ಖಾಸಗಿ ವಿವಿಗಳ ಮಂಡಳಿಗಳಲ್ಲಿ ಸರ್ಕಾರಿ ಪ್ರತಿನಿಧಿ: ಕಾನೂನು ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದು
Private universities without govt representative: ರಾಜ್ಯದಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ಮೂರರಲ್ಲಿ ಆಡಳಿತ ಮಂಡಗಳಲ್ಲಿ ಸರ್ಕಾರದ ಪ್ರಾತಿನಿಧ್ಯ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಂಬಂಧ ಕಾನೂನು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರ ಹೊರಟಿದಿದೆ. ಅಜೀಮ್ ಪ್ರೇಮ್ಜಿ, ಚಾಣಕ್ಯ ಮತ್ತು ಅಲಾಯನ್ಸ್ ಯೂನಿವರ್ಸಿಟಿಗಳಲ್ಲಿ ರಾಜ್ಯ ಸರ್ಕಾರದಿಂದ ಮಂಡಳಿ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಲಾಗುವಂತೆ ತಿದ್ದುಪಡಿ ಕಾನೂನನ್ನು ತರಲು ನಿರ್ಧರಿಸಲಾಗಿದೆ.
ಬೆಂಗಳೂರು, ನವೆಂಬರ್ 27: ರಾಜ್ಯದ ಮೂರು ಖಾಸಗಿ ವಿಶ್ವವಿದ್ಯಾಲಯಗಳ ಮಂಡಳಿಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಯಾವ ಸದಸ್ಯರೂ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ನಾಮಿನಿಗಳನ್ನು ಈ ವಿವಿಗಳಲ್ಲಿ ಸೇರಿಸಲಾಗುವಂತೆ ಕಾನೂನು ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಟಿದೆ. ಈ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕಾರಣವಾದ ಕಾನೂನುಗಳಲ್ಲಿ ತಿದ್ದುಪಡಿ ತಂದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.
ಚಾಣಕ್ಯ ಯೂನಿವರ್ಸಿಟಿ, ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ ಮತ್ತು ಅಲಾಯನ್ಸ್ ಯೂನಿವರ್ಸಿಟಿಗಳಲ್ಲಿ ಅವುಗಳ ಬೋರ್ಡ್ಗಳಲ್ಲಿ ಸರ್ಕಾರದ ಯಾವ ಪ್ರತಿನಿಧಿಯೂ ಇಲ್ಲ. ಹೀಗಾಗಿ, ಸರ್ಕಾರ ಕಾನೂನು ತಿದ್ದುಪಡಿಯ ಮಾರ್ಗ ಅನುಸರಿಸುತ್ತಿದೆ. ತಿದ್ದುಪಡಿ ಬಳಿಕ ಈ ಯೂನಿವರ್ಸಿಟಿಗಳ ಆಡಳಿತ ಮಂಡಳಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಅವಕಾಶ ಸಿಗುತ್ತದೆ.
‘ಖಾಸಗಿ ವಿಶ್ವ ವಿದ್ಯಾಲಯಗಳ ಮಂಡಳಿಗಳಲ್ಲಿ ಸರ್ಕಾರದ ಪ್ರಾತಿನಿಧ್ಯ ಇರುವುದು ಮುಖ್ಯ. ಅಜೀಮ್ ಪ್ರೇಮ್ಜಿ ಮತ್ತು ಅಲಾಯನ್ಸ್ ಯೂನಿವರ್ಸಿಟಿಗಳು ಹಳೆಯದವಾಗಿವೆ. ಆದರೆ, ಚಾಣಕ್ಯ ಯೂನಿವರ್ಸಿಟಿಯ ಬೋರ್ಡ್ನಲ್ಲೂ ಸರ್ಕಾರದ ಪ್ರತಿನಿಧಿ ಇಲ್ಲ ಎನ್ನುವ ವಿಚಾರ ತಿಳಿದು ಅಚ್ಚರಿ ಆಯಿತು,’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಾದ ಕೆಎಸ್ಎಚ್ಇಸಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ, ಮೈಕೊರೆಯುವ ಮಾಗಿಯ ಚಳಿ
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಕೂಡ ಖಾಸಗಿ ವಿವಿಗಳಲ್ಲಿ ಸರ್ಕಾರದ ಪ್ರಾತಿನಿಧ್ಯದ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ‘ಖಾಸಗಿ ಯೂನಿವರ್ಸಿಟಿಗಳಲ್ಲಿನ ಬೆಳವಣಿಗೆಗಳು ಸರ್ಕಾರದ ಗಮನಕ್ಕೆ ಇರುವುದು ಮುಖ್ಯ. ಈ ಸರ್ಕಾರದ ಪ್ರತಿನಿಧಿಯು ಶಿಕ್ಷಣ ತಜ್ಞರಾಗಿರಬೇಕಾಗುತ್ತದೆ. ಈ ಮೂರನ್ನು ಬಿಟ್ಟು ಉಳಿದ ಎಲ್ಲಾ ಯೂನಿವರ್ಸಿಟಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನವಾದ ಸದಸ್ಯರು ಇದ್ದಾರೆ. ಈಗ ಈ ಮೂರು ಯೂನಿವರ್ಸಿಟಿಗಳ ಮಂಡಳಿಗಳಿಗೆ ಸರ್ಕಾರೀ ಪ್ರತಿನಿಧಿಗಳನ್ನು ಒಳಗೊಳ್ಳಲಾಗುವಂತೆ ಕಾನೂನು ತಿದ್ದುಪಡಿ ತರುತ್ತೇವೆ’ ಎಂದು ಡಾ. ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ