AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಜತೆ ಇರುವಾಗಲೇ ಸಿಕ್ಕಿಬಿದ್ದ ಹೆಡ್​ಕಾನ್ಸ್​ಟೇಬಲ್, ಇಬ್ಬರನ್ನು ಲಾಕ್ ಮಾಡಿ ಎಸ್​ಪಿಗೆ ಕರೆದ ಮಾಡಿದ ಪತ್ನಿ

ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿ ಪ್ರೇಯಸಿಯೊಂದಿಗೆ ಎಂಜಾಯ್​ ಮಾಡುತ್ತ ಕಾಲ ಕಳೆಯುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ ಇದೀಗ ಲಾಕ್​ ಆಗಿದ್ದಾನೆ. ಕದ್ದು ಮುಚ್ಚಿ ಪ್ರೇಯಿಸಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಹೆಡ್​ಕಾನ್ಸ್​ಟೇಬಲ್​​ನನ್ನು ಪತ್ನಿಯೇ ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಲ್ಲದೇ ಇಬ್ಬರನ್ನೂ ಲಾಕ್ ಮಾಡಿ ಎಸ್​ಪಿಗೆ ದೂರು ನೀಡಿದ್ದಾರೆ,

ಪ್ರೇಯಸಿ ಜತೆ ಇರುವಾಗಲೇ ಸಿಕ್ಕಿಬಿದ್ದ ಹೆಡ್​ಕಾನ್ಸ್​ಟೇಬಲ್, ಇಬ್ಬರನ್ನು ಲಾಕ್ ಮಾಡಿ ಎಸ್​ಪಿಗೆ ಕರೆದ ಮಾಡಿದ ಪತ್ನಿ
ಭೀಮೇಶ್​​ ಪೂಜಾರ್
| Edited By: |

Updated on:Jul 24, 2024 | 10:47 PM

Share

ರಾಯಚೂರು, (ಜುಲೈ 24): ಗಂಡ ಸಿರವಾರ  ಠಾಣೆಯಲ್ಲಿ ಹೆಡ್​ಕಾನ್ಸ್​ಟೇಬಲ್ ಆಗಿದ್ದರೆ, ಹೆಂಡ್ತಿ ದೇವದುರ್ಗ ಠಾಣೆ ಕಾನ್ಸ್ ಟೇಬಲ್ ಆಗಿದ್ದಾರೆ. ಇಬ್ಬರು ಅನ್ಯೂನ್ಯವಾಗಿದ್ದರು. ಆದ್ರೆ, ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್ ಬೇರೆ ಹೆಣ್ಮಗಳ ಪ್ರೀತಿಯ ಬಲೆಗೆ ಬಿದ್ದಿದ್ದು, ಇದೀಗ ರಾಜ್ ಮೊಹಮ್ಮದ್ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡುವಾಗಲೇ ಹೆಂಡ್ತಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಹೌದು.. ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಹೆಡ್​ಕಾನ್ಸ್​ಟೇಬ್ ರಾಜ್ ಮೊಹಮ್ಮದ್, ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ತನ್ನ ಪತಿ ಪ್ರೇಯಸಿ ಜೊತೆ ಇರುವುದನ್ನು ರೆಡ್​ಹ್ಯಾಂಡ್​ ಆಗಿ ಲಾಕ್ ಮಾಡಿದ ಪತ್ನಿ ಪ್ಯಾರಿ ಬೇಗಂ, ಬಳಿಕ ಎಸ್​​ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದ್ರೆ, ಈ ಬಾರಿ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್, ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿದ್ದು, ಬಳಿಕ ಕರೆ ಮಾಡಿ ಎಸ್​​ಪಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಲೇಡಿಸ್ ಪಿಜಿಯಲ್ಲಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಕೊಲೆಗಾರನ ಸುಳಿವು ಪತ್ತೆ, ಯಾರು ಗೊತ್ತಾ?

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್​ ಓಪನ್ ಮಾಡಿ ಬಳಿಕ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ.  ಈ ವೇಳೆ ಸುತ್ತಮುತ್ತಲಿನ ಜನರು ಜಮಾವಣೆಗೊಂಡಿದ್ದರು.

ಈ ಹಿಂದೆ ಎರಡು ಬಾರಿ ಹಿರಿಯ ಅಧಿಕಾರಿಗಳು ರಾಜ್ ಮೊಹಮ್ಮದ್​ಗೆ ಬೈದು ಬುದ್ದಿ ಹೇಳಿದ್ದರು. ಆದ್ರೆ, ರಾಜ್ ಮೊಹಮ್ಮದ್ ತನ್ನ ಚಾಳಿ ಹಳೇ ಚಾಳಿ ಮಾತ್ರ ಬಿಟ್ಟಿಲ್ಲ. ಈ ಹಿಂದೆ ಹಲವರು ತಿಳುವಳಿಕೆ ಹೇಳಿದ್ದರೂ ಸಹ ಮತ್ತೆ ಅದೇ ರಾಗ ಮುಂದುವರೆಸಿರುವ ರಾಜ್ ಮೊಹಮ್ಮದ್ ವಿರುದ್ಧ ಪತ್ನಿ ದೂರು ನೀಡಲು ಮುಂದಾಗಿದ್ದಾರೆ.

Published On - 10:39 pm, Wed, 24 July 24

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು