ತುಮಕೂರು ಹೊನ್ನುಡಿಕೆಯಲ್ಲಿ 50 ವರ್ಷದ ವ್ಯಕ್ತಿ ಸಾವು, ಕೊರೊನಾ ಶಂಕೆ?
ತುಮಕೂರು: ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ಮೂಲದ 50 ವರ್ಷದ ವ್ಯಕ್ತಿ ಜಿಲ್ಲೆಯ ಹೊನ್ನುಡಿಕೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತುಮಕೂರು ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಿಕಾ ಮಾಹಿತಿ ನೀಡಿದ್ದಾರೆ. ಹಾಸನದ ಈ ವ್ಯಕ್ತಿ ತುಮಕೂರಿನಲ್ಲಿ ವಾಸವಾಗಿದ್ದರು. ಹೊನ್ನುಡಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು. ಮೊನ್ನೆ ಉಸಿರಾಟ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ನಿನ್ನೆ ಮಧ್ಯಾಹ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ನಿನ್ನೆ ರಾತ್ರಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ರಕ್ತ, ಥ್ರೋಟ್ ಸ್ವ್ಯಾಬ್ ಮಾದರಿಯನ್ನು ಮುಂದಿನ ಪರೀಕ್ಷೆಗೆ ಕಳಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ […]
ತುಮಕೂರು: ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ಮೂಲದ 50 ವರ್ಷದ ವ್ಯಕ್ತಿ ಜಿಲ್ಲೆಯ ಹೊನ್ನುಡಿಕೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತುಮಕೂರು ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಿಕಾ ಮಾಹಿತಿ ನೀಡಿದ್ದಾರೆ.
ಹಾಸನದ ಈ ವ್ಯಕ್ತಿ ತುಮಕೂರಿನಲ್ಲಿ ವಾಸವಾಗಿದ್ದರು. ಹೊನ್ನುಡಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು. ಮೊನ್ನೆ ಉಸಿರಾಟ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ನಿನ್ನೆ ಮಧ್ಯಾಹ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ನಿನ್ನೆ ರಾತ್ರಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ರಕ್ತ, ಥ್ರೋಟ್ ಸ್ವ್ಯಾಬ್ ಮಾದರಿಯನ್ನು ಮುಂದಿನ ಪರೀಕ್ಷೆಗೆ ಕಳಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು DHO ಡಾ.ಚಂದ್ರಿಕಾ ತಿಳಿಸಿದ್ದಾರೆ.