AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಅಧಿಕಾರಿಗಳಿಗೆ ನೀಡಲು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪ್ರತಿ ತಿಂಗಳು 8 ಕೋಟಿ ರೂ. ಸಂಗ್ರಹ: ಬಿಜೆಪಿ ಶಾಸಕ ಆರೋಪ

ಯಲಹಂಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪ್ರತಿ ತಿಂಗಳು 8 ಕೋಟಿ ರೂ. ಸಂಗ್ರಹವಾಗುತ್ತದೆ. ಈ ಹಣ ಮೇಲಧಿಕಾರಿಗಳಿಗೆ ವರ್ಗಾವಣೆಯಾಗುತ್ತಿದೆ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್‌ ವಿಶ್ವನಾಥ್‌ ಆರೋಪಿಸಿದರು. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಅಧಿಕಾರಿಗಳಿಗೆ ನೀಡಲು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪ್ರತಿ ತಿಂಗಳು 8 ಕೋಟಿ ರೂ. ಸಂಗ್ರಹ: ಬಿಜೆಪಿ ಶಾಸಕ ಆರೋಪ
ಎಸ್‌ಆರ್‌ ವಿಶ್ವನಾಥ್‌
TV9 Web
| Updated By: ವಿವೇಕ ಬಿರಾದಾರ|

Updated on: Jul 23, 2024 | 11:37 AM

Share

ಬೆಂಗಳೂರು, ಜುಲೈ 23: ಯಲಹಂಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ (Yalahanka Sub-Registrar Office) ಪ್ರತಿ ತಿಂಗಳು 8 ಕೋಟಿ ರೂ. ಸಂಗ್ರಹವಾಗುತ್ತದೆ. ಈ ಹಣ ಮೇಲಧಿಕಾರಿಗಳಿಗೆ ವರ್ಗಾವಣೆಯಾಗುತ್ತಿದೆ ಎಂದು ಯಲಹಂಕದ ಬಿಜೆಪಿ (BJP) ಶಾಸಕ ಎಸ್‌ಆರ್‌ ವಿಶ್ವನಾಥ್‌ (SR Vishwanath) ಆರೋಪಿಸಿದರು. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (krishna byregowda) ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ಯಲಹಂಕದ ಸುತ್ತಮುತ್ತ ಸುಮಾರು 100ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳಿವೆ. ಯಲಹಂಕ ಸುತ್ತಮುತ್ತಲಿನ ಕಂದಾಯ ಇಲಾಖೆಯ 100 ಎಕರೆ ಕೃಷಿ ಭೂಮಿಯನ್ನು ಅಕ್ರಮವಾಗಿ ವಾಣಿಜ್ಯ ಅಥವಾ ನಿವಾಸಕ್ಕಾಗಿ ಪರಿವರ್ತನೆ ಮಾಡಲಾಗಿದೆ. ಈ ಅಕ್ರಮ ಬಡಾವಣೆಗಳು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲ. ಮತ್ತು ಈ ಬಡಾವಣೆಗಳಲ್ಲಿ ವಾಸಿಸುವವರು ನಖಲಿ ದಾಖಲೆಗಳನ್ನು ಹೊಂದಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಸಬ್‌ ರಿಜಿಸ್ಟ್ರಾರ್‌ ಅಧಿಕಾರಿಗಳು ಪ್ರತಿ ನೋಂದಣಿಗೆ 35,000 ರೂ. ಸಂಗ್ರಹಿಸುತ್ತಾರೆ. ಈ ಮೂಲಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಪ್ರತಿ ತಿಂಗಳು ಸುಮಾರು 8 ಕೋಟಿ ರೂ. ಹಣ ಅಕ್ರಮವಾಗಿ ಹರಿದು ಬರುತ್ತಿದೆ. ಈ ಹಣವನ್ನು ಉನ್ನತಾಧಿಕಾರಿಗಳಿಗೆ ಪಾವತಿಸಲಾಗುತ್ತಿದೆ. ಆ ಉನ್ನತಾಧಿಕಾರಿಗಳು ಯಾರೆಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಅಧಿವೇಶನ ವೇಳೆ ಮಧ್ಯಾಹ್ನದ ಕಿರು ನಿದ್ರೆಗಾಗಿ ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ

ಈ ಬಡಾವಣೆಗಳಲ್ಲಿ 20 ಅಡಿ ಅಗಲದ ರಸ್ತೆಗಳಿದ್ದು, ಯಾವುದೇ ಸೌಕರ್ಯಗಳಿಲ್ಲ. ನಾವು ಮತ ​​ಯಾಚನೆ ಮಾಡಲು ಅಲ್ಲಿಗೆ ಹೋಗುವುದರಿಂದ, ನಮ್ಮ ಶಾಸಕರ ನಿಧಿಯಿಂದ ಸೌಕರ್ಯಗಳನ್ನು ಒದಗಿಸಲು ಖರ್ಚು ಮಾಡುತ್ತೇವೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಕಂದಾಯಲ ಇಲಾಖೆ ಸಚಿವ ಕೃಷ್ಣ ಬೈರೇಗೌಡ, ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್‌ ರಿಜಿಸ್ಟ್ರಾರ್‌ಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಒಂದೇ ಸ್ಥಳದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುವವರನ್ನು ನಗರದ ಹೊರಗೆ ವರ್ಗಾಯಿಸಬೇಕು ಎಂದು ನಾವು ಸೂಚನೆಗಳನ್ನು ರವಾನಿಸಿದ್ದೇವೆ. ಯಾವುದೇ ಪರಿವರ್ತನೆ ಪ್ರಕ್ರಿಯೆಗಳಿಲ್ಲದೆ ಕೃಷಿ ಭೂಮಿಯನ್ನು ಕಂದಾಯ ಬಡಾವಣೆಗಳಾಗಿ ಪರಿವರ್ತಿಸಿರುವುದು ನಿಜ. ಅನೇಕರು ಇದನ್ನು ಅಕ್ರಮವಾಗಿ ಮತ್ತು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ