ಪ್ರಜ್ವಲ್ ರೇವಣ್ಣಗೆ ಶಿಕ್ಷೆ ನೀಡಿದ ಕೋರ್ಟ್ ತೀರ್ಪಿನಲ್ಲಿದೆ ಹೆಣ್ಣಿನ ಮಹತ್ವ ಸಾರುವ ಸಂಸ್ಕೃತ ಶ್ಲೋಕ!
ಇತ್ತೀಚಿನ ವರ್ಷದಲ್ಲಿ ರಾಜಕಾರಣಿಯೊಬ್ಬನಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗರಿಷ್ಠ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯಿನ್ನ ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಿದೆ. ಇನ್ನು ಕೋರ್ಟ್ ತೀರ್ಪಿನಲ್ಲಿ ಸಂಸ್ಕೃತ ಶ್ಲೋಕದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹಾಗಾದ್ರೆ ಯಾವುದು ಆ ಶ್ಲೋಕ? ಇದರ ಅರ್ಥ ಇಲ್ಲಿದೆ.

ಬೆಂಗಳೂರು, ಆಗಸ್ಟ್ 03): ಕೆ.ಆರ್ ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ (KR Nagar Case) ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 4 ತಿಂಗಳ ಸುಧೀರ್ಘ ವಿಚಾರಣೆಯ ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ಶಿಕ್ಷೆ ವಿಧಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಕೊಟ್ಟ ಈ ತೀರ್ಪು ನಿಜಕ್ಕೂ ಬಹಳ ಮಹತ್ವದ್ದಾಗಿದೆ. ಅಧಿಕಾರ, ಹಣವಿದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವ ಬಲಾಡ್ಯರಿಗೆ ಇದು ಸಂದೇಶವಾಗಿದೆ. ಎಂದು ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ತೀರ್ಪು ಬರೆಯುವಾಗ ನ್ಯಾಯಾಧೀಶರು ಮೊದಲ ಸಾಲಿನಲ್ಲಿ ಈ ಒಂದು ಸಂಸ್ಕೃತ ಶ್ಲೋಕವನ್ನು (Sanskrit sloka) ಉಲ್ಲೇಖ ಮಾಡಿದ್ದಾರೆ.
ಆದೇಶದಲ್ಲಿ ಹೆಣ್ಣಿನ ಮಹತ್ವ ಸಾರುವ ಶ್ಲೋಕ
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ, ಯತ್ರೈತಾಸ್ತುನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ಎಂಬ ಈ ಶ್ಲೋಕವನ್ನು ತೀರ್ಪಿನ ಮೊದಲ ಸಾಲಿನಲ್ಲಿ ಉಲ್ಲೇಖ ಮಾಡಲಾಗಿದೆ. “ಮಹಿಳೆಯರನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ದೈವತ್ವ ನೆಲೆಸುತ್ತದೆ” ಎನ್ನುವುದೇ ಈ ಶ್ಲೋಕದ ಅರ್ಥ. ಈ ಶ್ಲೋಕದೊಂದಿಗೆ ಕೋರ್ಟ್ ಹೆಣ್ಣಿನ ಮಹತ್ವ ಸಾರಿ ಹೇಳಿದೆ.
ಇದನ್ನೂ ಓದಿ: ಬದಲಾಗಲಿದೆ ಪ್ರಜ್ವಲ್ ರೇವಣ್ಣ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಫಿಕ್ಸ್
ಅಧಿಕಾರ, ಹಣವಿದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವ ಪ್ರಭಾವಿಗಳಿಗೆ ಇದು ದೊಡ್ಡ ಸಂದೇಶವಾಗಿದೆ. ಈ ಮಹತ್ವದ ತೀರ್ಪಿನ ಬಗ್ಗೆ ಜನಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಣ್ಣಿನ ಕುಲಕ್ಕೆ, ಸಂತ್ರಸ್ತೆಗೆ ಸಿಕ್ಕ ನ್ಯಾಯ ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದು ಭಾರತೀಯ ಸಮಾಜದ ಸಾಮಾಜಿಕ ರಚನೆಯ ಮೂಲವಾಗಿದೆ. 2024ರಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಪೆನ್-ಡ್ರೈವ್ ಮೂಲಕ ವಿಡಿಯೋ ಹಂಚಿ ಸಮಾಜದಲ್ಲಿ ಭಯ ಸೃಷ್ಟಿಸಿ ವಿನಾಶ ಉಂಟು ಮಾಡುವಂತಿತ್ತು ಎಂದು ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ ಇದರಿಂದ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಲು ಕಾರಣವಾಯಿತು. ಎಸ್‌ಐಟಿ ರಚನೆಯ ನಂತರ, ಹಲವಾರು ದೂರುಗಳು ದಾಖಲಾಗಿವೆ. ಅಂತಹ ಒಂದು ಸಂತ್ರಸ್ತೆ ದೂರು ಪ್ರಸ್ತುತ ವಿಚಾರಣೆಯಲ್ಲಿದೆ ಎಂದು ಬರೆಯಲಾಗಿದೆ ಎನ್ನಲಾಗಿದೆ.
ಇತ್ತೀಚಿನ ವರ್ಷದಲ್ಲಿ ರಾಜಕಾರಣಿಯೊಬ್ಬನಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗರಿಷ್ಠ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯಿನ್ನ ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಿದೆ.








