AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopa vs Rohini Sindhuri: ಡಿ ರೂಪಾಗೆ ಹೈಕೋರ್ಟಿನಲ್ಲಿ ಮುನ್ನಡೆ, ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾಜ್ಞೆ ವಜಾ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಣ ಕಾನೂನು ಸಮರದಲ್ಲಿ ಇದೀಗ ರೂಪಾ ಅವರಿಗೆ ಹೈಕೋರ್ಟ್​ನಲ್ಲಿ ಮುನ್ನಡೆಯಾಗಿದೆ.

Roopa vs Rohini Sindhuri: ಡಿ ರೂಪಾಗೆ ಹೈಕೋರ್ಟಿನಲ್ಲಿ ಮುನ್ನಡೆ, ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾಜ್ಞೆ ವಜಾ
ಡಿ ರೂಪಾ (ಎಡಚಿತ್ರ) ರೋಹಿಣಿ ಸಿಂಧೂರಿ (ಬಲಚಿತ್ರ)
Ganapathi Sharma
|

Updated on:Apr 11, 2023 | 5:02 PM

Share

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ (Rohini Sindhuri) ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ (D Roopa) ನಡುವಣ ಕಾನೂನು ಸಮರದಲ್ಲಿ ಇದೀಗ ರೂಪಾ ಅವರಿಗೆ ಹೈಕೋರ್ಟ್​ನಲ್ಲಿ ಮುನ್ನಡೆಯಾಗಿದೆ. ತಮ್ಮ ವಿರುದ್ಧ ಮಾತನಾಡಬಾರದು ಎಂದು ರೋಹಿಣಿ ಸಿಂಧೂರಿ ತಡೆಯಾಜ್ಞೆ ತಂದಿದ್ದ ವಿಚಾರವಾಗಿ ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ರೋಹಿಣಿ ಸಿಂಧೂರಿ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಬೆಂಗಳೂರು ಸಿವಿಲ್ ನ್ಯಾಯಾಲಯ ಡಿ. ರೂಪಾ ಹಾಗೂ ಇತರರ ವಿರುದ್ಧ ಏಕ ಪಕ್ಷಿಯ ಪ್ರತಿಬಂಧಕ ಆದೇಶ ನೀಡಿತ್ತು. ಇದನ್ನು ಡಿ. ರೂಪಾ ಅವರು ಹೈಕೋರ್ಟ್​​​ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸಿವಿಲ್ ನ್ಯಾಯಲಯದ ಆದೇಶವನ್ನು ಪ್ರಶ್ನಿಸಿದ್ದರು. ಇದನ್ನು ಪುರಸ್ಕರಿಸಿರುವ ಹೈಕೋರ್ಟ್, ರೂಪಾರವರ ರಿಟ್ ಅರ್ಜಿ ಪುರಸ್ಕರಿಸಿ, ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಡಿ. ರೂಪರವರ ವಿರುದ್ಧ ಈಗ ಯಾವುದೇ ಪ್ರತಿಬಂಧಕ ಆದೇಶ ಇರುವುದಿಲ್ಲ. ಡಿ. ರೂಪಾ ಅವರ ಪರವಾಗಿ ಶ್ರೀ ಮಧುಕರ್ ದೇಶಪಾಂಡೆ ವಾದ ಮಂಡಿಸಿದ್ದರು.

Rohini Vs Roopa: ರೂಪಾ ವಿರುದ್ಧ FIR ದಾಖಲಿಸಲು ರೋಹಿಣಿ ಸಿಂಧೂರಿ ಪಟ್ಟು, ಪೊಲೀಸ್ ಆಯುಕ್ತರಿಗೆ ಪತ್ರ

ತಡೆಯಾಜ್ಞೆ ಸಿಕ್ಕ 24 ಗಂಟೆಗಳಲ್ಲಿ ಆದೇಶ ತಲುಪಿಸಲು ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕಾಗಿ ತಡೆಯಾಜ್ಞೆ ತೆರವಾಗಿದೆ. ಈ ಪ್ರಕರಣ ಇಂದು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್​ ಕುಮಾರ್​ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Tue, 11 April 23