AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ಬಸ್ ದುರುಪಯೋಗ? ಅಪ್ರಾಪ್ತ ಹೆಣ್ಣು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಸಮೇತ ಊರು ಬಿಟ್ಟ ಕಹಿ ಪ್ರಸಂಗ

ಆ ನಾಲ್ಕು ಹೆಣ್ಣು ಮಕ್ಕಳು ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಈ ಮಧ್ಯೆ ಮಕ್ಕಳು ಮನೆಗೆ ಬಾರದೇ ಇದ್ದಾಗ ಲಿಂಗಸುಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ವಾಟ್ಸ್ ಆಪ್​ ಗ್ರೂಪ್​ಗಳಲ್ಲಿ, ಮಾಹಿತಿದಾರರರ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ರು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಬಂದು, ವಿಷಯ ಪ್ರಸ್ತಾಪವಾದಾಗ ಅವರು ನೀಡಿದ ಕೆಲ ಆಯಾಮಗಳಲ್ಲಿ ಹುಡುಕಾಟ ನಡೆಸಲಾಗಿದೆ.

ಉಚಿತ ಬಸ್ ದುರುಪಯೋಗ? ಅಪ್ರಾಪ್ತ ಹೆಣ್ಣು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಸಮೇತ ಊರು ಬಿಟ್ಟ ಕಹಿ ಪ್ರಸಂಗ
ಉಚಿತ ಬಸ್ ದುರುಪಯೋಗ? ಅಪ್ರಾಪ್ತ ಹೆಣ್ಣು ಮಕ್ಕಳು ಊರು ಬಿಟ್ಟ ಕಹಿ ಪ್ರಸಂಗ
ಭೀಮೇಶ್​​ ಪೂಜಾರ್
| Edited By: |

Updated on:Feb 24, 2024 | 11:49 AM

Share

ಸರ್ಕಾರದ ಫ್ರೀ ಬಸ್ ಕಲ್ಪಿಸೊ ಶಕ್ತಿ ಯೋಜನೆ ದುರುಪಯೋಗದತ್ತ ಸಾಗ್ತಿದೆ ಅನ್ನೋ ಸಂಶಯ ಮೂಡ್ತಿದೆ.. ಪೋಷಕರ ಫ್ರೀ ಬಸ್ ಓಡಾಟ ಮಕ್ಕಳ ಮೇಲೂ ಪರಿಣಾಮ ಬೀರ್ತಿದೆ.. ಹೆತ್ತವರು ಜಾತ್ರೆಗೆ ಕರೆದೊಯ್ಯಲಿಲ್ಲ ಅಂತ ಅಪ್ರಾಪ್ತ ಹೆಣ್ಣು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಸಮೇತ ಊರು ಬಿಟ್ಟಿದ್ದಾರೆ.

ಹೌದು..ರಾಯಚೂರಿನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರ ಕೊಡಮಾಡಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ. ಪೋಷಕರು ಆಧಾರ್ ಕಾರ್ಡ್​ ಹಿಡಿದು ಉಚಿತವಾಗಿ ನಯಾ ಪೈಸೆ ಇಲ್ಲದೇ ಬಸ್​ಗಳಲ್ಲಿ ಓಡಾಡೋದು ಮಕ್ಕಳ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದ ನಾಲ್ಕು ಜನ 13 ವರ್ಷ ವಯಸ್ಸಿನ ಅಪ್ರಾಪ್ತ ಹೆಣ್ಣು ಮಕ್ಕಳ ಪೋಷಕರು, ಪೊಲೀಸರನ್ನ ಕಂಗಾಲಾಗುವಂತೆ ಮಾಡಿದ್ದಾರೆ.

ಅಷ್ಟಕ್ಕೂ ಈ ರಾದ್ದಾಂತವಾಗೋದಕ್ಕೆ ಕಾರಣ ಫ್ರೀ ಬಸ್​​ ವ್ಯವಸ್ಥೆ. ಯರಗುಂಟಿ ಗ್ರಾಮದ ನಾಲ್ಕು ಜನ ಅಪ್ರಾಪ್ತ ಹೆಣ್ಣು ಮಕ್ಕಳು ಯಾದಗಿರಿಯ ತಿಂಥಿಣಿಯ ಮೌನೇಶ್ವರ ಜಾತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ಹೇಳಿದ್ದಾರೆ. ಆದ್ರೆ ಪೋಷಕರು ಅದಕ್ಕೆ ಒಪ್ಪಿರ್ಲಿಲ್ಲ. ಈ ಮಧ್ಯೆ ನಾಲ್ಕು ಜನ ಅಪ್ರಾಪ್ತರು ತಾವೇ ಡಿಸ್ಕಸ್ ಮಾಡಿಕೊಂಡು ಜಾತ್ರೆಗೆ ಹೋಗೋದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ತಮ್ಮ ಶಾಲೆಯಲ್ಲಿ ಕ್ರೀಡಾಕೂಟ ಇದೆ. ಪಟ್ಟಣಕ್ಕೆ ಹೋಗ್ಬೇಕು ಅಂತ ಹೇಳಿ ಆಧಾರ್​ ಕಾರ್ಡ್ ಹಾಗೂ ಬಟ್ಟೆ ತೆಗೆದುಕೊಂಡಿದ್ದರು. ನಂತರ ನಾಲ್ಕೂ ಜನ ಸರ್ಕಾರಿ ಬಸ್​ನಲ್ಲಿ ಆಧಾರ್​ ಕಾರ್ಡ್ ಮೂಲಕ ತಿಂಥಿಣಿಯ ಜಾತ್ರೆಗೆ ಹೋಗಿದ್ದಾರೆ.

ಹೌದು.. ಆ ನಾಲ್ಕು ಹೆಣ್ಣು ಮಕ್ಕಳು ಇಡೀ ದಿನ ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಈ ಮಧ್ಯೆ ಮಕ್ಕಳು ಮನೆಗೆ ಬಾರದೇ ಇದ್ದಾಗ ಲಿಂಗಸುಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಇಡೀ ದಿನ ಪೊಲೀಸರು ವಾಟ್ಸ್ ಆಪ್​ ಗ್ರೂಪ್​ಗಳಲ್ಲಿ, ಮಾಹಿತಿದಾರರರ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ರು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್​ ಬಿ ಗಮನಕ್ಕೆ ಬಂದು, ವಿಷಯ ಪ್ರಸ್ತಾಪವಾದಾಗ ಅವರು ನೀಡಿದ ಕೆಲ ಆಯಾಮಗಳಲ್ಲಿ ವಿಚಾರಣೆ ಶುರು ಮಾಡಲಾಗಿತ್ತು.

ನಂತರ ಮಕ್ಕಳು ಒಂದು ದಿನದ ಬಳಿಕ ತಿಂಥಿಣಿಯ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯೋವಾಗ ಪತ್ತೆಯಾಗಿದ್ದಾರೆ. ನಂತರ ಪೊಲೀಸರು ಮಕ್ಕಳನ್ನ ರಕ್ಷಿಸಿ ಅವರ ಹೇಳಿಕೆ ದಾಖಲಿಸಿಕೊಂಡು ಪೋಷಕರಿಗೆ ಒಪ್ಪಿಸಿದ್ದಾರೆ. ಫ್ರೀ ಬಸ್ ನಿಂದಲೇ ಮಕ್ಕಳು ಹೇಳದೇ ಕೇಳದೇ ಊರು ಬಿಟ್ಟು ಹೋಗೊ ಸ್ಥಿತಿ ನಿರ್ಮಾಣವಾಗಿರೋದಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ಫ್ರೀ ಬಸ್​ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಅಂತ ಸಾರ್ವಜನಿಕರು ಅಭಿಪ್ರಾಯಪಡ್ತಿದ್ದಾರೆ.

ಸದ್ಯ ಈ ಸಂಬಂಧ ಲಿಂಗಸುಗೂರು ಪೊಲೀಸರು ಪ್ರಕರಣ ಇತ್ಯರ್ಥಡಿಸಿ ಪೋಷಕರಿಗೆ ಮಕ್ಕಳನ್ನ ಒಪ್ಪಿಸಿದ್ದಾರೆ. ಆದ್ರೆ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಫ್ರೀ ಬಸ್ ಯೋಜನೆ ಮಕ್ಕಳ ಮೇಲೆ ಈ ರೀತಿ ಪರಿಣಾಮ ಬೀರಿ ದುರುಪಯೋಗವಾಗೋದಕ್ಕು ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:47 am, Sat, 24 February 24

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್