Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ; ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ ಶಿಕ್ಷೆ ನೀಡಿದ ಮಾಲೀಕ

ರಾಮನಗರದಲ್ಲಿ ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಅಲ್ಲಿಗೆ ಆಟ ಆಡಲು ಬಂದಿದ್ದ ಬಾಲಕ ಮಾಲೀಕನ ಮೊಬೈಲ್ ಕದ್ದು ಪಾರಾರಿಯಾಗಲು ಯತ್ನಿಸಿದ್ದ. ಸದ್ಯ ಬಾಲಕನ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು ಮಾಲೀಕ ಬಾಲಕನನ್ನು ಕೂಡಿ ಹಾಕಿ ಅನ್ನ ನೀರು ಕೊಡದೆ ಹಿಂಸೆ ನೀಡಿದ್ದಾನೆ.

ರಾಮನಗರ; ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ ಶಿಕ್ಷೆ ನೀಡಿದ ಮಾಲೀಕ
ಕೊಠಡಿಯಲ್ಲಿ ಲಾಕ್ ಆದ ಬಾಲಕ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಆಯೇಷಾ ಬಾನು

Updated on: Nov 25, 2023 | 12:34 PM

ರಾಮನಗರ, ನ.25: ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿರುವ ಘಟನೆ ರಾಮನಗರದ (Ramanagara) ಯಾರಬ್ ನಗರದಲ್ಲಿ ನಡೆದಿದೆ. ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಆಟ ಆಡಲು ಬಂದ ಬಾಲಕ ಜೋಕಾಲಿ ಆಡುತ್ತಲೇ ಮಾಲೀಕನ ಮೊಬೈಲ್​ ಕದ್ದು (Mobile Theft) ಪರಾರಿಯಾಗಲು ಯತ್ನಿಸಿದ್ದ. ಆಗ ಮೊಬೈಲ್ ಎಲ್ಲಿ ಅಂತ ಹುಡುಕಾಡುತ್ತಿರುವಾಗ ಬಾಲಕನ ಜೇಬಿನಲ್ಲಿ ಮೊಬೈಲ್ ರಿಂಗ್ ಆಗಿದೆ. ಇದರಿಂದ ತನ್ನದೆ ಮೊಬೈಲ್ ಎಂದು ಗುರುತು ಹಿಡಿದ ಜೋಕಾಲಿ ಮಾಲೀಕ ಬಾಲಕನನ್ನು ಕೂಡಿ ಹಾಕಿದ್ದಾನೆ.

ಮುಬೈಲ್ ಕದ್ದ ಬಾಲಕನನ್ನು ಬಿಲ್​​ ಕೊಡುವ ಕೊಠಡಿಯಲ್ಲಿ ಕೂಡಿಹಾಕಿ ಸರಪಳಿಯಿಂದ ಲಾಕ್​ಮಾಡಿ, ಅನ್ನ, ನೀರು ಕೊಡದೆ ಶಿಕ್ಷೆ ನೀಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಬಾಲಕನ ತಪ್ಪಿಗೆ ಕ್ಷಮಿಸುವಂತೆ ಕೋರಿ ಬಿಟ್ಟು ಕಳುಹಿಸಲು ಮನವಿ ಮಾಡಿದ್ದಾರೆ. ಕೊನೆಗೆ ಸ್ಥಳೀಯರ ಮನವಿಯಂತೆ ಮಾಲೀಕ ಬಾಲಕನನ್ನ ಬಿಟ್ಟು ಕಳುಹಿಸಿದ್ದಾನೆ. ಬಾಲಕನಿಗೆ ಬುದ್ಧಿವಾದ ಹೇಳೋದು ಬಿಟ್ಟು ಕೂಡಿ ಹಾಕಿದ್ದು ಎಷ್ಟು ಸರಿ ಎಂಬ ಚರ್ಚೆ ಹುಟ್ಟುಕೊಂಡಿದೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪುಣೆ: ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿಯನ್ನು ಗುದ್ದಿ ಕೊಂದ ಮಹಿಳೆ!

ಹುಚ್ಚು ನಾಯಿ ಕಡಿದು 12ಕ್ಕೂ ಹೆಚ್ಚು ಜನರಿಗೆ ಗಾಯ

ರಕ್ಕಸ ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದೆ. ಮಹಿಳೆಯರು ವೃದ್ಧರು ಸೇರಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೆಲಮಂಗಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದೆ. ಹುಚ್ಚು ನಾಯಿ ದಾಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ.

ಹುಚ್ಚು ನಾಯಿ ದಾಳಿಯಿಂದ ಪರಮೇಶ್, ಚೌಡಪ್ಪ, ಕೃಷ್ಣ, ಚೌಡರೆಡ್ಡಿ, ಮೊಹಮ್ಮದ್‌, ಕಿಶೋರ್‌, ರಾಧಾ, ತನ್ವೀರ್‌ ಸೇರಿ 12ಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಎಲ್ಲರಿಗೂ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಶಶಿಧರ್ ಹುಚ್ಚು ನಾಯಿಯನ್ನ ಹಿಡಿಯಲು ಕಾರ್ಯಾಚರಣೆ ನಡೆಸಿದ್ರು. ನೆಲಮಂಗಲ ಟಿ.ಬಿ ಬಸ್ ನಿಲ್ದಾಣದ ಬಳಿ ಹುಚ್ಚು ನಾಯಿ ಪತ್ತೆಯಾಯ್ತು. ಈ ವೇಳೆ ರೊಚ್ಚಿಗೆದ್ದ ಸಾರ್ವಜನಿಕರ ದೊಣ್ಣೆಯಿಂದ ಹೊಡೆದು ಹುಚ್ಚು ನಾಯಿಯನ್ನ ಕೊಂದಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ