AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೂ ಎಲ್ಲೂ ಹೋಗಿಲ್ಲ, ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಹೇಳೇ ಇಲ್ಲ: ಶಾಸಕ ಮಹೇಶ್ ಕುಮಟಳ್ಳಿ

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆ ಬಗ್ಗೆ ಎಲ್ಲೂ ಹೇಳಿಲ್ಲ. 2023ರವರೆಗೆ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಸಿಎಂ ಯಡಿಯೂರಪ್ಪನವರ ಜತೆಯಲ್ಲಿದ್ದೇವೆ ಎಂದಿದ್ದಾರೆ.

ಯಾರೂ ಎಲ್ಲೂ ಹೋಗಿಲ್ಲ, ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಹೇಳೇ ಇಲ್ಲ: ಶಾಸಕ ಮಹೇಶ್ ಕುಮಟಳ್ಳಿ
ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ
TV9 Web
| Edited By: |

Updated on: Jun 21, 2021 | 3:16 PM

Share

ಬೆಳಗಾವಿ: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ‘ಯಾರೂ ಸಹ ಬಾಂಬೆಗೆ ಹೋಗಿಲ್ಲ, ಎಲ್ಲವೂ ಊಹಾಪೋಹ. ಬಿಜೆಪಿ ಸರ್ಕಾರದಲ್ಲಿ ನಮಗೆ ಯಾವುದೇ ಅಸಮಾಧಾನ ಇಲ್ಲ’ ಎಂದು ತಿಳಿಸಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆ ಬಗ್ಗೆ ಎಲ್ಲೂ ಹೇಳಿಲ್ಲ. 2023ರವರೆಗೆ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಸಿಎಂ ಯಡಿಯೂರಪ್ಪನವರ ಜತೆಯಲ್ಲಿದ್ದೇವೆ. ನಾನಂತೂ ಕ್ಷೇತ್ರದಲ್ಲಿಯೇ ಇದ್ದೇನೆ. ಯಾರೂ ಸಹ ವದಂತಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ಮನವಿ ಮಾಡಿದ್ದಾರೆ.

ಮಾಜಿ ಸಚಿವ, ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಸದ್ಯ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಈ ಪ್ರಶ್ನೆಗಳಿಗೆ ರಾಜ್ಯದ ಸಾವಿರಾರು ರಾಜಕೀಯ ಆಸಕ್ತರ ಮನಸು ಉತ್ತರ ಹುಡುಕುತ್ತಿರಬಹುದು. ಅವರ ಸುತ್ತ ಸಿಡಿ ಪ್ರಕರಣ ಸುತ್ತಿಕೊಂಡಿರುವ ಈ ಹೊತ್ತಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲೂ ನಾಯಕತ್ವ ಬದಲಾವಣೆಯ ಪ್ರಹಸನಗಳು ಅತ್ಯಂತ ವಿಫುಲವಾಗಿ ನಡೆಯುತ್ತಿವೆ. ಯಡಿಯೂರಪ್ಪ ಈಗ ಮುಖ್ಯಮಂತ್ರಿ ಗಾದಿಯಲ್ಲಿ ಕೂರಲು ಕಾರಣರಲ್ಲಿ ಅವರೂ ಒಬ್ಬರು.  ಬಣ ರಾಜಕೀಯದಿಂದ ಇದೀಗ ಸಿಎಂ ಯಡಿಯೂರಪ್ಪ ಅವರ ಖುರ್ಚಿಯೂ ಕೊಂಚ ಅಲುಗಾಡುತ್ತಿದೆ ಎಂಬುದನ್ನು ಶಾಸಕ ರಮೇಶ್ ಜಾರಕಿಹೊಳಿ ಅರಿತಿದ್ದಾರೆ. ಆದರೂ ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅವರು ಮತ್ತೆ ಸಚಿವ ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.

ಸಿಡಿ ಪ್ರಕರಣದ ಪ್ರಗತಿಯ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿಗೆ ಅಸಮಾಧಾನ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ, ರಾಜ್ಯ ಬಿಜೆಪಿ ನಾಯಕರ ಬಗ್ಗೆ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ಇಂದು ಅಥವಾ ನಾಳೆ ಮುಂಬೈನಲ್ಲಿ ಮಹಾರಾಷ್ಟ್ರ ಬಿಜೆಪಿ ನಾಯಕ, ಅಲ್ಲಿಯ ವಿಪಕ್ಷ ನಾಯಕ ದೇವೆಂದ್ರ ಪಡ್ನವಿಸ್​ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಮತ್ತೆ ತಮ್ಮನ್ನು ಸೇರಿಸಿಕೊಳ್ಳುವಂತೆ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೆಂದ್ರ ಪಡ್ನವಿಸ್ ಮೂಲಕ ಒತ್ತಡ ಹೇರುವ ಕಾರ್ಯತಂತ್ರವನ್ನು ರಮೇಶ್ ಜಾರಕಿಹೊಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಒತ್ತಡ ಸೃಷ್ಟಿಸಲು ಅವರು ಕೆಲವು ಪ್ರಮುಖ ಕಾರಣಗಳನ್ನೇ ಹುಡುಕಿಕೊಂಡಿದ್ದಾರೆ.

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ; ಏಕಿಷ್ಟು ಪ್ರಾಮುಖ್ಯತೆ? ಈಗೇಕೆ ಸುದ್ದಿಯಲ್ಲಿದೆ?

(Ramesh Jarkiholi did not went mumbai he did not says about resignation says MLA Mahesh Kumathalli)

ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ