AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರಿಗೆ ‘ಸಪ್ತ’ ಸಂಕಟ, ಸಚಿವಾಕಾಂಕ್ಷಿಗಳಿಗೂ ನಿರಾಸೆ: ಏನಿದು ಹೈಕಮಾಂಡ್‌ನ ಅಚ್ಚರಿ ನಡೆ?

ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಕಾಂಗ್ರೆಸ್​​ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಆದ್ರೆ, ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಆದ್ರೆ, ಹೈಕಮಾಂಡ್​​ ಹಾಕುತ್ತಿರುವ ಲೆಕ್ಕಾಚಾರ ಕೆಲ ಸಚಿವರಿಗೆ ತಳಮಳ ಶುರುವಾಗಿದ್ದು, ಹೈಕಮಾಂಡ್‌ನ ಐದು ಪ್ರಶ್ನಾವಳಿ ತಂತ್ರ ಒಂದಿಷ್ಟು ಸಚಿವರಿಗೂ ನಡುಕ ಹುಟ್ಟಿಸಿದ್ದರೆ, ಮತ್ತೊಂದೆಡೆ ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಸಚಿವರಿಗೆ ‘ಸಪ್ತ’ ಸಂಕಟ, ಸಚಿವಾಕಾಂಕ್ಷಿಗಳಿಗೂ ನಿರಾಸೆ: ಏನಿದು ಹೈಕಮಾಂಡ್‌ನ ಅಚ್ಚರಿ ನಡೆ?
ರಮೇಶ್ ಬಿ. ಜವಳಗೇರಾ
|

Updated on: Nov 29, 2024 | 5:43 PM

Share

ಬೆಂಗಳೂರು. (ನವೆಂಬರ್ 29): ಕಾಂಗ್ರೆಸ್​ನಲ್ಲಿನ ಸಂಪುಟ ಸರ್ಕಸ್‌ ದೆಹಲಿ ಅಂಗಳ ತಲುಪಿದ್ದು, ಸಂಪುಟ ವಿಸ್ತರಣೆನಾ ಅಥವಾ ಪುನಾರಚನೆನಾ ಎನ್ನುವ ಚರ್ಚೆಗೆ ಬ್ರೇಕ್ ಬಿದ್ದಿದೆ. ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್, ಹೈಕಮಾಂಡ್​ ಜತೆ ಸಭೆ ಮಾಡಿದ್ದು, ಸದ್ಯಕ್ಕೆ ಸಚಿವ ಸಂಪುಟ ಬದಲಾವಣೆ ಮಾಡುವುದು ಬೇಡ ಎನ್ನುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಹೈಕಮಾಂಡ್​, ಕೆಲ ಸಚಿವರ ಕಾರ್ಯ ವಿಧಾನದ ಬಗ್ಗೆ ಅಸಮಾಧಾನಗೊಂಡಿದೆ. ಹೀಗಾಗಿ ಸಚಿವರ ವರ್ಕಿಂಗ್​ ರಿಪೋರ್ಟ್‌ ಕಾರ್ಡ್‌ ತರಿಸಿದ್ದು, ಹೈಕಮಾಂಡ್‌ನ ಐದು ಪ್ರಶ್ನಾವಳಿ ತಂತ್ರ ಒಂದಿಷ್ಟು ಸಚಿವರಿಗೂ ನಡುಕ ಹುಟ್ಟಿಸಿದೆ. ಹಾಗಾದ್ರೆ ಸಚಿವರಿಗೆ ಕೇಳಲಾದ ಆ ಪ್ರಶ್ನೆಗಳು ಯಾವ್ಯಾವು ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ.

ಸಚಿವರಿಗೆ ‘ಸಪ್ತ’ ಸಂಕಟ

ಪ್ರಶ್ನೆ 1 : ಉಸ್ತುವಾರಿವಹಿಸಿದ ಜಿಲ್ಲೆಗೆ ಎಷ್ಟು ಬಾರಿ ಭೇಟಿ? ಪ್ರಶ್ನೆ 2 : ಕೆಡಿಪಿ ಸಭೆ ನಡೆಸಿದ್ದೀರಿ? ಜಿಲ್ಲಾ ಸಮಿತಿ ಜತೆಗೆಷ್ಟು ಸಭೆ?‌ ಪ್ರಶ್ನೆ 3 : ನಿಮ್ಮ ಇಲಾಖೆಯಲ್ಲಿನ ಸುಧಾರಣೆ ಏನೇನು? ಪ್ರಶ್ನೆ 4 : ಪಕ್ಷ ಬಲವರ್ಧನೆ, ಸುಧಾರಣೆಗೆ ಹೇಗೆ ನೆರವಾಗಿದೆ? ಪ್ರಶ್ನೆ 5 : ಜಿಲ್ಲೆಗಳಿಗೆ ಭೇಟಿ ನೀಡಿ, ಇಲಾಖೆ ಪ್ರಗತಿ ಪರಿಶೀಲಿಸಿದ್ದೀರಾ? ಪ್ರಶ್ನೆ 6 : ಉಪ & ಲೋಕ ಚುನಾವಣೆಗಳಲ್ಲಿ ನಿಮ್ಮ ಕೊಡುಗೆ ಏನು? ಪ್ರಶ್ನೆ 7 : ಸರ್ಕಾರದ ಸಮರ್ಥನೆಗೆ ನೀವು ಮಾಡಿದ ಕಾರ್ಯಗಳೇನು?

ಹೀಗೆ ಹತ್ತು ಹಲವು ಪ್ರಶ್ನೆಗಳನ್ನ ಹೈಕಮಾಂಡ್​ ಸಿದ್ದ ಮಾಡಿ, ಈ ಬಗ್ಗೆ ನಿನ್ನೆಯೇ ಉತ್ತರ ಪಡೆದುಕೊಂಡಿದ್ದಾರೆ. ಈ ನಡುವೆ ದೆಹಲಿಯಲ್ಲೇ ಬೀಡುಬಿಟ್ಟಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಹೈಕಮಾಂಡ್‌ ನಾಯಕರನ್ನ ಭೇಟಿಯಾಗಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, 35 ನಿಮಿಷ ಚರ್ಚಿಸಿದ್ದಾರೆ. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನೂ ಭೇಟಿ ಮಾಡಿ ಸಂಪುಟ ವಿಸ್ತರಣೆ ಸೇರಿ ರಾಜ್ಯದ ರಾಜ್ಯ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಶಕ್ತಿ‌ ಪ್ರದರ್ಶನಕ್ಕೆ ಅಪಸ್ವರ: ದಿಲ್ಲಿಯಿಂದಲೇ ಅನಾಮಧೇಯ ಪತ್ರಕ್ಕೆ ಸಿಎಂ ಸ್ಪಷ್ಟನೆ

ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ ಎಂದ ಸಿಎಂ

ನಾಯಕರ ಜತೆಗಿನ ಸರಣಿ ಭೇಟಿ ಬಳಿಕ ಮಾತನಾಡಿದ ಸಿಎಂ, ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ನಾಗೇಂದ್ರರನ್ನ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ. ಆದರೆ, ತಕ್ಷಣಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಂಪುಟ ಪುನಾರಚನೆ ಬಗ್ಗೆ ಶುರುವಾಗಿದ್ದ ಗುಸು ಗುಸು ಸುದ್ದಿಗೆ ಬ್ರೇಕ್​ ಬಿದ್ದಂತಾಗಿದೆ.

ಸಂಪುಟ ಸರ್ಜರಿ ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಆಕಾಂಕ್ಷಿಗಳು ಅಷ್ಟೇ ಸೈಲೆಂಟಾಗಿ ಆ್ಯಕ್ಟೀವ್ ಆಗಿದ್ದು, ಲಾಬಿ ನಡೆಸಿದ್ದರು. ಆದ್ರೆ, ಇದೀಗ ಖುದ್ದು ಸಿಎಂ ಸಂಪುಟ ಪುನಾರಚನೆ ಇಲ್ಲ ಎಂದು ಹೇಳಿದ್ದು, ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ