ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್, ಇಲ್ಲಿದೆ ದರ ವಿವರ

ಕರ್ನಾಟಕದಲ್ಲಿ ಸರಿಯಾಗಿ ಮಳೆಯಾಗದೇ ಬೆಳೆ ಇಲ್ಲದೇ ಬರಗಾಲ ಆವರಸಿದೆ. ಇನ್ನೊಂದೆಡೆ ಕಚ್ವಾ ವಸ್ತುಗಳ ಕೊರತೆ ಹಿನ್ನೆಲೆ ಈಗಾಗಲೇ ಅಕ್ಕಿ ಬೆಲೆ ಏರಿಕೆ ಆಗಿತ್ತು.ಇದೀಗ ಮತ್ತೆ ಇಂದಿನಿಂದ ಅಕ್ಕಿ ದರ ಏರಿಕೆ ಆಗಿದ್ದು, ಈ ಬಾರಿ ಒಂದು ‌ಕ್ವಿಂಟಾಲ್ ಮೇಲೆ ಒಂದು ಸಾವಿರ ರುಪಾಯಿಯಷ್ಟು ಏರಿಕೆ ಆಗಿದೆ. ಇದಕ್ಕೆ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ‌.

ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್, ಇಲ್ಲಿದೆ ದರ ವಿವರ
Rice
Edited By:

Updated on: Sep 15, 2026 | 9:06 PM

ಬೆಂಗಳೂರು, (ಸೆಪ್ಟೆಂಬರ್ 15): ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಡ್ಯಾಮ್ ಗಳಲ್ಲಿ ನೀರಿಲ್ಲ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೇ ಬೆಳೆಗಳು ಬಂದಿಲ್ಲ. ಇದರಿಂದ ಅಕ್ಕಿ ಬೆಲೆ ನಿರಂತರವಾಗಿ ಏರಿಕೆ ಆಗ್ತಾನೆ ಇದೆ. ಈಗಾಗಲೇ ಎರಡು ಬಾರಿ ಅಕ್ಕಿ ದರ ಏರಿಕೆ ಆಗಿದ್ದು, ಇದೀಗ ಇಂದಿನಿಂದ ಮತ್ತೆ ಅಕ್ಕಿ ದರ ಏರಿಕೆ ಆಗಿದೆ. ಈ ಬಾರಿ ಒಂದು ಕೆಜಿ ನಾರ್ಮಲ್ ಅಕ್ಕಿ ಮೇಲೆ 5 ರಿಂದ 10 ರುಪಾಯಿಯಷ್ಟು ಏರಿಕೆ ಆಗಿದ್ರೆ, ಕ್ವಾಲಿಟಿ ಅಕ್ಕಿ ಮೇಲೆ 10 ರಿಂದ 20 ರುಪಾಯಿ ಏರಿಕೆ ಆಗಿದ್ರೆ, ಒಂದು ಕ್ವಿಂಟಾಲ್ ಮೇಲೆ ಒಂದು ಸಾವಿರ ‌ರುಪಾಯಿಯಷ್ಟು ಏರಿಕೆ ಆಗಿದೆ. ನಾರ್ಮಲ್ ಅಕ್ಕಿ ಚೀಲದ ಮೇಲೆ 200 ರುಪಾಯಿ, ಕ್ವಾಲಿಟಿ ಅಕ್ಕಿ ಮೇಲೆ 250 ರಿಂದ 300 ಏರಿಕೆಯಾಗಿದೆ.

ಇನ್ನೂ ಹೊಸ ಅಕ್ಕಿ ದರ ಇಂದಿನಿಂದಲೇ ಏರಿಕೆ ಆಗಿದ್ದು,ಹೋಲ್ ಸೇಲ್ ನಲ್ಲಿ ಒಂದು ಕೆಜಿ ಗೆ 10 ರಿಂದ 20 ರುಪಾಯಿ ಏರಿಕೆ ಆಗಿದ್ರೆ,ರಿಟೇಲ್ ನಲ್ಲಿ ಒಂದು ಕೆಜಿ ಮೇಲೆ 20 ರಿಂದ 40 ರುಪಾಯಿ ಏರಿಕೆ ಆಗಲಿದ್ಯಂತೆ. ಮಳೆ ಸರಿಯಾಗಿ ಬಾರದ ಹಿನ್ನೆಲೆ, ಮೂರು ತಿಂಗಳಲ್ಲಿ ಮೂರನೇ ಬಾರಿಗೆ ಅಕ್ಕಿ ಬೆಲೆ ಏರಿಕೆ ಆಗಿದ್ದು, ಅಕ್ಟೋಬರ್ ನಲ್ಲಿ ಮತ್ತೆ ದರ ಏರಿಕೆ ಆಗಲಿದೆ ಅಂತಿರೋ ಹೋಲ್ ಸೇಲ್ ವ್ಯಾಪಾರಿಗಳು.

ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸಚಿವ ರಿಜ್ವಾನ್ ಆರ್ಷದ್, ಬರಲಿದೆ ಮೊಬೈಲ್ ಆ್ಯಪ್

ಕಚ್ಚಾ ವಸ್ತುಗಳ ಕೊರತೆಯಿಂದ ಅಕ್ಕಿ ಮೇಲೆ ದರ‌ ಏರಿಕೆ ಆಗಲಿದ್ಯಂತೆ. ‌ಇತ್ತ ಭಾರತದಿಂದ ವಿದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸಪ್ಲೈ ಆಗುತ್ತಿದೆ. ಅಲ್ಲಿಂದ ಬೇರೆಬೇರೆ ದೇಶಗಳಿಗೆ ಅಕ್ಕಿ ಸಪ್ಲೈ ಆಗ್ತಿದ್ದು, ಇದರಿಂದ ಇಲ್ಲಿ ಅಕ್ಕಿ ಕೊರತೆ ಉಂಟಾಗುತ್ತಿದೆ. ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಕ್ಕಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಗ್ರಾಹಕರು ಒಂದು ಚೀಲದ ಮೇಲೆ 250 ರಿಂದ 300 ರುಪಾಯಿ ವರೆಗೆ ದರ ಏರಿಕೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಅಕಾಲಿಕ ಮಳೆ ಮತ್ತು ಕಚ್ಚಾವಸ್ತುಗಳ ಕೊರತೆಯಿಂದ ಮೂರು ತಿಂಗಳಲ್ಲಿ ಮೂರು ಬಾರಿ ದರ ಏರಿಕೆ ಆಗಿದ್ದು, ಮತ್ತೆ ದರ ಏರಿಕೆ ಆಗಲಿದೆ ಅನ್ನೋದು ಗ್ರಾಹಕರಿಗೆ ನುಂಗಲಾರದ ತುತ್ತಾಗಲಿರುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us