ರಾಯಚೂರು ವಿಶ್ವವಿದ್ಯಾಲಯ ಹೊಣೆಗೇಡಿತನ – ರಿಸಲ್ಟ್ ಇಲ್ಲ; ಮಾರ್ಕ್ಸ್ ಕಾರ್ಡ್ ಇಲ್ಲವೇ ಇಲ್ಲ – ವರ್ಷಗಳಿಂದಲೂ ಇದೇ ಸಮಸ್ಯೆ
Raichur University Accountability at stake : ಈ ವಿದ್ಯಾರ್ಥಿಗಳು 3ನೇ ಸೆಮಿಸ್ಟರ್ ಪರೀಕ್ಷೆ ಬರೆದು 4 ತಿಂಗಳು ಕಳೆದರೂ ರಿಸಲ್ಟ್ ಕೂಡ ಇಲ್ಲ ಮಾರ್ಕ್ಸ್ ಕಾರ್ಡ್ ಇಲ್ಲವೇ ಇಲ್ಲ ಎಂಬಂತಾಗಿದೆ. ಕೇವಲ ಒಂದು ಹಾಗೂ ಎರಡನೇ ಸೆಮಿಸ್ಟರ್ ರಿಸಲ್ಟ್ ನೀಡಿ, ಅದರ ಮಾರ್ಕ್ಸ್ ಕಾರ್ಡ್ ಕೂಡ ನೀಡದೆ ವಿವಿ ರಾಯಚೂರು ಹೊಣೆಗೇಡಿತನ ತೋರಿದೆ.
ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಕನಸು ನನಸು ಆಗಿದ್ದರೂ ರಾಯಚೂರು ವಿವಿ ದಿವ್ಯ ನಿರ್ಲಕ್ಷದಿಂದ ವಿದ್ಯಾರ್ಥಿಗಳು (Students) ಸಂಕಷ್ಟಕ್ಕಿಡಾಗಿದ್ದಾರೆ. ಹೆಸರಿಗೆ ಮಾತ್ರ ರಾಯಚೂರು ವಿವಿ ಆಗಿದೆ, ಆದರೆ ಮೂಲಭೂತ ಸೌಕರ್ಯಗಳು ಇಲ್ಲವಾಗಿದೆ. ಗುಲ್ಬರ್ಗಾ ವಿವಿಯಿಂದ ಬೇರ್ಪಟ್ಟು, ರಾಯಚೂರು ಯೂನಿವರ್ಸಿಟಿಯಾಗಿ ಮುಕ್ತಿ ಪಡೆದರೂ ವಿದ್ಯಾರ್ಥಿಗಳಿಗೆ ತೀರದ ಗೋಳಾಗಿದೆ. ಪರೀಕ್ಷೆ ಬರೆದು ಒಂದು ವರ್ಷ ಕಳೆದರೂ ವಿದ್ಯಾರ್ಥಿಗಳ ಕೈಗೆ ಮಾರ್ಕ್ಸ್ ಕಾರ್ಡ್ (Raichur University Marks Card Issue) ಸಿಕ್ಕಿಲ್ಲ. MA, MSc, MCom, MSW ಕೋರ್ಸ್ ಮಾಡಿದ ಸ್ಟೂಡೆಂಟ್ಸ್ ಫಜೀತಿಗೆ (Accountability) ಸಿಕ್ಕಿದ್ದಾರೆ.
ಈ ವಿದ್ಯಾರ್ಥಿಗಳು 3ನೇ ಸೆಮಿಸ್ಟರ್ ಪರೀಕ್ಷೆ ಬರೆದು 4 ತಿಂಗಳು ಕಳೆದರೂ ರಿಸಲ್ಟ್ ಕೂಡ ಇಲ್ಲ ಮಾರ್ಕ್ಸ್ ಕಾರ್ಡ್ ಇಲ್ಲವೇ ಇಲ್ಲ ಎಂಬಂತಾಗಿದೆ. ಕೇವಲ ಒಂದು ಹಾಗೂ ಎರಡನೇ ಸೆಮಿಸ್ಟರ್ ರಿಸಲ್ಟ್ ನೀಡಿ, ಅದರ ಮಾರ್ಕ್ಸ್ ಕಾರ್ಡ್ ಕೂಡ ನೀಡದೆ ವಿವಿ ರಾಯಚೂರು ಹೊಣೆಗೇಡಿತನ ತೋರಿದೆ.
ಸುಮಾರು 80 ಸಾವಿರ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದರು. ನಾಲ್ಕು ತಿಂಗಳುಗಳಿಂದ ಸುದೀರ್ಘ ಕಾಲದಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿದೆ. ಸಿಬ್ಬಂದಿ ಮತ್ತು ಕಟ್ಟಡಗಳು ಇಲ್ಲ ಎಂದು ಕುಂಟು ನೆಪವೊಡ್ಡುತ್ತಿದ್ದಾರೆ ಎಂದು ಗರಂ ಆಗಿರುವ ವಿವಿ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಈ ಮಧ್ಯೆ ಇದೇ ನವೆಂಬರ್ ತಿಂಗಳಲ್ಲಿ ಮತ್ತೆ ಎಕ್ಸಾಮ್ ಅಂತ ಹೇಳ್ತಿದ್ದಾರೆ. ಆದರೆ ಅದರ ಹಿಂದಿನ ಪರೀಕ್ಷೆಯ ರಿಸಲ್ಟ್ ಬಂದಿಲ್ಲ. ರಿಸಲ್ಟ್ ಕ್ಲಿಯರ್ ಇದ್ರೆ ಯಾವ ವಿಷಯ ಬ್ಯಾಲೆನ್ಸ್ ಇದೆ ಅಂತ ವಿದ್ಯಾರ್ಥಿಗಳಿಗೆ ಗೊತ್ತಾಗ್ತಿತ್ತು. K SET ನೇಮಕಾತಿ ಕರೆದಿದೆ. ಅದಕ್ಕೂ ಅರ್ಜಿ ಹಾಕಲು ಹಾಕಲಾಗುತ್ತಿಲ್ಲ. ಯಾಕಂದ್ರೆ ನಾವು ಎಲಿಜಿಬಲ್ ಆಗಿದ್ದೀವಾ ಅಂತಾನೂ ಗೊತ್ತಾಗುತ್ತಿಲ್ಲ ಅಂತ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.
Also Read: ಕೀರ್ತಿವೆತ್ತ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೆ ನಿರ್ಲಕ್ಷ್ಯ, 15 ಸಾವಿರ ಅಂಕಪಟ್ಟಿಗಳಲ್ಲಿ ಯಡವಟ್ಟು
ಇನ್ನು ಗುಲ್ಬರ್ಗ ಯುನಿವರ್ಸಿಟಿಯಲ್ಲಿದ್ದಾಗಲೂ ಕೂಡ ಇದೇ ಸಮಸ್ಯೆಯಿತ್ತು. ರಾಯಚೂರು ಯೂನಿವರ್ಸಿಟಿ ಪ್ರತ್ಯೇಕ ಆದ್ರೂ ಅದೇ ಸಮಸ್ಯೆ ಮುಂದುವರಿದಿದೆ ಅಂತ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.
ರಾಯಚೂರು ವಿವಿಯಲ್ಲಿ ಮಾರ್ಕ್ಸ್ ಕಾರ್ಡ್ ಪ್ರಿಂಟ್ ಮಾಡಲು ಮಿಷನ್ ಇಲ್ಲ. ಈಗಲೂ ಗುಲ್ಬರ್ಗ ವಿವಿಯಿಂದ ಮಾರ್ಕ್ಸ್ ಕಾರ್ಡ್ ಪ್ರಿಂಟ್ ಮಾಡಿಸ್ತಾರೆ. ಎರಡು ವರ್ಷವೇ ಕಳೆದರೂ ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಪ್ರಿಂಟರ್ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ಶೀಘ್ರವೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲಾಗುತ್ತದೆ ಅಂತ ರಾಯಚೂರು ವಿವಿ ಮೌಲ್ಯಪಾನ ಕುಲಸಚಿವ ಪ್ರೊ. ಎಂ. ಯರಿಸ್ವಾಮಿ ಸಮಜಾಯಿಷಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Tue, 31 October 23