Raichur News: ಜಲಾವೃತವಾದ ಸೇತುವೆ ಮೇಲೆ ಶಾಲಾ ವಾಹನ ಓಡಿಸಿ ಚಾಲಕನ ದುಸ್ಸಾಹಸ: ತಪ್ಪಿದ ಭಾರೀ ಅನಾಹುತ

ತುಂಬಿ ಹರಿಯುತ್ತಿರುವ ಸೇತುವೆ ಮಧ್ಯೆ ಖಾಸಗಿ ಬಸ್ ಸಿಲುಕಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ನಡೆದಿದೆ. ಸ್ವಲ್ಪದರಲ್ಲೇ ಬಸ್​​ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

Raichur News: ಜಲಾವೃತವಾದ ಸೇತುವೆ ಮೇಲೆ ಶಾಲಾ ವಾಹನ ಓಡಿಸಿ ಚಾಲಕನ ದುಸ್ಸಾಹಸ: ತಪ್ಪಿದ ಭಾರೀ ಅನಾಹುತ
ಜಲಾವೃತವಾದ ಸೇತುವೆ ಮೇಲೆ ಶಾಲಾ ವಾಹನ ಓಡಿಸಿ ದುಸ್ಸಾಹಸ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 04, 2022 | 11:02 AM

ರಾಯಚೂರು: ಜಲಾವೃತವಾದ ಸೇತುವೆ ಮೇಲೆ ಶಾಲಾ ವಾಹನ (school bus) ಓಡಿಸಿ ದುಸ್ಸಾಹಸ ಮೇರೆದಿರುವಂತಹ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ. ಭಾರೀ ಮಳೆ‌ ಹಿನ್ನೆಲೆ ಬೆಂಡೋಣಿ ಹಳ್ಳ ತುಂಬಿ ಹರಿಯುತ್ತಿದ್ದು, ಸೇತುಬೆ ಮೇಲೆ ನೀರಿನ ರಭಸ ಹೆಚ್ಚಾದ ಹಿನ್ನೆಲೆ ಸಂಚಾರ ಸ್ಥಗಿತವಾಗಿದೆ. ಆದರೆ ಖಾಸಗಿ ಶಾಲಾ ವಾಹನದ ಚಾಲಕ ದುಸ್ಸಾಹಸ ಮೇರೆದಿದ್ದು, ಸುಮಾರು 30 ಮಕ್ಕಳಿದ್ದ ಶಾಲಾ ವಾಹನ ಸೇತುವೆ ದಾಟಿಸಲು ಪ್ರಯತ್ನಿಸಿದ್ದಾನೆ. ಜಾಗಿರ ನಂದಿಹಾಳ ಸೇರಿ ಸುತ್ತಲಿನ ಗ್ರಾಮದ ಮಕ್ಕಳು ಶಾಲಾ ಬಸ್​ನಲ್ಲಿದ್ದರು. ಸೇತುವೆ ಮೇಲೆ ಮೂರ್ನಾಲ್ಕು ಅಡಿ ನೀರು ಹರಿಯುತ್ತಿದ್ದು, ಈ ಮಧ್ಯೆ ಮಕ್ಕಳಿದ್ದ ವಾಹನವನ್ನು ಸೇತುವೆ ದಾಟಿಸಲು ಚಾಲಕ ಯತ್ನಿಸಿದ್ದಾನೆ. ಇದನ್ನ ನೋಡಿ ಸ್ಥಳೀಯರಿಂದ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇನ್ನೂ ಮೂರು ದಿನ ಮಳೆ; ನೆರೆ ರಾಜ್ಯಗಳಲ್ಲೂ ಮಳೆಗಿಲ್ಲ ವಿರಾಮ

ತುಂಬಿ ಹರಿಯೊ ಹಳ್ಳದಲ್ಲಿ ಟ್ರಾಕ್ಟರ್ ಓಡಿಸಿ ದುಸ್ಸಾಹಸ ಮಾಡಿರುವಂತಹ ಘಟನೆ ಜಿಲ್ಲೆಯ ಸಿರವಾರ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಘಟನೆ ನಡೆದಿದೆ. ಭಾರೀ ಮಳೆ ಹಿನ್ನೆಲೆ ಕಾಣಿಗಿ ಹಳ್ಳ ತುಂಬಿ ಹರಿಯುತ್ತಿದ್ದು, ಐದಾರು ಅಡಿ ನೀರಿನಲ್ಲೇ ಟ್ರಾಕ್ಟರ್ ಓಡಿಸಿ ಚಾಲಕನ ದುಸ್ಸಾಹಸ ಮೇರೆದಿದ್ದಾನೆ. ಕೂದಲೆಳೆಯ ಅಂತರದಲ್ಲಿ ಜಸ್ಟ್ ಮಿಸ್ ಆಗಿ ಟ್ರಾಕ್ಟರ್ ಸಮೇತ ದಡ ಸೇರಿದ ಚಾಲಕ. ಯಲ್ಲಪ್ಪ ಅನ್ನೋರ ಟ್ರಾಕ್ಟರ್ ಓಡಿಸುತ್ತಿದ್ದ ರಾಮಾಂಜನೇಯ ಅನ್ನೊ ಚಾಲಕನ ದುಸ್ಸಾಹಸ.

ತುಂಬಿ ಹರಿಯುತ್ತಿದ್ದ ಸೇತುವೆ ಮಧ್ಯೆ ಸಿಲುಕಿದ ಖಾಸಗಿ ಬಸ್

ತುಮಕೂರು: ತುಂಬಿ ಹರಿಯುತ್ತಿರುವ ಸೇತುವೆ ಮಧ್ಯೆ ಖಾಸಗಿ ಬಸ್ ಸಿಲುಕಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ನಡೆದಿದೆ. ಸ್ವಲ್ಪದರಲ್ಲೇ ಬಸ್​​ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆಯಿಂದಾಗಿ ಕೆರೆಗಳು ತುಂಬಿ ಹರಿಯುತ್ತಿವೆ. ಅದೇ ರಸ್ತೆಯಲ್ಲಿ ಖಾಸಗಿ ಬಸ್​ ಸಂಚಾರ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ನೀರಿನ ಹೆಚ್ಚಳದಿಂದ ನೀರಿನಲ್ಲೇ ಖಾಸಗಿ ಬಸ್ ನಿಂತ್ತಿದೆ. ಸ್ಥಳಕ್ಕೆ ದಾವಿಸಿದ ಗ್ರಾಮಸ್ಥರಿಂದ ಬಸ್​ನಲ್ಲಿದ್ದ ಪ್ರಯಾಣಿಕರ‌ ರಕ್ಷಣೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಳೆ ನಿಂತರೂ ನಿಲ್ಲದ ಕೆರೆಗಳ ಹೊರ ಹರಿಯುವಿಕೆ

ಹಾಸನ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹಿನ್ನೆಲೆ ಮಳೆ ನಿಂತರೂ ಕೆರೆಗಳ ಹೊರ ಹರಿಯುವಿಕೆ ಪ್ರಮಾಣ ಕಡಿಮೆಯಾಗಿಲ್ಲ. ಬಾಗೂರು ಕೆರೆ ಭರ್ತಿಯಾಗಿ ಹೆಚ್ಚಿದ ಕೋಡಿ ಹರಿಯುವಿಕೆ ಪ್ರಮಾಣ ಹೆಚ್ಚಿದ್ದು, ರಸ್ತೆ ಮೇಲೆ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಬಾಗೂರು, ನುಗ್ಗೇಹಳ್ಳಿ ರಸ್ತೆ ಸಂಪರ್ಕ ತಾತ್ಕಾಲಿಕ ಬಂದ್ ಮಾಡಲಾಗಿದ್ದು, ವೇಗವಾಗಿ ಹರಿಯುತ್ತಿರುವ ನೀರಿನಲ್ಲಿಯೇ ರಸ್ತೆ ದಾಟಲು ಬೈಕ್ ಸವಾರ ಮುಂದಾಗಿದ್ದು, ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನ ಸ್ಥಳಿಯರು ರಕ್ಷಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಘಟನೆ ನಡೆದಿದೆ.

Published On - 11:01 am, Thu, 4 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ