ರಾಮನಗರ: ಮಳೆ ಬಂದ್ರೆ ಶಾಲೆ ಸೋರುತ್ತೆ, ನಮ್ಮ ಶಾಲೆಯನ್ನು ಸರಿಪಡಿಸಿ ಕೊಡಿ ಎಂದು ಸಿಎಂಗೆ ಮಕ್ಕಳ ಮನವಿ

ಕಂಗೆಟ್ಟ ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಪೇಂಟಿಂಗ್ ಮಾಡ್ಸಿ, ಮಳೆ ಬಂದರೆ ಸೋರುತ್ತದೆ. ಇದರಿಂದ ಹುಳ-ಹುಪ್ಪಟೆಗಳು ತರಗತಿ ಒಳಗಡೆ ಬರುತ್ತದೆ. ಇಷ್ಟೇ ಅಲ್ಲದೆ, ಸುಣ್ಣ ಬಣ್ಣವಿಲ್ಲದೇ ಗೋಡೆಗಳು ಪಾಳು ಬಿದ್ದಂತಾಗಿದ್ದು, ಬ್ಲಾಕ್ ಬೋರ್ಡ್​ನಿಂದ ಸಿಮೆಂಟ್ ಕಿತ್ತಿ ಬಂದಿದೆ. ಮಧ್ಯದಿಂದ ಛಾವಣಿ ಸೀಳಿ ಹೋಗಿದೆ. ದಯವಿಟ್ಟು ಸರಿ ಮಾಡಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ರಾಮನಗರ: ಮಳೆ ಬಂದ್ರೆ ಶಾಲೆ ಸೋರುತ್ತೆ, ನಮ್ಮ ಶಾಲೆಯನ್ನು ಸರಿಪಡಿಸಿ ಕೊಡಿ ಎಂದು ಸಿಎಂಗೆ ಮಕ್ಕಳ ಮನವಿ
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 14, 2023 | 4:43 PM

ರಾಮನಗರ, ಸೆ.14: ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ಶಾಲೆ (Government School) ಗಳು ಮುಚ್ಚಿ ಹೋಗುತ್ತಿದ್ದು, ಬಡ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ರಾಮನಗರ (Ramanagara) ತಾಲೂಕಿನ ಬಿಡದಿ ಹೋಬಳಿಯ ಬಾನಾಂದೂರು ಗ್ರಾಮದ ಶಾಲೆಯಲ್ಲಿ, ಮಳೆ ಬಂದರೆ ಸಾಕು ಮೇಲ್ಛಾವಣಿ ಸೋರುತ್ತಿದ್ದು, ಗೋಡೆಗಳು ಬಣ್ಣ ಕಾಣದೆ ಪಾಳು ಬಿದ್ದಂತಾಗಿದೆ. ಇದರಿಂದ ಹಾವು, ಹುಳಗಳು ಕ್ಲಾಸ್​ ರೂಂ ಒಳಗಡೆ ಬರುತ್ತಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ದುರಸ್ಥಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಇನ್ನು ಇದರಿಂದ ಕಂಗೆಟ್ಟ ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಪೇಂಟಿಂಗ್ ಮಾಡ್ಸಿ, ಮಳೆ ಬಂದರೆ ಸೋರುತ್ತದೆ. ಇದರಿಂದ ಹುಳ-ಹುಪ್ಪಟೆಗಳು ತರಗತಿ ಒಳಗಡೆ ಬರುತ್ತದೆ. ಇಷ್ಟೇ ಅಲ್ಲದೆ, ಸುಣ್ಣ ಬಣ್ಣವಿಲ್ಲದೇ ಗೋಡೆಗಳು ಪಾಳು ಬಿದ್ದಂತಾಗಿದ್ದು, ಬ್ಲಾಕ್ ಬೋರ್ಡ್​ನಿಂದ ಸಿಮೆಂಟ್ ಕಿತ್ತಿ ಬಂದಿದೆ. ಮಧ್ಯದಿಂದ ಛಾವಣಿ ಸೀಳಿ ಹೋಗಿದೆ. ದಯವಿಟ್ಟು ನಮ್ಮ ಶಾಲೆಯನ್ನು ದುರಸ್ತಿ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮಕ್ಕಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ

ಇನ್ನು ಇಂತಹ ಘಟನೆಗಳು ಹೊಸದಲ್ಲ. ಜುಲೈ 19 ರಂದು ರಾಜ್ಯದಲ್ಲಿ ತಡವಾಗಿಯಾದರೂ ಮಳೆ ಆರಂಭವಾಗಿದ್ದು, ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಈ ಹಿನ್ನಲೆ ಸರ್ಕಾರಿ ಶಾಲೆಯ ಮಕ್ಕಳು ಯಾಕಾದರೂ ಮಳೆಗಾಲ ಆರಂಭವಾಯಿತೆಂದು ಚಿಂತಿಸುವಂತಾಗಿತ್ತು. ಹೌದು, ಸರ್ಕಾರಿ ಶಾಲೆಯ ಅನೇಕ ಕೊಠಡಿಗಳು ಸೋರುತ್ತಿದ್ದು, ಅನೇಕ ಕಡೆ ಬೀಳುವ ಹಂತದಲ್ಲಿತ್ತು. ಇನ್ನೂ ಅನೇಕ ಕಡೆ ಮೇಲ್ಛಾವಣಿ ಕುಸಿದು ಬೀಳುವ ಆತಂಕವಿದ್ದು, ಸರ್ಕಾರ ಹತ್ತಾರು ಭಾಗ್ಯಗಳನ್ನು ನೀಡುತ್ತಿದೆ. ಆದ್ರೆ, ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾತ್ರ ದೌರ್ಬಾಗ್ಯ ಕಾಡುತ್ತಿತ್ತು. ಅದರಂತೆ ಡಿಸಿಎಂ ತವರು ಜಿಲ್ಲೆ ರಾಮನಗರ ಜಿಲ್ಲೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ