ವಸತಿ ಶಾಲೆಯಲ್ಲಿ ಆರ್​ಎಸ್​ಎಸ್​ ಪ್ರಶಿಕ್ಷಾ ವರ್ಗ ಆಯೋಜನೆಗೆ ಎಸ್​​ಎಫ್​ಐ ವಿರೋಧ

ವಸತಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪ್ರಶಿಕ್ಷಾ ವರ್ಗ ಆಯೋಜನೆಗೆ ಎಸ್​​ಎಫ್​ಐ ಸೇರಿದಂತೆ ಕೆಲವು ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅದರಂತೆ ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ ಮತ್ತು ಅಕ್ಷಯ ಸೇವಾ ಪ್ರತಷ್ಠಾನದ ಹೆಸರಲ್ಲಿ ಅನುಮತಿ ನೀಡಲಾಗಿದೆ.

ವಸತಿ ಶಾಲೆಯಲ್ಲಿ ಆರ್​ಎಸ್​ಎಸ್​ ಪ್ರಶಿಕ್ಷಾ ವರ್ಗ ಆಯೋಜನೆಗೆ ಎಸ್​​ಎಫ್​ಐ ವಿರೋಧ
ವಸತಿ ಶಾಲೆಯಲ್ಲಿ ಆರ್​ಎಸ್​ಎಸ್​ ಪ್ರಶಿಕ್ಷಾ ವರ್ಗ ಆಯೋಜನೆಗೆ ಎಸ್​​ಎಫ್​ಐ ವಿರೋಧ
Follow us
TV9 Web
| Updated By: Rakesh Nayak Manchi

Updated on:Oct 11, 2022 | 8:39 AM

ಕೋಲಾರ: ವಸತಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪ್ರಶಿಕ್ಷಾ ವರ್ಗ ಆಯೋಜನೆಗೆ ಎಸ್​​ಎಫ್​ಐ ಸೇರಿದಂತೆ ಕೆಲವು ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್​ಎಸ್​ಎಸ್​ ವತಿಯಿಂದ ಪ್ರಶಿಕ್ಷಾ ವರ್ಗ ನಡೆಸಲು ಮುಂದಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲೂ ಆಯೋಜಿಸಲು ಮುಂದಾಗಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅನುಮತಿ ಕೂಡ ನೀಡಿದ್ದಾರೆ. ಈ ನಡುವೆ ವಿರೋಧ ವ್ಯಕ್ತವಾದ ಹಿನ್ನೆಲೆ ಕೋಲಾರದಲ್ಲಿ ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ ಶಿಬಿರಕ್ಕೆ ಅನುಮತಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಿಷ್ಠಾನ ಹೆಸರಲ್ಲಿ ಅನುಮತಿ ನೀಡಲಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕೂತಾಂಡ್ಲಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂದು ವಾರಗಳ ಕಾಲ‌ ನಡೆಯುವ ಪ್ರಶಿಕ್ಷಾ ವರ್ಗ ಆಯೋಜನೆ ಸುದ್ದಿ ತಿಳಿದ ಎಸ್​ಎಫ್​ಐ ಸೇರಿದಂತೆ ಕೆಲವು ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದವು. ಅದರಂತೆ ಆರ್​ಎಸ್​ಎಸ್​ ಬದಲು ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ ಮತ್ತು ಅಕ್ಷಯ ಸೇವಾ ಪ್ರತಷ್ಠಾನದ ಹೆಸರಲ್ಲಿ ಅನುಮತಿ ನೀಡಲಾಗಿದೆ. ಯುವಕರಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ತರಬೇತಿ ನೀಡುವುದಾಗಿ ಉಲ್ಲೇಖ ಅದರಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 am, Tue, 11 October 22