ರಾಯರ ಬೃಂದಾವನಕ್ಕೆ 20 ಕೋಟಿ ರೂ. ಮೌಲ್ಯದ 2 ಚಿನ್ನದ ಪಾತ್ರೆ ಸಮರ್ಪಣೆ ಮಾಡಿದ ದಾನಿಗಳು
ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾದ ಪಾತ್ರೆಗಳನ್ನು ಮಠದ ಶ್ರೀಗಳು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. 20 ಕೋಟಿ ರೂಪಾಯಿ ಮೌಲ್ಯದ ಈ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಕೆ ಮಾಡಲು ಶ್ರೀಗಳು ತೀರ್ಮಾನಿಸಿದ್ದಾರೆ.
ರಾಯಚೂರು: ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೊಂದು ವಿಶೇಷ ಪೂಜೆ ರಾಯರ ಸನ್ನಧಿಯಲ್ಲಿ ನಡೆಯುತ್ತಿದೆ. ಅದರಂತೆ ಇಂದು ಉತ್ತರಾಧನೆ ನಡೆಯುತ್ತಿದೆ. ಈ ಸಂಭ್ರವನ್ನು ಮತ್ತಷ್ಟು ಇಮ್ಮಡಿಗೊಳಿಸಲು ರಾಯರ ಬೃಂದಾವನಕ್ಕೆ ಎರಡು ಚಿನ್ನದ ಪಾತ್ರೆಯನ್ನು ಸಮರ್ಪಣೆ ಮಾಡಲಾಗಿದೆ.
ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾದ ಪಾತ್ರೆಗಳನ್ನು ಮಠದ ಶ್ರೀಗಳು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. 20 ಕೋಟಿ ರೂಪಾಯಿ ಮೌಲ್ಯದ ಈ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಕೆ ಮಾಡಲು ಶ್ರೀಗಳು ತೀರ್ಮಾನಿಸಿದ್ದಾರೆ.
ಕಲಿಯುಗದ ಕಲ್ಪವೃಕ್ಷ ಕಾಮಧೇನು ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನೆ ಮಹೋತ್ಸವ ನಡೆಯುತ್ತಿದೆ. ಆಗಸ್ಟ್ 21 ರಿಂದ ಆರಂಭವಾದ ರಾಯರ ಆರಾಧನೆ ಮಹೋತ್ಸವ ಆಗಸ್ಟ್ 27ರವರೆಗೂ ನಡೆಯಲಿದೆ. ಈ ನಿಟ್ಟಿನಲ್ಲಿ ಮಂತ್ರಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಪರಿಮಳ ಪ್ರಸಾದದ ಪ್ಯಾಕಿಂಗ್ ರಾಯರ ದರ್ಶನಕ್ಕೆ ಬಂದ ಭಕ್ತರೇ ಪರಿಮಳ ಪ್ರಸಾದ ಪ್ಯಾಕಿಂಗ್ ಮಾಡುವ ವಾಡಿಕೆ ಮಂತ್ರಾಲಯದಲ್ಲಿ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಭರದಿಂದ ಪರಿಮಳ ಪ್ರಸಾದದ ಪ್ಯಾಕಿಂಗ್ ನಡೆಯುತ್ತಿದೆ. ಪರಿಮಳ ಪ್ರಸಾದ ಸರ್ವರೋಗಕ್ಕೂ ಮದ್ದು ಎಂಬ ಪ್ರತೀತಿ ಇದೆ. ಹೀಗಾಗಿ ಮಂತ್ರಾಲಯಕ್ಕೆ ಬರುವವರು ಪರಿಮಳ ಪ್ರಸಾದ ಪಡೆಯುವುದು ವಾಡಿಕೆ. ಈ ಬಾರಿ 5 ಕ್ವಿಂಟಲ್ಗೂ ಅಧಿಕ ಪರಿಮಳ ಪ್ರಸಾದ ತಯಾರಿಸಲಾಗಿದೆ.
ಇದನ್ನೂ ಓದಿ: ಮಂತ್ರಾಲಯದಲ್ಲಿ ಮಧ್ಯರಾಧನೆ: ತಿರುಪತಿ ತಿರುಮಲದಿಂದ ಬಂದ ಶೇಷವಸ್ತ್ರ ರಾಯರ ಬೃಂದಾವನಕ್ಕೆ ಸಮರ್ಪಣೆ
ರಾಯರ 350ನೇ ಆರಾಧನಾ ಮಹೋತ್ಸವ; ಹಿಂದೂ ಧರ್ಮದ ಸಂದೇಶ ಸಾರುವ ಅತ್ಯಾಕರ್ಷಕ ಮ್ಯೂಸಿಯಮ್ ಲೋಕಾರ್ಪಣೆ
Published On - 8:22 am, Wed, 25 August 21