AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶಾ ಫೌಂಡೇಶನ್​ನಿಂದಲೇ ರೈತ ಉತ್ಪಾದಕ ಕಂಪನಿಗಳ ಆರಂಭ: ಸದ್ಗುರು

ಇಂದು ಚಿಕ್ಕಬಳ್ಳಾಪುರ ತಾಲೂಕಿನ ಈಶಾ ಫೌಂಡೇಶನ್​​ನಲ್ಲಿ ಸುದ್ದಿಗೋಷ್ಠಿ ಮಾಡಿದ ಜಗ್ಗಿ ವಾಸುದೇವ್ ಅವರು, ಈಶಾ ಫೌಂಡೇಶನ್ ದಕ್ಷಿಣ ಭಾರತದಲ್ಲಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಗ್ರಾಮೀಣ ಜನರಲ್ಲಿ ಉತ್ಸಾಹ ತುಂಬಲು ಮತ್ತು ಮದ್ಯವ್ಯಸನವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಶ್ರೀಗಂಧ ಬೆಳೆಯಲು ರೈತರಿಗೆ ಉತ್ತೇಜನ ನೀಡುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ.

ಈಶಾ ಫೌಂಡೇಶನ್​ನಿಂದಲೇ ರೈತ ಉತ್ಪಾದಕ ಕಂಪನಿಗಳ ಆರಂಭ: ಸದ್ಗುರು
ಈಶಾ ಫೌಂಡೇಶನ್​ನಿಂದಲೇ ರೈತ ಉತ್ಪಾದಕ ಕಂಪನಿಗಳ ಆರಂಭ: ಸದ್ಗುರು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 22, 2024 | 8:27 PM

Share

ಚಿಕ್ಕಬಳ್ಳಾಪುರ, ಡಿಸೆಂಬರ್​ 22: ಈಶಾ ಫೌಂಡೇಶನ್​ನಿಂದಲೇ (Isha Foundation) ರೈತ ಉತ್ಪಾದಕ ಕಂಪನಿಗಳ ಆರಂಭ ಮಾಡಲಾಗಿದೆ. ಆ ಮೂಲಕ ರೈತರಿಗೆ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡುತ್ತೇವೆ. ಸದ್ಯಕ್ಕೆ ಹತ್ತು ಸಾವಿರ ರೈತರಿಗೆ ಮಾರ್ಗದರ್ಶನ ಮಾಡಲು ಸನ್ನದ್ದವೆಂದು ಸದ್ಗುರು ಜಗ್ಗಿ ವಾಸುದೇವ್ ಅವರು ತಿಳಿಸಿದ್ದಾರೆ.

ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ‌ ಬಳಿಯ ಆದಿಯೋಗಿ ಈಶಾ ಕೇಂದ್ರಕ್ಕೆ ಇಂದು ಸದ್ಗುರು ಜಗ್ಗಿ ವಾಸುದೇವ್ ಅವರು ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಈಶಾ ಸಂಸ್ಥೆ ವತಿಯಿಂದ ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್; ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್

ಗ್ರಾಮೀಣ ಭಾಗದ ಜನ ಮದ್ಯವ್ಯಸನಿಗಳಾಗುತ್ತಿದ್ದಾರೆ. ಕೃಷಿ ಕಾಯಕ ಮಾಡಿ ಮದ್ಯ ಸೇವನೆ ಮಾಡಿ ಮಲಗಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಉತ್ಸಾಹ ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದವರಿಗೆ ಗ್ರಾಮೋತ್ಸವ ಕ್ರೀಡೆಗಳನ್ನ ಆಯೋಜನೆ ಮಾಡುವ ಮೂಲಕ ಮದ್ಯ ವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ. ಇನ್ನೂ ದೇಶದಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಬೇಕಿದೆ. ಲಾಭವಿಲ್ಲದ ವಿಚಾರಗಳ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ. ಎಲೆಕ್ಟ್ರಿಕಲ್​ ವಾಹನಗಳಿಂದ ಪರಿಸರಕ್ಕೆ ಅನುಕೂಲವಿಲ್ಲ. ನನ್ನ ಹೇಳಿಕೆ ವಿವಾದ ಆದರೂ ಪರವಾಗಿಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲೆಕ್ಟ್ರಿಕಲ್​ ವಾಹನಗಳು ಸೂಕ್ತ ಎಂದು ಹೇಳಿದ್ದಾರೆ.

ಭೂಮಿ ಮೇಲೆ ಮನುಷ್ಯನಿಗಿಂತ ಅದ್ಬುತ ಯಾವುದು ಇಲ್ಲ

ಶ್ರೀಗಂಧದ ನಾಡು ಕರ್ನಾಟಕ ಆಸ್ಟ್ರೇಲಿಯಾದಿಂದ ಶ್ರೀಗಂಧ ಆಮದು ಮಾಡಿಕೊಳ್ತಿದ್ದೇವೆ. ರೈತರು ಹೆಚ್ಚಾಗಿ ಶ್ರೀಗಂಧ ಬೆಳೆಯಲು ಸರ್ಕಾರ ಉತ್ತೇಜನ ನೀಡಬೇಕಿದೆ. ಯುವಕ ಯುವತಿಯರಲ್ಲಿ ಜೀವನ ನಿರ್ವಹಣೆ ಮಾಹಿತಿ ಕೊರತೆ ಇದೆ. ಜೀವನ ನಿರ್ಹವಣೆ ಬಗ್ಗೆ ಆಶಕ್ತಿ ವಹಿಸಿದ್ದೇವೆ. ಮಿರಾಕಲ್ ಅನ್ನೊ ಆ್ಯಪ್​ ರೆಡಿ ಮಾಡುತ್ತಿದ್ದೇವೆ. 300 ಕೋಟಿ ಜನರಿಗೆ ತಲುಪಲು ಯತ್ನಿಸುತ್ತೇವೆ. ಭೂಮಿ ಮೇಲೆ ಮನುಷ್ಯನಿಗಿಂತ ಅದ್ಬುತ ಯಾವುದು ಇಲ್ಲ. ಸ್ವರ್ಗ, ನರಕ, ದೇವರು, ದೆವ್ವ ಎಲ್ಲಾ ಮನುಷ್ಯನಲ್ಲೇ ಇದೆ ಎಂದಿದ್ದಾರೆ.

ಇದನ್ನೂ ಓದಿ: ಇಶಾ ಫೌಂಡೇಶನ್​ ವತಿಯಿಂದ ಚಿಕ್ಕಬಳ್ಳಾಪುರ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆಗೆ ತಡೆ ನೀಡಿದ ಹೈಕೋರ್ಟ್, ಉದ್ಘಾಟನೆಗೆ ಉಪರಾಷ್ಟ್ರಪತಿ ಬರುವುದು ಡೌಟ್

ಇನ್ನೂ ಇದೇ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಸದ್ಗುರು, ಬಾಂಗ್ಲಾದೇಶ ಉದ್ಬವವಾಗಲು ಭಾರತದ ಕೊಡುಗೆ ಮರೆಯುವಂತಿಲ್ಲ. ಭಾರತದ ಪಕ್ಕದಲ್ಲೇ ಮಿತ್ರ ದೇಶವಾಗಿ ಇರಲಿ ಅಂತ ಸಹಕಾರ ನೀಡಿದೆ. ಆದರೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು. ಸದ್ಗುರು ಜಗ್ಗಿವಾಸುದೇವ್ ಆಗಮನದ ಹಿನ್ನಲೆ ಈಶಾ ಸನ್ನಿಧಾನಕ್ಕೆ ಸಹಸ್ರಾರು ಜನ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Sun, 22 December 24