ವಿಂಡ್ ಪವರ್ ಫ್ಯಾನ್ಗಳಿಂದ ಸಂಕಷ್ಟ: ಸೂಕ್ತ ಕ್ರಮ ಕೈಗೊಳ್ಳದ ಕಂಪನಿಗಳ ವಿರುದ್ದ ರೈತರು ಆಕ್ರೋಶ
ಕೊಪ್ಪಳ ಜಿಲ್ಲೆಯಲ್ಲಿ ಅನೇಕ ವಿಂಡ್ ಪವರ್ ಕಂಪನಿಗಳು, ಪವನ ವಿದ್ಯುತ್ ಉತ್ಪಾದನೆ ಮಾಡಲು ಸಾವಿರಾರು ವಿಂಡ್ ಪವರ್ ಫ್ಯಾನ್ಗಳನ್ನು ಅಳವಡಿಸಿವೆ. ಇದರಿಂದ ಉತ್ಫಾದನೆಯಾಗುವ ವಿದ್ಯುತ್ನ್ನು ಗ್ರಿಡ್ಗೆ ಸಾಗಾಟ ಮಾಡಲು ವಿದ್ಯುತ್ ಲೈನ್ಗಳನ್ನು ಎಳೆಯಲಾಗಿದೆ. ಆದರೆ ಅನೇಕ ಕಡೆ ತಂತಿಗಳಿಗೆ ಮರದ ಟೊಂಗೆಗಳು ತಾಕುತ್ತಿವೆ. ಹೀಗಾಗಿ ರೈತರು, ಜಾನುವಾರುಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ.
ಕೊಪ್ಪಳ, ಮೇ 17: ದೇಶದಲ್ಲಿ ಇದೀಗ ಪವನಶಕ್ತಿ ಉತ್ಪಾದನೆಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಶಕ್ತಿ ಸಂಪನ್ಮೂಲಗಳು ಮುಗಿಯುತ್ತಿರುವದರಿಂದ ನೈಸರ್ಗಿಕವಾಗಿ ಸಿಗುವ ಮತ್ತು ಮುಗಿಯಲಾರದ ಸಂಪತ್ತಾಗಿರುವ ಗಾಳಿಯನ್ನು ಬಳಸಿಕೊಂಡು ವಿದ್ಯುತ್ (electricity) ಉತ್ಪಾದನೆಗೆ ಸರ್ಕಾರ ಕೂಡ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದೇ ಕಾರಣಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಕಂಪನಿಗಳು ವಿಂಡ್ ಪವರ್ (wind power) ಉತ್ಫಾದನೆ ಮಾಡುತ್ತಿವೆ. ಆದರೆ ಕಂಪನಿಗಳ ಧೋರಣೆ ಮತ್ತು ನಿರ್ಲಕ್ಷ್ಯದಿಂದಾಗಿ ರೈತರು ಮತ್ತು ಸಾರ್ವಜನಿಕರು ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು, ವಿಂಡ್ ಪವರ್ ಕಂಪನಿಗಳಿಗೆ ಸೇರಿದ್ದು. ಜಿಲ್ಲೆಯ ಕುಕನೂರು, ಯಲಬುರ್ಗಾ, ಕುಷ್ಟಗಿ ತಾಲೂಕಿನಲ್ಲಿ ಅನೇಕ ವಿಂಡ್ ಪವರ್ ಕಂಪನಿಗಳು, ಪವನ ವಿದ್ಯುತ್ ಉತ್ಪಾದನೆ ಮಾಡಲು, ಸಾವಿರಾರು ವಿಂಡ್ ಪವರ್ ಫ್ಯಾನ್ಗಳನ್ನು ಅಳವಡಿಸಿವೆ. ವಿಂಡ್ ಪವರ್ ಫ್ಯಾನ್ನಿಂದ ಉತ್ಫಾದನೆಯಾಗೋ ವಿದ್ಯುತ್ ನ್ನು ಗ್ರಿಡ್ ಗೆ ಸಾಗಾಟ ಮಾಡಲು ವಿದ್ಯುತ್ ಲೈನ್ ಗಳನ್ನು ಎಳೆಯಲಾಗಿದೆ. ಆದರೆ ಅನೇಕ ಕಡೆ ತಂತಿಗಳಿಗೆ ಮರದ ಟೊಂಗೆಗಳು ತಾಕುತ್ತಿವೆ. ಮರದ ಬಳಿ ಹೋಗೋ ರೈತರು, ಮತ್ತು ಜಾನುವಾರುಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮರದ ಟೊಂಗೆಗಳನ್ನು ಕತ್ತರಿಸುವಂತೆ ಕಂಪನಿಗಳಿಗೆ ಹೇಳಿದ್ರು ಕೂಡಾ ಯಾರು ಕೂಡಾ ಸ್ಪಂದಿಸುತ್ತಿಲ್ಲವಂತೆ. ರೈತರು ಮತ್ತು ರೈತರ ಜಾನುವಾರುಗಳ ಜೊತೆ ವಿಂಡ್ ಪವರ್ ಕಂಪನಿಗಳ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗೆ ಸಂಕಷ್ಟ; ಕಳೆದ ಒಂಬತ್ತು ತಿಂಗಳಿಂದ ವೇತನ ಸಿಗದೇ ಪರದಾಟ
ವಿಂಡ್ ಪವರ್ ಫ್ಯಾನ್ಗಳನ್ನು ಹಾಕುವ ಮೊದಲು ರೈತರಿಂದ ಭೂಮಿ ಖರೀದಿಸುವಾಗ ಹತ್ತಾರು ಸೌಲಭ್ಯಗಳನ್ನು ಕಲ್ಪಿಸಿ ಕೊಡ್ತೇವೆ. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ತೇವೆ ಅಂತ ಹೇಳಿ ಭೂಮಿ ಪಡೆಯುವ ಕಂಪನಿಗಳು, ನಂತರ ಸಮಸ್ಯೆಗಳಿಗೆ ಸ್ಪಂದಸದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರಂತೆ. ಕೇಳಲು ಹೋಗುವ ರೈತರಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಿಸುವ ಕೆಲಸವನ್ನು ಮಾಡುತ್ತಿದ್ದಾರಂತೆ.
ಇನ್ನು ಭೂಮಿ ಖರೀದಿ, ಭೂಮಿ ಲೀಸ್ ನಲ್ಲಿ ಕೂಡಾ ಅನೇಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆಯಂತೆ. ಕೆಲವರಿಗೆ ಪ್ರತಿ ಎಕರೆಗೆ ಇಪ್ಪತ್ತು ಲಕ್ಷ ನೀಡಿದ್ರೆ, ಕೆಲವರಿಗೆ ಹತ್ತು, ಹದಿನೈದು ಲಕ್ಷ ರೂ. ಮಾತ್ರ ನೀಡ್ತಿದ್ದಾರಂತೆ. ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಕೂಡ ಅನೇಕರಿಗೆ ಹಣ ಕೊಡ್ತೇವೆ ಅಂತ ಹೇಳಿ, ನಂತರ ಕಂಬ ಹಾಕಿದ ಮೇಲೆ ಹಣವನ್ನು ಕೂಡ ಕೊಡುತ್ತಿಲ್ಲವಂತೆ. ರೈತರ ಜೊತೆ ವಿಂಡ್ ಪವರ್ ಕಂಪನಿಗಳ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ನಾಮಕರಣಕ್ಕೆ ಗೋಲ್ಡನ್ ಜುಬಿಲಿ: ಪಿಯುಸಿ ವಿದ್ಯಾರ್ಥಿಗಳಿಗೆ ಚಿನ್ನದಂತಹ ಅವಕಾಶ ಕಲ್ಪಿಸಿದ ಶಿಕ್ಷಣ ಸಂಸ್ಥೆ
ಕೊಪ್ಪಳದಲ್ಲಿ ವಿಂಡ್ ಪವರ್ ಉತ್ಫಾದನೆಗಾಗಿ ಕೂರಿಸುತ್ತಿರುವ ಫ್ಯಾನ್ಗಳಿಂದ ರೈತರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ವಿಂಡ್ ಪವರ್ ಫ್ಯಾನ್ಗಳನ್ನು ಕೂರಿಸುತ್ತಿರುವ ಕಂಪನಿಗಳ ಜೊತೆ ಮಾತನಾಡಿ, ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಣ ಸಿಗುವಂತೆ ನೋಡಿಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.