ಬರಗಾಲದಲ್ಲಿಯೂ ಮಂತ್ರಾಲಯ ‌ಮಠದ ಗೋ ಶಾಲೆಗೆ ಮೇವು ದಾನ: ರೈತರ ಕಾರ್ಯಕ್ಕೆ ಶ್ರೀಗಳ ಮೆಚ್ಚುಗೆ

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಭಾಗ್ಯನಗರ ಕ್ಯಾಂಪಿನ ರೈತರು ಸುಮಾರು 40 ಟ್ಯಾಕ್ಟರ್​​ಗಳಲ್ಲಿ ಬರಗಾಲದಲ್ಲಿಯೂ ಮಂತ್ರಾಲಯ ‌ಮಠದ ಗೋ ಶಾಲೆಗೆ ಮೇವು ದಾನ ಮಾಡಿದ್ದಾರೆ. ಮೇವು ತಂದಿರುವ ಅನ್ನದಾತರಿಗೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಭುದೇಂದ್ರ ತೀರ್ಥರು ಮೇವು ದಾನ ಸ್ವೀಕರಿಸಿ, ರೈತರಿಗೆ ಆಶಿರ್ವಚನ ನೀಡಿದ್ದಾರೆ. ರೈತರ ಕಾರ್ಯಕ್ಕೆ ಮಂತ್ರಾಲಯ ಮಠದ ಶ್ರೀಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಗಾಲದಲ್ಲಿಯೂ ಮಂತ್ರಾಲಯ ‌ಮಠದ ಗೋ ಶಾಲೆಗೆ ಮೇವು ದಾನ: ರೈತರ ಕಾರ್ಯಕ್ಕೆ ಶ್ರೀಗಳ ಮೆಚ್ಚುಗೆ
ಮೇವು ದಾನ
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Feb 16, 2024 | 10:11 PM

ರಾಯಚೂರು, ಫೆಬ್ರವರಿ 16: ರಾಜ್ಯದಲ್ಲಿ ಬರ ಎದುರಾಗಿದ್ದು ಕೆಲವು ಕಡೆಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಇತ್ತ ಜಾನುವಾರುಗಳಿಗೆ ಮೇವಿನ ಕೊರತೆ ಕೂಡ ಕೆಲ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಸಿರವಾರ ತಾಲ್ಲೂಕಿನ ಭಾಗ್ಯನಗರ ಕ್ಯಾಂಪಿನ ರೈತರಿಂದ ಬರಗಾಲದಲ್ಲಿಯೂ ಮಂತ್ರಾಲಯ ‌ಮಠ (Mantralayam Mutt) ದ  ಗೋ ಶಾಲೆಗೆ ಸುಮಾರು 40 ಟ್ಯಾಕ್ಟರ್ ಮೇವು ‌ದಾನ ಮಾಡಿದ್ದಾರೆ. ಸ್ವತಃ ಖರ್ಚಿನಲ್ಲಿ ಟ್ಯಾಕ್ಟರ್​ನಲ್ಲಿ ಮಂತ್ರಾಲಯಕ್ಕೆ ರೈತರು ಮೇವು ತಂದಿದ್ದಾರೆ. ಮೇವು ತಂದಿರುವ ಅನ್ನದಾತರಿಗೆ ಮಂತ್ರಾಲಯ ಶ್ರೀಗಳಿಂದ ಸ್ವಾಗತ ಮಾಡಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಡಾ.ಸುಭುದೇಂದ್ರ ತೀರ್ಥರು ಮೇವು ದಾನ ಸ್ವೀಕರಿಸಿ, ರೈತರಿಗೆ ಆಶಿರ್ವಚನ ನೀಡಿದ್ದಾರೆ. ರೈತರು ಹಲವು ವರ್ಷಗಳಿಂದ ಪ್ರತಿ ವರ್ಷವೂ ಮೇವು ದಾನ ಮಾಡುತ್ತಿದ್ದಾರೆ. ರೈತರ ಕಾರ್ಯಕ್ಕೆ ಮಂತ್ರಾಲಯ ಮಠದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಕ ಪ್ರಾಣಿಗಳಿಗೆ ಆಹಾರ ಆಗಬೇಕಿದ್ದ ಹುಲ್ಲನ್ನ ನಾಶ

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಶೇಕಡಾ 60ರಷ್ಟು ಮಳೆಯ ಕೊರೆ ಉಂಟಾಗಿದೆ. ಕಂಡು ಕೇಳರಿಯದ ಬರಗಾಲಕ್ಕೆ ಅಕ್ಷರಶಃ ರೈತ ಕೂಲವೇ ಕಂಗಾಲಾಗಿ ಹೋಗಿದ್ದಾರೆ. ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಮುಂಗಾರು ಬೆಳೆ ಹಾನಿ ಅನುಭವಿಸಿದ್ದ ರೈತರು, ಇದೀಗ ಹಿಂಗಾರು ಬೆಳೆಗಳ ಹಾನಿಯ ಭೀತಿಯನ್ನೂ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಒಂದು ಲೋಡ್ ಮೇವು ಹಂಚುವಾಗ ಹೊಡೆದಾಟಗಳೇ ಆಯ್ತು: ಡಿಕೆ ಶಿವಕುಮಾರ್​ಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್

ಅಲ್ಲದೇ ಜಾನುವಾರುಗಳಿಗೆ ಹಿಡಿ ಮೇವಿಗೂ ತಾತ್ವಾರ ಸ್ಥಿತಿ ನಿರ್ಮಾಣ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಸುವರ್ಣ ಸೌಧದ ಮುಂಭಾಗದಲ್ಲಿ ಭರಪೂರ ಬೆಳೆದು ನಿಂತಿದ್ದ ಹುಲ್ಲನ್ನ ಅನ್ಯಾಯವಾಗಿ ಅಧಿಕಾರಿಗಳು ನಾಶ ಮಾಡ್ತಿರುವುದು ಸುತ್ತಮುತ್ತ ಗ್ರಾಮದ ರೈತರನ್ನ ಕೆರಳಿಸುವಂತೆ ಮಾಡಿತ್ತು. ಸುವರ್ಣ ಸೌಧದಲ್ಲಿ ಡಿ.4ರಿಂದ ಅಧಿವೇಶನ ಆರಂಭವಾಗುತ್ತಿದ್ದು ಹೀಗಾಗಿ ಸೌಧ ನಿರ್ವಹಣೆ ಮಾಡುವ ಲೋಕೋಪಯೋಗಿ ಇಲಾಖೆ ಸ್ವಚ್ಛತೆ ಹೆಸರಿನಲ್ಲಿ ಸುವರ್ಣವಿಧಾನಸೌಧ ಸುತ್ತಲೂ 50 ಏಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಹುಲ್ಲನ್ನು ಜೆಸಿಬಿಗಳ ಮೂಲಕ ನಾಶಪಡಿಸಿದ್ದರು.

ಚಿತ್ರದುರ್ಗ: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ರೈತರು ಜಾನುವಾರು ಸಾಕಣೆಯನ್ನೇ ಬದುಕಿನ ಆಧಾರವಾಗಿ ನಂಬಿಕೊಂಡಿದ್ದಾರೆ. ಆದರೆ ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಹೀಗಾಗಿ, ನೀರು, ಮೇವಿನ ಕೊರತೆ ಸೃಷ್ಠಿ ಆಗಿದೆ. ಬಿರು ಬೇಸಿಗೆ ವೇಳೆ ಕೆಲವರು ಅರಣ್ಯ ಪ್ರದೇಶದಲ್ಲಿದ್ದ ಹುಲ್ಲಿಗೆ ಬೆಂಕಿಯಿಟ್ಟಿದ್ದು ಜಾನುವಾರುಗಳಿಗೆ ಮೇವು ಸಿಗದಂತಾಗಿದೆ.

ಇದನ್ನೂ ಓದಿ: ರಾಯಚೂರು: 226 ರೈತರ ಎರಡು ಕೋಟಿ ಬೆಳೆ ವಿಮೆ ಗುಳುಂ! ಕೃತ್ಯದಲ್ಲಿ ಪ್ರಭಾವಿಗಳು ಭಾಗಿ

ಹೀಗಾಗಿ, ರೈತರು ತೋಟ, ಜಮೀನುಗಳಲ್ಲಿನ ಗಿಡ, ಮರಗಳಿಂದ ಸೊಪ್ಪು ತಂದು ಜಾನುವಾರುಗಳಿಗೆ ನೀಡುತ್ತಿದ್ದಾರೆ. ಆದರೆ ಸಮರ್ಪಕ ಮೇವು ಸಿಗದೆ ಜಾನುವಾರುಗಳು ಒಣಗುತ್ತಿವೆ. ಮೈಯಲ್ಲಿನ ಮೂಳೆ ಕಾಣುವಂತೆ ಸೊರಗುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?