AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ -ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲ ಅಂತಾ ಹೇಳಬಹುದು. ಹೌದು ನೀರು ಬಿಟ್ಟಿದ್ದಾರೆ ಅನಿವಾರ್ಯತೆ ಇದೆ ಅದನ್ನು ಒಪ್ಪುತ್ತೇನೆ. ಆದರೆ ಮಳೆ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ -ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ
TV9 Web
| Updated By: ಆಯೇಷಾ ಬಾನು|

Updated on: Sep 19, 2023 | 2:05 PM

Share

ರಾಮನಗರ, ಸೆ.19: ತಮಿಳುನಾಡಿಗೆ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಸಂಬಂಧ ರಾಮನಗರದಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ(HD Kumaraswamy) ಸುದ್ದಿಗೋಷ್ಠಿ ನಡೆಸಿದ್ದಾರೆ. ನೀರು ಹರಿಸದಿದ್ರೆ ಆದೇಶ ಉಲ್ಲಂಘನೆ ಅಂತಾ ಸಚಿವರು ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲ ಅಂತಾ ಹೇಳಬಹುದು. ಹೌದು ನೀರು ಬಿಟ್ಟಿದ್ದಾರೆ ಅನಿವಾರ್ಯತೆ ಇದೆ ಅದನ್ನು ಒಪ್ಪುತ್ತೇನೆ. ಆದರೆ ಮಳೆ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಕಾವೇರಿ ನದಿ ಸಂಬಂಧ ಸಭೆಗಳಲ್ಲಿ ತಮಿಳುನಾಡಿನ 10-15 ಅಧಿಕಾರಿಗಳು ಭಾಗಿಯಾಗ್ತಾರೆ. ಆದರೆ ನಮ್ಮ ಅಧಿಕಾರಿಗಳು ಒಬ್ಬರೋ ಇಬ್ಬರೂ ಕಾಟಾಚಾರಕ್ಕೆ ಭಾಗಿಯಾಗುತ್ತಾರೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀರಿನ ಹಂಚಿಕೆ ಕೊರತೆ ಬಗ್ಗೆ ದೇವೇಗೌಡರು ಮಾತನಾಡಿದ್ರು. ‌ನಿಲ್ಲೋಕಾಗದೇ ಇರುವ ಪರಿಸ್ಥಿಯಲ್ಲೂ ರಾಜ್ಯದ ಬಗ್ಗೆ ಮಾತನಾಡಿದ್ದರು. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲಿ ಹೋಗಿದ್ದಾರೆ. ದೇವೇಗೌಡರು ಮಾತನಾಡಬೇಕಾದರೆ, ತಮಿಳುನಾಡು ಸದಸ್ಯರು ಪ್ರತಿಭಟಿಸಿದ್ರು. ಅದನ್ನು ಕಂಡು ದೇವೇಗೌಡರು ಎದ್ದು ನಿಂತು ಮಾತಾನಾಡಿದ್ದು ಅವರ ಕಮಿಟ್ ಮೆಂಟ್ ತೋರಿಸುತ್ತೆ. ದೇವೇಗೌಡರು ಕಾವೇರಿ ವಿಚಾರಕಲ್ಲ, ಮೈತ್ರಿ ಬಗ್ಗೆ ಡೆಲ್ಲಿಗೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ನಿನ್ನೆ, ಮೊನ್ನೆ ಬಂದವರು. ದೇವೇಗೌಡರ ಬಗ್ಗೆ ಮಾತನಾಡ್ತಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇವೇಗೌಡರೇ ಏಕಾಂಗಿ ಹೋರಾಟ ಮಾಡಬೇಕು

ಎಮರ್ಜೆನ್ಸಿ ಅರ್ಜಿ ಹಾಕಿ ಮಧ್ಯ ರಾತ್ರಿ ಕೋರ್ಟ್ ನಡೆದಿಲ್ವಾ. ಅದೇ ಥರಾ ಇದು ಎಮರ್ಜನ್ಸಿ ಅಂತ ಒಂದು ಅರ್ಜಿ ಹಾಕಿಸೋಕೆ ಆಗಿಲ್ಲ. ಅರ್ಜಿ ಹಾಕಿದ ತಕ್ಷಣ ಯಾಕೆ ನೀರು ಬಿಟ್ಟಿದ್ದು, ಪ್ರಾಧಿಕಾರಕ್ಕೆ ಏನಾದ್ರೂ ಪ್ರಶ್ನೆ ಕೇಳದ ಅಧಿಕಾರ ಕೊಟ್ಟಿದ್ದೀವಾ. ವಾಟರ್ ಮ್ಯಾನೆಜ್ ಮೆಂಟ್ ಹೇಳಿದ್ರು ಅಂದ ತಕ್ಷಣ ನೀರು ಬಿಡೋದು. ಸರ್ಕಾರ ಬಂದಾಗಿನಿಂದ ನೋಡ್ತಾ ಇದ್ದೇನೆ, ಇವರು ತಮಿಳುನಾಡಿಗೆ ನೀರು ಬಿಡ್ತಾ ಇದ್ದಾರೆ. ದೇವೇಗೌಡರೇ ಏಕಾಂಗಿ ಹೋರಾಟ ಮಾಡಬೇಕು. ಅದೇನೋ ಪಾದಯಾತ್ರೆ ಮಾಡಿದವರು ಇದ್ದಾರಲ್ಲ. ಅವರು ಯಾಕೆ ಮಾತಾಡೋಕೆ ಆಗಿಲ್ಲ. ತಮಿಳುನಾಡಿದ 40 ಜನ ಎದ್ದು ನಿಲ್ತಾರೆ. ದೇವೇಗೌಡರು ಮಾತನಾಡಬೇಕಾದ್ರೆ ಯಾರೂ ಗತಿ ಇಲ್ಲ ಅಲ್ಲಿ. ಸರ್ವಪಕ್ಷದ ಸಭೆ ಮಾಡ್ತೀರಿ, ಬಾದಾಮಿ ಹಾಗೂ ಚಿಪ್ಸ್ ಗಾಗಿ ಸರ್ವಪಕ್ಷ ಸಭೆ ನಡೆಯುತ್ತೆ ಎಂದು ಕುಮಾರಸ್ವಾಮಿ ಗುಡುಗಿದರು.

ಇದನ್ನೂ ಓದಿ: ಜೆಡಿಎಸ್​-ಬಿಜೆಪಿ ಮೈತ್ರಿ ಮಾತುಕತೆ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ, ಮಂಡ್ಯದ ಬಗ್ಗೆ ಮಹತ್ವದ ಚರ್ಚೆ

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ರಾಜ್ಯಕ್ಕೆ ಅನ್ಯಾಯವೇ ಆಗಿದೆ. ದೇವೇಗೌಡರು ಪ್ರಧಾನಿ ಆಗಿದ್ರಲ್ಲ ಅಂತ ಕೇಳಬಹುದು. ಇಪ್ಪತ್ತು ಇಪ್ಪತ್ತೆರಡು ಪಕ್ಷಗಳು ಸೇರಿ ಬೆಂಬಲ ಕೊಟ್ಟಿದ್ವು. ಒಂದೇ ಪಕ್ಷದಿಂದ ಗೆದ್ದಿರಲಿಲ್ಲ, ಆದ್ರೂ ಹಲವು ಯೋಜನೆ ತೆಗೆದುಕೊಂಡು ಬಂದ್ರು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ 8 ದೇಶಗಳು ನದಿ ನೀರು ಹಂಚಿಕೊಂಡಿರುವ ಬಗ್ಗೆ ಹೆಚ್​ಡಿಕೆ ಉಲ್ಲೇಖಿಸಿದರು. ಕೋರ್ಟ್ ಮುಖಾಂತರ ನದಿ ನೀರು ಹಂಚಿಕೆ ವಿವಾದ ಬಗೆಹರಿಯೋದು ಅಸಾಧ್ಯ ಅಂತ ಇದೆ. ಬಾಂಗ್ಲಾದೇಶ ನೀರು ಹಂಚಿಕೆ ದೇವೇಗೌಡರು‌ ಬಗೆಹರಿಸಿದ್ರು, ಆದರೆ ನಮ್ಮ ರಾಜ್ಯದ ನದಿ ನೀರಿನ‌‌ ಹಂಚಿಕೆ ಬಗ್ಗೆ ಸಾಧ್ಯ ಆಗ್ಲಿಲ್ಲ. ನಾವು ಕಟ್ಟಿದ ಡ್ಯಾಂ, ನಮ್ಮ ರಾಜ್ಯದ ದುಡ್ಡಿದ್ದು. ನಮ್ಮ ರಾಜ್ಯದವರು ಕೇಳಿದ್ರೆ, ನಮ್ಮ ರಾಜ್ಯ ಸರ್ಕಾರಗಳಿಗೆ ಲೆಕ್ಕಕ್ಕೇ ಇಟ್ಟಿಲ್ಲ. ಇದು ತಾರ್ಕಿಕ ಹಂತಕ್ಕೆ ಹೋಗಬೇಕಾದರೆ ಕಠಿಣ ನಿರ್ಧಾರ ಮಾಡಬೇಕು. ಜೈಲಿಗೆ ಹಾಕ್ತರಾ ಹಾಕಲಿ, ಪ್ಯಾರಾ ಮಿಲಿಟರಿ ತರ್ಸ್ತಾರ ತರಸ್ಲಿ ಎಷ್ಟು ದಿನ ಅಂತ ದಬ್ಬಾಳಿಕೆ ಸಹಿಸೋದು. ನಮ್ಮ ಭೂಮಿ ಕಳ್ಕೊಂಡು ಡ್ಯಾಂ ಕಟ್ಟಿರೊದು ತಮಿಳುನಾಡಿಗೆ ನೀರು ಬಿಡೋದಕ್ಕಾ? ಪಕ್ಷಾತೀತವಾಗಿ ನಾನು ಕರೆ ಕೊಡ್ತೀನಿ. ಎಲ್ಲಾರು ಸೇರಿ ಒಂದು ಕಠಿಣ ನಿರ್ಧಾರಕ್ಕೆ ಬರಬೇಕು. ತಮಿಳು ನಾಡಿನವರು ಸೇರಿ ಬೇರೆಯವರ ಮೇಲೆ ಒತ್ತಡ ಹಾಕ್ತಾರೆ ಎಂದರು.

ಈ‌ ನಾಡಿನ ಜನತೆಗೆ ಕರೆ ಕೊಡ್ತೇನೆ. ನಮಗೆ ನಮ್ಮ ಸರ್ಕಾರ ಕೊಡ್ಲಿಲ್ಲ. ಉತ್ತರ ಕರ್ನಾಟಕ ಆಗಲಿ, ನಮ್ಮ ಭಾಗದವರೇ ಆಗಲಿ ನಾವು ಯಾರಿಗೋಸ್ಕರ ಇಲ್ಲಿ ರಾಜಕೀಯ ಮಾಡ್ತಾ ಇದ್ದೇವೆ. ಜನರ ಬದುಕು ಸರಿಪಡಿಸಬೇಕು ಅಂದ್ರೆ, ಕಠಿಣ ನಿರ್ಧಾರ ಮಾಡಬೇಕು. ಬ್ರಿಟಿಷರ ಕಾಲದಿಂದಲೂ ತಮಿಳುನಾಡಿನವರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾ ಇದ್ದಾರೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ