ಬೆಂಗಳೂರು: ಏಪ್ರಿಲ್ ಮಾಸಾಂತ್ಯದಿಂದ ಒಂದು ತಿಂಗಳ ಕಾಲ ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಮರು ಧಾರ್ಮಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುತ್ತಾರೆ. ಆದ್ರೆ ಕೊರೊನಾ ಸೋಂಕು ಇರುವುದರಿಂದ ರಂಜಾನ್ ತಿಂಗಳಲ್ಲಿ ಯಾರೂ ಮಸೀದಿಗೆ ಹೋಗಬಾರದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಇಲಾಖೆ ಆದೇಶಿಸಿದೆ.
ಇಫ್ತಾರ್ ಕೂಟ ಹಾಗೂ ಐದು ಹೊತ್ತಿನ ನಮಾಜ್ ಅನ್ನು ಮನೆಯಲ್ಲಿ ಮಾಡ್ಬೇಕು. ದರ್ಗಾ ಹಾಗೂ ಮಸೀದಿಗಳಲ್ಲಿ ಯಾವುದೇ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ.
ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ ಇಬ್ರಾಹಿಂ ಹೇಳಿದ್ದಾರೆ.