ನೀರಿನ ಗುಂಡಿಯಲ್ಲಿ ಬಿದ್ದಿದ್ದ ಯುವತಿಯ ರಕ್ಷಿಸಿದ ಯುವ ತಂಡ, ವಿಡಿಯೋ ವೈರಲ್
ರಾಯಚೂರು: ನಗರದಲ್ಲಿ ಖಾಸಗಿ ನಿವೇಶನ ನಿರ್ಮಾಣ ವೇಳೆ ತೆಗೆದಿದ್ದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿ ಅನಾಹುತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳು ಆಟವಾಡ್ತ ಗುಂಡಿಗೆ ಬಿದ್ದಿದ್ದಾಳೆ. ಈಜು ಬಾರದ ಆಕೆ ನೀರಿನಲ್ಲಿ ಸಾವಿನ ಜೊತೆ ಸೆಣೆದಾಡಿದ್ದಾಳೆ. ಅದೃಷ್ಟವಷಾತ್ ಅದನ್ನು ಗಮನಿಸಿದ ಯುವಕರ ತಂಡವೊಂದು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ನೀರು ಸಂಗ್ರಹಿಸಿದ ಗುಂಡಿಯಲ್ಲಿ ಬಿದ್ದಿದ್ದ ಯುವತಿ ಮುಳುಗುತ್ತಿದ್ದಳು. ನೀರಲ್ಲಿ ಒದ್ದಾಡ್ತಿದ್ದ ಯುವತಿಯನ್ನ ಕಂಡು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ನಂತರ ಯುವತಿ ಕುಡಿದಿದ್ದ ನೀರನ್ನ ಹೊರ ತೆಗೆದು ಪ್ರಾಣ ರಕ್ಷಿಸಿದ್ದಾರೆ. ನೀರಿಗೆ […]
ರಾಯಚೂರು: ನಗರದಲ್ಲಿ ಖಾಸಗಿ ನಿವೇಶನ ನಿರ್ಮಾಣ ವೇಳೆ ತೆಗೆದಿದ್ದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿ ಅನಾಹುತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳು ಆಟವಾಡ್ತ ಗುಂಡಿಗೆ ಬಿದ್ದಿದ್ದಾಳೆ. ಈಜು ಬಾರದ ಆಕೆ ನೀರಿನಲ್ಲಿ ಸಾವಿನ ಜೊತೆ ಸೆಣೆದಾಡಿದ್ದಾಳೆ. ಅದೃಷ್ಟವಷಾತ್ ಅದನ್ನು ಗಮನಿಸಿದ ಯುವಕರ ತಂಡವೊಂದು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ನೀರು ಸಂಗ್ರಹಿಸಿದ ಗುಂಡಿಯಲ್ಲಿ ಬಿದ್ದಿದ್ದ ಯುವತಿ ಮುಳುಗುತ್ತಿದ್ದಳು. ನೀರಲ್ಲಿ ಒದ್ದಾಡ್ತಿದ್ದ ಯುವತಿಯನ್ನ ಕಂಡು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ನಂತರ ಯುವತಿ ಕುಡಿದಿದ್ದ ನೀರನ್ನ ಹೊರ ತೆಗೆದು ಪ್ರಾಣ ರಕ್ಷಿಸಿದ್ದಾರೆ. ನೀರಿಗೆ ಬಿದ್ದಿದ್ದ ಯುವತಿ ಯಾರು ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಯುವತಿಯನ್ನ ರಕ್ಷಣೆ ಮಾಡಿದ ವಿಡಿಯೋ ಫುಲ್ ವೈರಲ್ ಆಗಿದೆ. ರಾಯಚೂರ ನಗರದ ಜ್ಞಾನಗಂಗಾ ಕಾಲೇಜು ಬಳಿ ಈ ಘಟನೆ ನಡೆದಿದೆ.
Published On - 8:52 am, Sun, 15 December 19