ಕುಡಿದ ಮತ್ತಿನಲ್ಲಿ ಚಲಿಸ್ತಿದ್ದ ರೈಲಿನಿಂದ ಬಿದ್ದು ಕೈ ಮುರಿದುಕೊಂಡ ಯುವಕ
ರಾಯಚೂರು: ಯುವಕನೊಬ್ಬ ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೈ ಮುರಿದುಕೊಂಡ ಘಟನೆ ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ರೈಲ್ವೆ ಹಳಿ ಬಳಿ ನಡೆದಿದೆ. ಯಕ್ಲಾಸಪುರ ಗ್ರಾಮದ ಗೋಪಿ ಹುಸೇನಪ್ಪ ಕೈ ಮುರಿದುಕೊಂಡ ವ್ಯಕ್ತಿ. ಈತ ಕುಡಿದ ಮತ್ತಿನಲ್ಲೆ ಪ್ರಯಾಣ ಬೆಳೆಸಿದ್ದ, ಚಲಿಸುತ್ತಿದ್ದ ರೈಲು ನಿಲುಗಡೆಯಾಗಿದೆ ಎಂದು ಭಾವಿಸಿ ಕೆಳಗೆ ಇಳಿಯಲು ಹೋಗಿದ್ದಾನೆ. ಈ ವೇಳೆ ದುರಂತ ನಡೆದಿದೆ. ಗೋಪಿ ಹುಸೇನಪ್ಪನ ಕೈ ಮುರಿದಿದ್ದು, ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲ್ವೆ ಪೊಲೀಸ್ […]
ರಾಯಚೂರು: ಯುವಕನೊಬ್ಬ ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೈ ಮುರಿದುಕೊಂಡ ಘಟನೆ ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ರೈಲ್ವೆ ಹಳಿ ಬಳಿ ನಡೆದಿದೆ. ಯಕ್ಲಾಸಪುರ ಗ್ರಾಮದ ಗೋಪಿ ಹುಸೇನಪ್ಪ ಕೈ ಮುರಿದುಕೊಂಡ ವ್ಯಕ್ತಿ.
ಈತ ಕುಡಿದ ಮತ್ತಿನಲ್ಲೆ ಪ್ರಯಾಣ ಬೆಳೆಸಿದ್ದ, ಚಲಿಸುತ್ತಿದ್ದ ರೈಲು ನಿಲುಗಡೆಯಾಗಿದೆ ಎಂದು ಭಾವಿಸಿ ಕೆಳಗೆ ಇಳಿಯಲು ಹೋಗಿದ್ದಾನೆ. ಈ ವೇಳೆ ದುರಂತ ನಡೆದಿದೆ. ಗೋಪಿ ಹುಸೇನಪ್ಪನ ಕೈ ಮುರಿದಿದ್ದು, ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:39 pm, Wed, 25 December 19