ಸಕ್ಕರೆ ನಾಡಿನಿಂದ ಕಹಿ ಸುದ್ದಿ: ಲೈನ್​ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಸಿಎಂ BSY ತವರೂರಲ್ಲಿ ಪವರ್​​ಮ್ಯಾನ್​ ಸಾವು

ಲೈನ್​ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್​​ಮ್ಯಾನ್​ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ತವರೂರಾದ ಬೂಕನಕೆರೆಯಲ್ಲಿ ನಡೆದಿದೆ. ವಿದ್ಯುತ್ ಪ್ರವಹಿಸಿ ರವಿ(25) ಎಂಬ ಪವರ್​ಮ್ಯಾನ್​ ದುರ್ಮರಣ ಹೊಂದಿದ್ದಾರೆ.

ಸಕ್ಕರೆ ನಾಡಿನಿಂದ ಕಹಿ ಸುದ್ದಿ: ಲೈನ್​ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಸಿಎಂ BSY ತವರೂರಲ್ಲಿ ಪವರ್​​ಮ್ಯಾನ್​ ಸಾವು
ಸಾಂದರ್ಭಿಕ ಚಿತ್ರ
Follow us
KUSHAL V
|

Updated on: Mar 17, 2021 | 10:53 PM

ಮಂಡ್ಯ: ಲೈನ್​ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್​​ಮ್ಯಾನ್​ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ತವರೂರಾದ ಬೂಕನಕೆರೆಯಲ್ಲಿ ನಡೆದಿದೆ. ವಿದ್ಯುತ್ ಪ್ರವಹಿಸಿ ರವಿ(25) ಎಂಬ ಪವರ್​ಮ್ಯಾನ್​ ದುರ್ಮರಣ ಹೊಂದಿದ್ದಾರೆ. ಪವರ್ ಇಲ್ಲದ ಕಾರಣ ರವಿ ದುರಸ್ತಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ, ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದರು. ಕೆ.ಆರ್.ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಬಳಿಯ ವಿರುಪಾಕ್ಷಿ ಗ್ರಾಮದಲ್ಲಿ ನಡೆದಿದೆ. ವಿರುಪಾಕ್ಷಿ ಬಳಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೀರ್ಗಂಡಿ ಗ್ರಾಮದ ಬಳಿ ಕಾರು ಡಿಕ್ಕಿ: ಬೈಕ್ ಸವಾರ ಸಾವು ನೀರ್ಗಂಡಿ ಗ್ರಾಮದ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಅಸುನೀಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿರ್ಗಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ಸಂತೋಷ್(55) ಮೃತ ಬೈಕ ಸವಾರ. ಕಾರಿನಲ್ಲಿ ತೆರಳುತ್ತಿದ್ದ ನಾಲ್ವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

CKM ACCIDENT 1

ಪಲ್ಟಿ ಹೊಡೆದ ಕಾರು

ಬ್ರೇಕ್​ ಫೇಲ್ಯೂರ್​​ ಆಗಿ ಸರ್ಕಾರಿ ಬಸ್ ಪಲ್ಟಿ: 35 ಜನರಿಗೆ ಗಾಯ ಬ್ರೇಕ್​ ಫೇಲ್ಯೂರ್​​ ಆಗಿ ಸರ್ಕಾರಿ ಬಸ್ ಪಲ್ಟಿಯಾಗಿ 35 ಜನರಿಗೆ ಗಾಯಗಳಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಬ್ಯಾಡಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗದಿಂದ ರಾಣೆಬೆನ್ನೂರಿಗೆ ತೆರಳುತ್ತಿದ್ದಾಗ ಬಸ್​ ಉರುಳಿಬಿದ್ದಿದೆ.

HVR BUS PALTY E

ಬ್ರೇಕ್​ ಫೇಲ್ಯೂರ್​​ ಆಗಿ ಸರ್ಕಾರಿ ಬಸ್ ಪಲ್ಟಿ

ವೆಲ್ಡಿಂಗ್ ವೇಳೆ ಟ್ರಕ್ ಡೀಸೆಲ್​ ಟ್ಯಾಂಕ್​​ಗೆ ತಗುಲಿದ ಬೆಂಕಿ ವೆಲ್ಡಿಂಗ್ ವೇಳೆ ಟ್ರಕ್ ಡೀಸೆಲ್​ ಟ್ಯಾಂಕ್​​ಗೆ ತಗುಲಿರುವ ಘಟನೆ ವಿಜಯಪುರ ನಗರದ ಹಮಾಲರ ಕಾಲೋನಿ ಬಳಿ ವರದಿಯಾಗಿದೆ. ಡೀಸೆಲ್​ ಟ್ಯಾಂಕ್​​ನಿಂದ ಇಡೀ ಟ್ರಕ್​ಗೆ ಬೆಂಕಿ ವ್ಯಾಪಿಸಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

VIJ LORRY FIRE

ವೆಲ್ಡಿಂಗ್ ವೇಳೆ ಟ್ರಕ್ ಡೀಸೆಲ್​ ಟ್ಯಾಂಕ್​​ಗೆ ತಗುಲಿದ ಬೆಂಕಿ

ಇದನ್ನೂ ಓದಿ: BIAAPA ಅಧ್ಯಕ್ಷರಾಗಿ ಸಚಿವ ಆರ್.ಅಶೋಕ್ ಸಂಬಂಧಿಯ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್​ಗೆ PIL ಸಲ್ಲಿಕೆ