ರಾಯಚೂರು, ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆ; ಇಬ್ಬರು ಕಿಡ್ನಾಪರ್ಸ್ ವಶಕ್ಕೆ, ನಾಲ್ವರು ಯುವಕರ ರಕ್ಷಣೆ
ಮಹಾರಾಷ್ಟ್ರದ ಪುಣೆಯಿಂದ ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ, ಬಳಿಕ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯಲ್ಲಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನಲೆ ರಾಯಚೂರು ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಕಿಡ್ನಾಪರ್ಸ್ಗಳನ್ನು ವಶಕ್ಕೆ ಪಡೆದು ನಾಲ್ವರು ಯುವಕರನ್ನ ರಕ್ಷಣೆ ಮಾಡಿದ್ದಾರೆ.
ರಾಯಚೂರು, ಅ.01: ರಾಯಚೂರು ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಕಿಡ್ನಾಪರ್ಸ್ಗಳನ್ನು ವಶಕ್ಕೆ ಪಡೆದು ನಾಲ್ವರು ಯುವಕರನ್ನ ರಕ್ಷಣೆ ಮಾಡಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಯುವಕರನ್ನು ಕೂಡಿಟ್ಟಿದ್ದ ಆರೋಪಿಗಳಾದ ರಾಮು ಹಾಗೂ ದತ್ತು ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸ್ವಪಲ್(23),ಶೂಬಮ್(22),ಗಜಾನನ(22) ಹಾಗೂ ಓಕಾಂರ(20) ರಕ್ಷಣೆಗೊಳಗಾದ ಯುವಕರು.
ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ
ಮಹಾರಾಷ್ಟ್ರದ ಪುಣೆಯಿಂದ ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ, ಬಳಿಕ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯಲ್ಲಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನಲೆ ಮೊಬೈಲ್ ನೆಟ್ವರ್ಕ್ ಆಧರಿಸಿ ಖಾಕಿ ಪಡೆ ಕುನ್ನಟಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿತ್ತು. ಈ ವೇಳೆ ಪೊಲೀಸರಿಗೆ ಗನ್ ತೋರಿಸಿ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇದೇ ಗ್ಯಾಂಗ್ನಿಂದ ಅಪಹರಣಕ್ಕೊಳಗಾದ ಉಳಿದ ಮೂವರು ಯುವಕರಿಗಾಗಿ ಮಹಾರಾಷ್ಟ್ರ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಅ್ಯಂಡ್ ಗ್ಯಾಂಗ್; ಮೂವರು ಅರೆಸ್ಟ್
ಕ್ಯಾಂಟರ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಪಾಲಿಕೆ ಸದಸ್ಯನ ಸ್ಥಿತಿ ಗಂಭೀರ
ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದ ರಿಂಗರೋಡ್ ಬಳಿ ಕ್ಯಾಂಟರ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ಹು-ಧಾ ಮಾಹಾನಗರ ಪಾಲಿಕೆ ಸದಸ್ಯ ದೊರೈರಾಜ ಪುತ್ರ ಪ್ರಥ್ವಿರಾಜ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಸ್ಕೂಟಿ ನಿಯಂತ್ರಣಕ್ಕೆ ಸಿಗಲಾರದೆ ನಿಂತಿದ್ದ ಕ್ಯಾಂಟರ್ ಹಿಂಬದಿಯಿಂದ ಕಾರ್ಪೋರೆಟರ್ ಮಗ ಡಿಕ್ಕಿ ಹೊಡೆದಿದ್ದಾರೆ. ಸ್ಥಳೀಯರು ಗಂಭೀರ ಗಾಯಗೊಂಡ ಪ್ರಥ್ವಿರಾಜ್ನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ