ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ
ಕೊನೇ ಕ್ಷಣದಲ್ಲಿ ಮೈತ್ರಿಯಾಗಲು ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಕಾರಣ. ಅವರು ಚುನಾವಣೆಗೆ ಬಂದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಮೈತ್ರಿ ಗೊಂದಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ ಸಾ.ರಾ.ಮಹೇಶ್ ಮೈಸೂರು ಜಿಲ್ಲೆಯಿಂದಲೇ ಜನತಾದಳದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿದ್ದೇವೆ. ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ ಎಂದರು.
ಮೈತ್ರಿ ಬಗ್ಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಹೀಗಿದ್ದಾಗ ಇದಕ್ಕೆ ತನ್ವೀರ್ ಸೇಠ್ ಹೇಗೆ ಕಾರಣರಾಗುತ್ತಾರೆ. ತನ್ವೀರ್ ಸೇಠ್ನನ್ನು ಅವರ ಪಕ್ಷ ಉಚ್ಚಾಟನೆ ಮಾಡಿದರೆ ನಾವು ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅವರೊಬ್ಬರು ಅಲ್ಪ ಸಂಖ್ಯಾತ ಸಮುದಾಯದ ಮುಖಂಡ. ಹೀಗಾಗಿ ತನ್ವೀರ್ ಸೇಠ್ಗೆ ಜೆಡಿಎಸ್ ಪಕ್ಷಕ್ಕೆ ಸದಾ ಸ್ವಾಗತ ಎಂದು ಹೇಳಿದರು. ಇನ್ನು ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಕ್ಕೆ ನಾವು ನಿರ್ಧಾರ ಮಾಡಿರಲಿಲ್ಲ. ಪಕ್ಷೇತರರ ಜೊತೆ ಸೇರಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೆವು ಎಂದು ಹೇಳಿದ ಸಾ.ರಾ.ಮಹೇಶ್, ಪಕ್ಷೇತರರ ಜೊತೆ ಸ್ವತಂತ್ರವಾಗಿ ಪಕ್ಷದ ಬಲ ತೋರಿಸಲು ಮುಂದಾಗಿದ್ದೆವು. ಆದರೆ ಮತ್ತೆ ಡಿ.ಕೆ.ಶಿವಕುಮಾರ್ ಕರೆ ಮಾಡಿದ್ದರು. ನಾನು ಕಾಲ್ ರಿಸೀವ್ ಮಾಡಿರಲಿಲ್ಲ. ಬಳಿಕ ತನ್ವೀರ್ ಸೇಠ್ ಮೆಸೇಜ್ ಮಾಡಿದ್ದರು. ಆಗ ಮತ್ತೆ ಡಿ.ಕೆ. ಶಿವಕುಮಾರ್ ಕರೆ ಮಾಡಿದಾಗ ಕುಮಾರಸ್ವಾಮಿ ಮಾತನಾಡಿದರು. ಕರೆಯಲ್ಲಿ ಮೈತ್ರಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು ಎಂದು ತಿಳಿಸಿದರು.
ಇದನ್ನೂ ಓದಿ
ನಾಳೆಯಿಂದ ಆನ್ಲೈನ್, ಆಫ್ಲೈನ್ ಕ್ಲಾಸ್ ಸಂಪೂರ್ಣ ಬಂದ್ -ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್
ಮೈಸೂರು ಪಾಲಿಕೆ ಚುನಾವಣೆ; ಮೈತ್ರಿಯ ಹಿಂದಿನ ಸತ್ಯ ಬಿಚ್ಚಿಟ್ಟ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್