Tumkur Rains: ಭಾರಿ ಮಳೆಯಿಂದ ಹುಂಜಿನ ಹಳ್ಳದಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವು

ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ತೋಟಗಳು ಜಲಾವೃತವಾಗಿವೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚೀಲಗಾನಹಳ್ಳಿಯಲ್ಲಿ ತೋಟದ ಮನೆಯಲ್ಲಿ ವಾಸವಿದ್ದ ಕುಟುಂಬವೊಂದನ್ನ ಅಗ್ನಿಶಾಮಕ ದಳ ರಕ್ಷಿಸಿದೆ.

Tumkur Rains: ಭಾರಿ ಮಳೆಯಿಂದ ಹುಂಜಿನ ಹಳ್ಳದಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವು
ಭಾರಿ ಮಳೆಯಿಂದ ಹುಂಜಿನಹಳ್ಳದಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವು
Follow us
| Updated By: ಸಾಧು ಶ್ರೀನಾಥ್​

Updated on:Aug 04, 2022 | 6:45 PM

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರುಡಗಾನಹಳ್ಳಿ ಬಳಿ ಭಾರಿ ಮಳೆಯಿಂದ ಹುಂಜಿನಹಳ್ಳದಲ್ಲಿ ಕೊಚ್ಚಿ ಹೋಗಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಲಕ್ಷ್ಮಮ್ಮ(70) ಸಾವನ್ನಪ್ಪಿದ ಮಹಿಳೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಈ ಮಧ್ಯೆ, ತುಮಕೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ತಿಪಟೂರು ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಈಡೇನಹಳ್ಳಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಗ್ರಾಮಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಿಪಟೂರು KSRTC ಬಸ್ ನಿಲ್ದಾಣಕ್ಕೂ ಮಳೆ ನೀರು ನುಗ್ಗಿದೆ.

ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ತೋಟಗಳು ಜಲಾವೃತವಾಗಿವೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚೀಲಗಾನಹಳ್ಳಿಯಲ್ಲಿ ತೋಟದ ಮನೆಯಲ್ಲಿ ವಾಸವಿದ್ದ ಕುಟುಂಬವೊಂದನ್ನ ಅಗ್ನಿಶಾಮಕ ದಳ ರಕ್ಷಿಸಿದೆ. ತೋಟದ ಮನೆಯಲ್ಲಿ ಸಿಲುಕಿದ್ದ ತಾಯಿ ಮಗುವನ್ನ ರಕ್ಷಣೆ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ: ಮಳೆಗೆ ಸ್ಕಿಡ್ ಆಗಿ ಬಿದ್ದ ದ್ವಿಚಕ್ರ ವಾಹನ ಸವಾರ, ತಲೆ ಮೇಲೆ ಹತ್ತಿದ ಐಚರ್ ವಾಹನ, ಸಾವು

ಬೆಂಗಳೂರು: ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ಬೈಕ್​ಗೆ ಹಿಂಬದಿಯಿಂದ ಈಚರ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೊಮ್ಮಸಂದ್ರದ ನಿವಾಸಿ ಕಿರಣ್ ಕುಮಾರ್ (30) ಮೃತ ದುರ್ದೈವಿ. ಅಪಘಾತದಿಂದ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿ ಕೆಲಕಾಲ ಟ್ರಾಫಿಕ್‌ ಜಾಮ್ ಉಂಟಾಗಿತ್ತು.

ಸವಾರ ಕಿರಣ್ ಕುಮಾರ್ ತನ್ನ ಸ್ಕೂಟಿ ವಾಹನ ಓಡಿಸಿಕೊಂಡು ಸಿಲ್ಕ್ ಬೋರ್ಡ್ ಕಡೆ ಹೊರಟಿದ್ದ. ಮಳೆಗೆ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾನೆ. ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಐಚರ್ ವಾಹನ ಆತನ ತಲೆಯ ಮೇಲೆ ಚಲಿಸಿದೆ. ಮೃತ ವ್ಯಕ್ತಿಯ ಶವ ಸೇಂಟ್ ಜಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ‌ ನೀಡಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೃತ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಬೆಂಗಳೂರು-ಚೆನೈ ಹೈವೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

Published On - 6:18 pm, Thu, 4 August 22