ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಲೀಕ್: ಪೊಲೀಸ ವಶಕ್ಕೆ ಮಾಗಡಿ ಕೆಂಪೇಗೌಡ ಖಾಸಗಿ ಪ್ರೌಢ ಶಾಲೆಯ ಗುಮಾಸ್ತ
ಪರೀಕ್ಷೆಯ ದಿನ ಬೆಳಗ್ಗೆ ಅಂದರೆ ಏಪ್ರಿಲ್ 11ರಂದು 10:30 ಗಂಟೆಗೆ ರಂಗೇಗೌಡ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಶಾಲೆಯ ವಾಟ್ಸ್ಯಾಪ್ ಗ್ರೂಪ್ ಒಂದಕ್ಕೆ ಹರಿಬಿಟ್ಟಿದ್ದಾರೆ. ಈ ಗ್ರೂಪಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೂ ಇದ್ದಾರೆ.
Ramanagara: ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿರುವ ಕೆಂಪೇಗೌಡ ಪ್ರೌಢ ಶಾಲೆಯಲ್ಲಿ (Kempegowda High School) ಈ ಬಾರಿಯ ಎಸ್ ಎಸ್ ಎಲ್ ಸಿ (SSLC) ಫಲಿತಾಂಶ ಶತ ಪ್ರತಿಶತ ಬಂದಿದೆ ಮಾರಾಯ್ರೇ. ಯಾಕೆ ಮತ್ತು ಹೇಗೆ ಗೊತ್ತಾ? ಈ ಖಾಸಗಿ ಪ್ರೌಢ ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ರಂಗೇಗೌಡರು (Rangegowda) ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿದ್ದಾರೆ. ಕ್ಕರ್ಕ್ ರಂಗೇಗೌಡರನ್ನು ಮಾಗಡಿ ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ಸಾಯಂಕಾಲ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ರಾಮನಗರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ಪ್ರಶ್ನೆ ಸೋರಿಕೆ ಬಗ್ಗೆ ಮಾಗಡಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ರಂಗೇಗೌಡರನ್ನು ಬಂಧಿಸಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗೌಡರು ವಿಜ್ಞಾನ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದರು.
ಪರೀಕ್ಷೆಯ ದಿನ ಬೆಳಗ್ಗೆ ಅಂದರೆ ಏಪ್ರಿಲ್ 11ರಂದು 10:30 ಗಂಟೆಗೆ ರಂಗೇಗೌಡ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಶಾಲೆಯ ವಾಟ್ಸ್ಯಾಪ್ ಗ್ರೂಪ್ ಒಂದಕ್ಕೆ ಹರಿಬಿಟ್ಟಿದ್ದಾರೆ. ಈ ಗ್ರೂಪಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೂ ಇದ್ದಾರೆ. ಗ್ರೂಪ್ ಹೆಸರು ಎಚ್ ಎಮ್ ಮಾಗಡಿ ಅಂತೆ. ಪರೀಕ್ಷೆ ಆರಂಭ ಆಗುತ್ತಿದ್ದಂತೆ ರಂಗೇಗೌಡರು ಪ್ರಶ್ನೆ ಪತ್ರಿಕೆಯನ್ನು ವಾಟ್ಸ್ಯಾಪ್ ಗ್ರೂಪ್ ಗೆ ಹಾಕಿದ್ದಾರೆ. ಬಯಲಿಗೆ ಬಂದಿರೋದು ಬರೀ ಒಂದು ವಿಷಯದ ಪ್ರಶ್ನೆ ಪತ್ರಿಕೆ ಮಾತ್ರ. ವಿಚಾರಣೆ ವೇಳೆ ಮತ್ಯಾವ ಸಂಗತಿಗಳು ಹೊರಬಿದ್ದಿವೆಯೋ?
ರಂಗೇಗೌಡರು ಪ್ರಶ್ನೆ ಪತ್ರಿಕೆಯನ್ನು ಎಚ್ ಎಮ್ ಕೂಡ ಇರುವ ವಾಟ್ಸ್ಯಾಪ್ ಗ್ರೂಪ್ ಗೆ ಕಳಿಸಿದ್ದಾರೆಂದರೆ, ಮುಖ್ಯೋಪಾಧ್ಯಾಯರೂ ಸೇರಿದಂತೆ ಶಾಲೆಯ ಉಳಿದ ಶಿಕ್ಷಕರು ಸಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಕಾದು ನೋಡಬೇಕಿರುವ ವಿಷಯವೇನೆಂದರೆ ಎಚ್ ಎಮ್ ಮತ್ತು ಮಿಕ್ಕಿದ ಗುರುವೃಂದದ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆಯೇ ಅನ್ನೋದು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.