರಿಗೆ ಮತದಾನ ಹಕ್ಕು ರದ್ದುಗೊಳಿಸಿದರೆ ಹಿಂದೂಗಳು ನೆಮ್ದಿಯಾಗಿರಬಹುದು ಎಂದು ತಾವು ನೀಡಿದ ಹೇಳಿಕೆಗೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿಷಾದಿಸಿದ್ದಾರೆ. ರೈತರಿಗೆ ಅನ್ಯಾಯ ಆಗುತ್ತಿರುವ ಕುರಿತಾದ ವೇದಿಕೆ ಆದಾಗಿತ್ತು. ವಕ್ಫ್ ಬೋರ್ಡ್​ನಿಂದ ರೈತರಿಗೆ ತೊಂದರೆ ಆಗುತ್ತಾ ಇತ್ತು. ಆ ಸಂದರ್ಭದಲ್ಲಿ ತಾವು ಹಾಗೆ ಹೇಳಿದ್ದು ಹೌದು. ಅದು ಬಾಯಿ ತಪ್ಪಿ ಆಡಿದ ಮಾತಾಗಿತ್ತು. ಹಾಗೆ ಹೇಳಬಾರದಾಗಿತ್ತು. ಮುಸ್ಲಿಮರು ಭಾರತೀಯರೇ ಹೊರತು ಬೇರೆ ಯಾರೂ ಅಲ್ಲ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ, ಮುಂದುವರಿಸಬೇಡಿ ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.

ರೈತರಿಗೆ ವಕ್ಫ್ ಬೋರ್ಡ್ ನೋಟೀಸ್ ನೀಡುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರಲ್ಲಿ ಚಂದ್ರಶೇಖರನಾಥ ಸ್ವಾಮೀಜಿಯೂ ಪಾಲ್ಗೊಂಡು ಮಾತನಾಡುತ್ತಾ, ಮುಸ್ಲಿಮರಿಗೆ ಮತದಾನ ಹಕ್ಕು ನಿರಾಕರಿಸಿದರೆ ಭಾರತೀಯರೆಲ್ಲರೂ ನೆಮ್ಮದಿಯಾಗಿರಬಹುದು ಎಂದು ಹೇಳಿದ್ದರು. ಈ ಒಕ್ಕಲಿಗ ಸ್ವಾಮೀಜಿಯವರ ಈ ಹೇಳಿಕೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ, ಮುಸ್ಲಿಮರಿಗೆ ಮತದಾನ ಹಕ್ಕು ನಿರಾಕರಿಸಬೇಕು ಎಂದು ಬಾಯಿ ತಪ್ಪಿ ಹೇಳಿದ್ದು ಎಂದ ಸ್ವಾಮೀಜಿ, ವಕ್ಫ್​ನಿಂದ ರೈತರಿಗೆ ಬರುತ್ತಿರುವ ನೋಟೀಸ್ ಬಗ್ಗೆ ಆಕ್ರೋಶ ಹೊರಹಾಕುವುದನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು: ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಮಹದೇವಪ್ಪ ಗರಂ

‘ವಕ್ಫ್​ನವರು ರೈತರ ಭೂಮಿಯನ್ನು ಕಸಿದುಕೊಳ್ಳಬಾರದು. ವಕ್ಫ್​ನವರಿಗೆ ಈ ಭೂಮಿ ಎಲ್ಲಿಂದ ಬಂತು? ಸರ್ಕಾರದಿಂದ ಈ ಜಾಗವು ವಕ್ಫ್​ಗೆ ಹೋಗಿಲ್ಲ ಎಂದರೆ ಅದು ಎಲ್ಲಿಂದ ಬಂತು? ಜಮೀನು ಇರೋ ಕಡೆಯೇ ಇದೆ. ರೈತರ ಬಳಿ ಇದ್ದದ್ದನು ಇವರು ಕಿತ್ತುಕೊಂಡಿದ್ದಾರೆ. ಅಂತಿಮವಾಗಿ ರೈತರಿಗೆ ಒಳ್ಳೆಯದಾಗಬೇಕು ಅಷ್ಟೇ’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.

ವಕ್ಫ್​ಗೆ ಸರ್ಕಾರದಿಂದ ಒಂದಿಂಚೂ ಜಾಗ ಹೋಗಿಲ್ಲ ಎನ್ನುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಸ್ವಾಮೀಜಿ ಈ ಮೇಲಿನ ಉತ್ತರ ನೀಡಿದ್ದಾರೆ. ಇನ್ನು, ಸ್ವಾಮೀಜಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೇ ಹೊರತು ಚಪ್ಪಾಳೆ ಗಿಟ್ಟಿಸೋದಕ್ಕೆ ಯತ್ನಿಸಬಾರದು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೂ ಪ್ರತಿಕ್ರಿಯಿಸಿದ ಚಂದ್ರಶೇಖರನಾಥ ಸ್ವಾಮೀಜಿ, ತಾವು ಹೆಸರು, ಕೀರ್ತಿಗೆ, ಚಪ್ಪಾಳೆಗೆ ಆಸೆಪಡುವವರಲ್ಲ ಎಂದಿದ್ದಾರೆ.

‘ಹಲವು ಜಿಲ್ಲೆಗಳಲ್ಲಿ ರೈತರ ಜಮೀನು ಕಸಿದುಕೊಂಡು ಅನ್ಯಾಯ ಮಾಡಲಾಗುತ್ತಿತ್ತು. ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ರೈತರಿಗೆ ಅವರ ಜಮೀನು ಸೇರಬೇಕು ಅಷ್ಟೇ. ನನಗೆ ಚಪ್ಪಾಳೆಯ ಆಸೆ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಖಾಸಗಿ ವಿವಿಗಳ ಮಂಡಳಿಗಳಲ್ಲಿ ಸರ್ಕಾರಿ ಪ್ರತಿನಿಧಿ: ಕಾನೂನು ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದು

ಇದೇ ವೇಳೆ, ಡಿಕೆ ಶಿವಕುಮಾರ್ ಅವರು ಈಗಲೂ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ತಮ್ಮಲ್ಲಿ ಈಗಲೂ ಇದೆ. ಪಕ್ಷಕ್ಕಾಗಿ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ದೇವರ ದೆಯಿಂದ ಡಿಕೆಶಿ ಸಿಎಂ ಆಗಬೇಕು ಎಂದೂ ಸ್ವಾಮೀಜಿಗಳು ಹೇಳಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Wed, 27 November 24

‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ