ರಾಯಚೂರು: ಗ್ರಾಮವೊಂದರ ಸರಕಾರಿ ಶಾಲೆಯಲ್ಲಿ 2ನೇ ಈಯತ್ತೆಯ ವಿದ್ಯಾರ್ಥಿಗಳಿಗೆ ABCD ಬರೆಯಲು ಬರಲಿಲ್ಲವಂತೆ. ಅದಕ್ಕೆ ಜಿಲ್ಲಾ ಉಪ ವಿಭಾಗಾಧಿಕಾರಿ ಆ ಮಕ್ಕಳಿಗೆ ಪಾಠ ಹೇಳಿಕೊಟ್ಟ ಹಿರಿಯ ಶಿಕ್ಷಕಿಯರನ್ನ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ರಾಯಚೂರು ತಾಲ್ಲೂಕಿನ ಲಿಂಗನಖಾನದೊಡ್ಡಿ ಸರಕಾರಿ ಶಾಲೆಯಲ್ಲಿ (Kukkaladoddi school) ಈ ಪ್ರಕರಣ ನಡೆದಿದೆ. ಲಿಂಗನಖಾನದೊಡ್ಡಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದ ರಾಯಚೂರು ಉಪ ವಿಭಾಗಾಧಿಕಾರಿ ರಜನಿಕಾಂತ್ ಚವ್ಹಾಣ್ ಅವರು 2ನೇ ತರಗತಿ ಮಕ್ಕಳಿಗೆ ABCD ಹೇಳುವಂತೆ ಕೇಳಿದ್ದರು. ಆಯುಕ್ತರ ಪ್ರಶ್ನೆಗೆ ಮೌನವಾಗಿದ್ದ 2ನೇ ತರಗತಿ ವಿದ್ಯಾರ್ಥಿಗಳು, ನಿರುತ್ತರವಾಗಿ ಕುಳಿತಿದ್ದರು.
ಮಕ್ಕಳಿಗೆ ABCD ಕಲಿಸಿಕೊಡದ ಹಿರಿಯ ಶಿಕ್ಷಕಿಯರಿಗೆ ‘ಸ್ಪೆಷಲ್ ಕ್ಲಾಸ್’
ಇದರಿಂದ ಅಸಮಾಧಾನಗೊಂಡ ಆಯುಕ್ತ ರಜನಿಕಾಂತ್ ಮಕ್ಕಳಿಗೆ ಕನಿಷ್ಟ ABCD ಕಲಿಸಲಿಕೆ ಆಗಲ್ವಾ..? ಎಂದು ಅಲ್ಲಿದ್ದ ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡರು. ಇದರಲ್ಲಿ ಹೆಡ್ ಮಾಸ್ಟರ್ ಯಾರು? ಇವರಿಗೇನು ಎಬಿಸಿಡಿ ಬರಲ್ವಾ? ಮಕ್ಕಳಿಗೆ ಒಂದು ವೀಕ್ ನಲ್ಲಿ ABCD ಕಲಿಸಬಹುದು. ನಾನು ಟೀಚರ್ ಆಗಿ ಬರ್ಲಾ, ಟು ಡೇಸ್ ಅಲ್ಲಿ ಎಬಿಸಿಡಿ ಕಲಿಸ್ತೀನಿ.
ಮಕ್ಕಳಿಗೆ ನೀವು ಸ್ವಲ್ಪ ಕಾಳಜಿಯಿಂದ ಕಲಿಸಬೇಕು. ಏನ್ ತೊಂದರೆ ನಿಮಗೆ, ನೆಮ್ಮದಿಯ ವಾತಾವರಣವಿದೆ, ಒಳ್ಳೆಯ ಬಿಲ್ಡಿಂಗ್ ಇದೆ. ಇಷ್ಟೆಲ್ಲಾ ಸೌಲಭ್ಯವಿದೆ. ನೀವು ಮಕ್ಕಳಿಗೆ ಚೆನ್ನಾಗಿ ಓದಿಸಬೇಕು. ಯಾವಾಗಲೂ ಸಮಸ್ಯೆ ಹುಡುಕ್ಬಾರ್ದು, ಪರಿಹಾರ ಕಂಡುಕೊಳ್ಳಬೇಕು. ಅವರಿಗೆ ಸರಿಯಾಗಿ ಓದಿಸಿ ಜ್ಞಾನ ಕೊಡಿ. ಅವರಿಗೆ ಎಬಿಸಿಡಿ ಬರ್ತಾ ಇಲ್ಲ. ನೀವು ನೋಡಿದ್ರೆ ಆರಾಮಾಗಿದ್ದೀರಿ… ಅಂತ ವಾರ್ನಿಂಗ್ ಧ್ವನಿಯಲ್ಲಿ ಎಸಿ ರಜನಿಕಾಂತ್ ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
Published On - 11:48 am, Wed, 19 October 22